ಪುಟ:ವಿದುರನೀತಿ ಮತ್ತು ನಾರದನೀತಿ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ಅಸಶಸ್ಸುಗಳಾದ ಕಾರ್ಯಗಳನ್ನು ಯಾವ ಪುರುಷನು ಮೋ ಹದಿಂದ ಮಾಡುವನೋ ಆ ಪುರುಷನು ಆ ಕೆಲಸಗಳಿಂದ ತಾನು ಸೌಖ್ಯವನ್ನು ಹೊಂದದ ಜೀವಿತದಿಂದ ರಹಿತನಾಗುವನು, ಪ್ರಶಸ್ಯ ಕರ್ಮಾನುಷ್ಠಾನವು ಸುಖಕರವಾಗುವಮ, ಅಪ್ರಶಸ್ತಿ ಕರ್ಮಾನುಷ್ಟಾನವು ಪಶ್ಚಾತಾಪ ಸಂಪಾದಕವಾಗುವದು. ಯಾವ ಪ್ರಕಾರ ವೇದಾಧ್ಯಯನ ಮಾಡದವನು ಶಾದ್ಯಾರ್ಹ ನಾಗನೋ ಹಾಗೆ ಸಂಧಿ, ವಿಗ್ರಹ, ಯಾನ, ಆಸನ, ದೈದೀಭಾವ ಮಾಶ್ರಯಗಳೆಂಬ ಆರು ಗುಣಗಳನ್ನು ಕೇಳದವನು ಅರಸು ಮಾ ಡುವ ಆಲೋಚನೆಯನ್ನು ಕೇಳುವದಕ್ಕೆ ಅರ್ಹನಾಗನು. ಷಡ್ಗುಣಗಳನ್ನು ತಿಳಿದು ಕಾರ್ಯಗಳ ಸ್ಥಿತಿಯು ವೃದ್ಧಿನಾಶ ಇವುಗಳನ್ನು ತಿಳಿದು ಎರಡನೆಯವರಿಂದ ಅವಮಾನವಂನು ಹೊಂದು ವ ಸ್ವಭಾವವಿಲ್ಲದಂಥವನ ಸ್ವಾಧೀನವಾಗಿ ಭೂಮಿ ಇರುವದು. ನಿರರ್ಥಕವಾದ ಕ್ರೋಧಹರ್ಷಗಳಿಲ್ಲದೆ ಆಲೋಚಿಸುತ್ತ ಕಾ ರ್ಯಗಳನ್ನು ಮಾಡುತ್ತ ತಾನೇ ಬೊಕ್ಕಸದ ಲೆಖವನ್ನು ಮಾಡು ತಿರುವಂಥವನ ಸ್ವಾಧೀನದಲ್ಲಿ ಭೂಮಿ ಇರುವದು. ಅರಸಾದವನು ತಾನೊಬ್ಬನೇ ಸಕಲ ಸೌಖ್ಯಗಳನ್ನು ಅನುಭ ವಿಸದೇ ಭತ್ಯರಾದಿಯಾಗಿ ಸಮಸ್ತರನ್ನು ಯಥಾಯೋಗ್ಯ ದ್ರವ್ಯ ದಾನ ಸಂತೋಷಪಡುತ್ತ ತಾನು ಅರಸಾದೆನಲ್ಲಾ ಎಂದು ಸಂತೋ ಷ ಪಡತಕ್ಕದ್ದು. ಬ್ರಾಮ್ಮಣ ಮಹತ್ತ್ವವನ್ನು ಬ್ರಾಮ್ಮಣನು ಬಲ್ಲನು. ಪತ್ನಿ “ಭಾವವನ್ನು ಪ್ರತಿ ಬಲ್ಲನು. ಮಂತ್ರಿ ಸ್ಥಭಾವವಂನು ಅರಸು ಬಲ್ಲನು. ಅರಸಿನನ ಸ್ಟಭಾವವಂನು ಅರಸು ಬಲ್ಲನು.