ಪುಟ:ವಿದುರನೀತಿ ಮತ್ತು ನಾರದನೀತಿ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ಸುರುಷನು ಬಂದ ಕಾಲದಲ್ಲಿ ಪೀಠವನ್ನು ಕೊಟ್ಟು ಪಾದ ಪ್ರಕ್ಷಾಲನೆ ಮಾಡಿ ಕುಶಲ ಪ್ರಶ್ನೆ ಮಾಡಿ ತನ್ನ ಸ್ಥಿತಿಯನ್ನು ಆ ಸುರುಷನಿಗೆ ತಿಳಿಸಿ ಧೀರನಾಗಿ ಅನ್ನವನ್ನು ಕೊಡಬೇಕು. ಯಾರ ಮನೆಯಲ್ಲಿ ಮಂತ್ರವೀತ್ರರಾದವರು ಲೋಭ, ಭಯ, ಅರ್ಥ, ಕಾರ್ಪಣ್ಯಗಳಿಂದ ಯಾರಿಂದ ಪೂಜೆಮಾಡಲ್ಪಡದೆ ಹೋಗುವ ರೂ ಅವರ ಜನ್ಮ ವ್ಯರ್ಥವಾದದ್ದೆಂದು ಹಿರಿಯರು ಹೇಳುವರು. ಚಿಕಿತ್ಸಕನು, ಆಯುಧಕಾರಕನು, ನಷ್ಟವಾದ ಭ್ರಷ್ಟಚರ್ಯವುಂಟಾ ದವನ್ನು, ಚೋರನ್ನು, ಕೂರನ್ನು, ಮದ್ಯಪಾಯಿ) ಭೂಣಹತ್ಯ ಮಾ ಡಿದವನು, ಸೈನ್ಯವಂನು ಆಶ್ರಯಿಸಿ ಜೀವನ ಮಾಡುವಂಥವನ್ನು, ಶತ್ರುಗಳಿಗೆ ಅರ್ಥಾಂತರ ಕಲ್ಪಿಸುವವರು ಯಾರೂ ಸುಜಾರ್ಹರಲ್ಲ, ಆದಕಾರಣ ಪ್ರಿಯನಾದ ಅಳಿಯನೋಪಾದಿಯಲ್ಲಿ ಅಥಿತಿಯ ಪೂಜಾ ರ್ಹನು, ಉದಕಮಾತ್ರಾರ್ಹನಲ್ಲ. ದೋಷವುಳ್ಳ ಅಧಿತಿ ಪೂವ್ಯನಾದ್ದರಿಂದ ದೋಷವಿಲ್ಲದೆ ಸಮ ಲೋಪ್ಲಾಸ್ಮ ಕಾಂಚನನಾಗಿ ದೋಷರಹಿತನಾಗಿ ಸ್ನೇಹ ವೈರಗಳು ಇಲ್ಲದವನಾಗಿ ನಿಂದಾ ಪ್ರಶಂಸೆಗಳಲ್ಲಿ ಆಪೇಕ್ಷೆ ಇಲ್ಲದೆ ಯಾ ಶ್ರಯಗಳನ್ನು ತ್ಯಾಗ ಮಾಡಿ ಉದಾಸೀನವಾದ ಸನ್ಯಾಸಿ ಸಾಗೆ ಅಧಿತಿ ವಿಶೇಷವಾಗಿ ಪೂದ್ಯನು. - ಶಾಮಾಕ ಧಾನ್ಯವೂ, ಮಲಗಳೂ, ಶಾಕಗಳೂ, ಇಂಗುದೀ ಫಲ ಇವುಗಳಿಂದಜೀವನ ಮಾಡುತ್ತ ನಿಯಮಿಕ ಮನಸ್ಕನಾಗಿ ಅಗ್ನಿ ಕರ್ಮದಲ್ಲಿ ಉದ್ಯುಕ್ತನಾಗಿ ಪುಣ್ಯಗಳನ್ನು ಮಾಡುತ್ತ ವನದಲಿ ತಪಸ್ಸು ಮಾಡುವಂಥ ತಪೋವಂತನು ಅಥಿತಿ ಪೂಜಾಪರನಾಗಿ ಇರ ಬೇಕಾದ ಕಾರಣ ಭಾಗ್ಯವಂತನು ಅಧಿತಿ ಪೂಜೆಯನ್ನು ವಿಶೇಷವಾ ಗಿ ಮಾಡಬೇಕಾದ ವಿಷಯದಲ್ಲಿ ಏನು ಹೇಳತಕ್ಕದ್ದು?