ಪುಟ:ವಿದುರನೀತಿ ಮತ್ತು ನಾರದನೀತಿ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ಗರ್ವಿಷ್ಠರೂ, ಕೊನಿಷ್ಠರೂ, ಸಾಹಸಪರರೂ, ಧರ್ಮಬುದ್ಧಿಯಿಲ್ಲದ ವರೂ, ಇವರ ಸಂಗಡ ಮಿತ್ರತವನ್ನು ಮಾಡ ಬಾರದು, ಕೃತಜ್ಞನ, ಧಾರ್ಮಿಕನೂ, ಸತ್ಯವಂತನೂ, ಆಗಿ ಕ್ಷುದ್ರನಲ್ಲದೆ ಧೃಡಭಕ್ತಿ ಯುಂಟಾಗಿ ಸನ್ಮಾರ್ಗಸ್ಥನಾದ ಬೇಹಿತನು ತ್ಯಾಗಮಾಡತಕ್ಕವನಲ್ಲ. ಇಂದ್ರಿಯ ನಿಗ್ರಹವಿಲ್ಲದೆ ಹೋಗುವದು ಮೃತ್ಯುವಿಗಿಂತ ಹೆಚ್ಚಾದದ್ದಾದ ಕಾರಣ ಇಂದ್ರಿಯ ನಿಗ್ರಹವಿಲ್ಲದೆ ಹೋಗುವದು ದೇ ವತೆಗಳನ್ನಾದರೂ ಭೇದವಿಡುವದು. ಮೃದುಗುಣವುಂಟಾಗುವದೂ, ಭೂತಗಳವಿಷಯವಾಗಿ ಅದೂ ಯ ಭಾವವೂ, ಸಹನವೂ, ಧೈರ್ಯವೂ, ತಾವಮಾನ ಮಾಡದೆ ಹೂಗುವದೂ, ಇವು ಆಯುರ್ವದಿಕರಗಳೆಂದು ತಿಳವಿಕೆಯುಳ್ಳ ಪಂಡಿತರು ಹೇಳುವರು. ಅತಿಕ್ರಮಿಸಿ ಹೋದ ಅರ್ಥವನ್ನು ದಯದಿಂದ ಯಾವನು ಹೊಂದಲಿಚ್ಛಿಸುವನೋ ಅವನ ಸ್ಟಭಾವವು ಕುತವಾದದ್ದಲ್ಲ. ತನ್ನ ಕಾರ್ಯಗಳಿಗೆ ಮುಂದೆ ಆಗ ಹೋಗುವ ವಿಘ್ನಗಳನ್ನು ಪರಿಕ್ಷ್ಮಿ ಸುವಂಥ ಸಾಮರ್ಥ್ಯವುಳ್ಳವನೂ ತತ್ಕಾಲದಲ್ಲಿ ಮಾಡುವಂಥ ಕಾರ್ಯ ಗಳ ವಿಷಯವಾಗಿ ದೃಡಚಿತ್ರವುಳ್ಳವನೂ ಅತಿಕ್ರಮಿಸಿ ಹೋದ ಈ ರ್ಯಗಳ ವಿಷಯವಾಗಿ ಪೂರ್ವಕ_ತಪಾಸವು ಅನುಭವಿಸದ ವಿನ: ನಶಿಸುವದಲ್ಲವೆಂದು ತಿಳಿಯುವದೂ ಈ ಮೂರರ ತಿಳಿವಿಕೆಯುಳ್ಳ ಪುರುಷನು ಅರ್ಥಗಳಿಂದ ರಹಿತನಾಗುವದಿಲ್ಲ, ಮನೋವಾಕಾಯ ಕರ್ಮಗಳಿಂದ ಕರಕಾರ್ಯಗಳನ್ನು ಈ ವಿಸದೆ ಶುಭಕರ್ಯಗಳನ್ನು ಮಾಡದೆ ಹೋದರೆ ಆ ಮಾಡದೆ ಹೂ ಗುವದು ಅವನನ್ನು ನಾಶಮಾಡುವದು,