ಪುಟ:ವಿದುರನೀತಿ ಮತ್ತು ನಾರದನೀತಿ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ವರ್ತಕರ ಯೋಗಕ್ಷೇಮವನ್ನು ನೃತ್ಯರ ಮುಖದಿಂದ ವಿಚಾರ ಮಾಡಿಸಿ ಪುತ್ರರಿಂದ ಬ್ರಾಮ್ಮಣರ ಸೇವೆಯನ್ನು ಮಾಡಿಸುತ್ತಿರಬೇಕು, ಸತ್ಕುಲ ಪ್ರಸೂತರಾದವರು ಪ್ರತಿದಿನದಲ್ಲೂ ಅಗ್ನಿಯ ಸಮಾನ ವಾದ ತೇಜಸುಳ್ಳವರು ಕ್ಷಮಾವಂತರಾಗಿ ಆಕಾರವನ್ನು ಕೋಪನ ಮಾಡಿಕೊಂಡು ಬೆಂಕೆಯಿರುವ ಹಾಗೆ ಇರುವರು, ತಾನು ಮಾಡುವಂಥ ಕೆಲಸವನ್ನು ಹೇಳಬಾರದು. ಧರ್ಮಾರ್ಥ ಕಾಮವುಳ್ಳ ಕಾಮರೂಪ ಕೆಲಸಗಳನ್ನು ತಿಳಿಸಬೇಕು. ಆ ಪ್ರಕಾರ ಮಾಡಿದರೆ ಮಂತ್ರಿಭೇದವುಂಟಾಗುವದಿಲ್ಲ. ಪರ್ವತದ ಮೇಲಾದರೂ ಜನರಹಿತವಾದ ಉಪ್ಪರಿಗೆಯ ಮೇಲಾದರೂ ತೃಣಗಳಿಂದರಹಿತವಾದ ಅರಣ್ಯದಲ್ಲಾದರೂ ಮಾಡಿದ ಆಲೋಚನೆ ಮಾಡತಕ್ಕ ಶ್ರೇಷ್ಟವಾದ ಆಲೋಚನೆ ತನಗೆ ಮಿತ್ರನಾಗದವನು ತಿಳಿಯತಕ್ಕವನಲ್ಲ, ಯಾವ ಅರಸು ಮಾಡುವ ಆಲೋಚನೆಯನ್ನು ಹೊರಗಿನ ಜನ ರೂ ಅಂತಃಪುರದ ಜನರೂ ತಿಳಿಯರೋ ಆ ಅರಸ್ಸು ಸರ್ವತ್ರ ದ ಪೈವುಳ್ಳವನಾಗಿ ಸ್ಥಿರವಾಗುವ ಹಾಗೆ ಐಶ್ವರ್ಯವನ್ನನುಭವಿಸುವನು. ಪಂಡಿತನಾದವನಾದರೂ ಚಪಲನಾದ ಪಂಡಿತನು ಮಂತ್ರಿತ್ವಕ್ಕೆ ಯೋಗ್ಯನಲ್ಲ, ಯಾವ ಮಂತ್ರಿ ಮಾಡಿದ್ದ ಕೆಲಸಗಳನ್ನು ಸಭೆಯಲ್ಲಿರುವವರು ತಿಳಿದುಮಾಡತಕ್ಕ ಕೆಲಸಗಳನ್ನು ತಿಳಿಯದೇ ಹೋಗುವರೋ ಅಂಥ ಮಂತ್ರಿಯ ಸಂಗಡ ಮಾಡುವ ಆಲೋಚನೆ ಅರ್ಥ ಸಂಪಾದಕವಾದದ್ದು, ಧರ್ಮಾರ್ಥಕಾಮಗಳ ವಿಷಯವಾಗಿ ಆರಸು ಮಾಡುವಂಥ ಆಲೋಚನೆ ಗುಪ್ತವಾದ ಹಾಗಾದರೆ ಅರ್ಥಸಿದ್ದಿಯು ನಿಸ್ಸಂದೇಹ ವಾಗಿ ಉಂಟಾಗುವದು.