ಪುಟ:ವಿದುರನೀತಿ ಮತ್ತು ನಾರದನೀತಿ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ, ೭೧ ಹೇಳಲ್ಪಡುವ ಜ್ಞಾನ ಮಾರ್ಗಕ್ಕೆ ನಿದರ್ಶನವೇನಂದರೆ ತಿಳಿಯದೆ ಹೋಗುವದೂ ತಿಳಿದರೂ ಅನುಷ್ಠಾನ ಮಾಡದೆ ಹೋಗುವದೂ ಪಾಸಸಂಪಾದಕವಾದ ಕಾರ್ಯಗಳನ್ನು ಆರಂಭಿಸಿದವನು ಮೃತ ಹೊಂದುವನು. ಯಾವ ಪುರುಷನು ಪೂರ್ವಕೃತ ಪಾಪವನ್ನು ಆಲೋಚಿಸದೆ ಸುನ: ಪಾಪಾಸಕ್ತನಾಗುವನೋ ಆ ಪುರುಷನು ನರಕದಲ್ಲಿ ಕೆಡವಲ್ಬಡುವನು, ಮಂತ್ರ ಭೇದಕ್ಕೆ ಆರು ಮಾರ್ಗಗಳೆಂದು ತಿಳಿದು ಅರ್ಥಸಂತ 3 ಕಾಮುಕನು ಈ ಆರು ಮಾರ್ಗಗಳನ್ನು ರಕ್ಷಿಸಬೇಕು, ಅವು ಯಾವವೆಂದರೆ ಮದ್ಯದಿವ್ಯವಾದ ಮದವು, ನಿದ್ರೆ, ಜ್ಞಾ ನಶೂನ್ಯ, ನೇತ್ರವಕವಿಕಾರಗಳು, ದುಷ್ಟ ಮಂತ್ರಿಗಳಲ್ಲಿ ವಿಶಾ ಸ, ಪರಿಶುದ್ಧನೂ, ಕುಶಲನೂ ಆಗುವದು ಇವೇ ಆರು ಮಾರ್ಗಗಳು. ಈ ಆರು ಮಾರ್ಗಗಳನ್ನು ಯಾವನು ತಿಳಿದು ಗೋಪನ ಮಾ ಡು ಅವನು ಧಮಾರ್ಥಕಾಮಕರಣದಲ್ಲಿ ಯುಕ್ತನಾಗಿ ಶ ತುಗಳನ್ನು ಅತಿಕ್ರಮಿಸಿ ಇರುವನು. ಶಾಸ್ತ್ರಾಧ್ಯಯನ ಮಾಡದೆ ವೃದೋಪಸೇವಿಯಾಗದೆ ಧರ್ಮಾ ರ್ಥಗಳ ತಿಳಿವಿಕೆ ಬಹಸ್ಪತಿಗೆ ಸಮವಾದವರಿಂದಲೂ ತಿಳುಕೊಳ್ಳು ವದಕ್ಕೆ ಅಶಕ್ಯವಾದದ್ದು. ಸಮುದ್ರದಲ್ಲಿ ಬಿದ್ದಂಥ ವಸ್ತುವೂ ಕೇಳದವನನ್ನು ಕುರಿತು ಹೇಳುವಂಥ ಮಾತೂ ಇಂದ್ರಿಯ ನಿಗ್ರಹವಿಲ್ಲದಂಥವನ ಶ್ರವಣವೂ ಅಗಿ ಇಲ್ಲದ ಸ್ಥಳದಲ್ಲಿ ಮಾಡುವ ಹೋಮವೂ ಇವೆಲ್ಲಾ ನಷ್ಟ ವಾದವುಗಳು, ಬುದ್ಧಿಶಾಲಿಯಾದವನು ಪರೀಕ್ಷೆ ಮಾಡಿ, ಅನೇಕಾವರ್ತಿ ಆಲೋಚಿಸಿ,ಸ್ಥಿರಪಡಿಸಿ, ಪುನ: ಶ್ರವಣಮಾಡಿ, ಪ್ರಾಧ್ಯರ ಸಂಗಡ ಆಲೋಚಿಸತಕ್ಕದ್ದು.