ಪುಟ:ವಿದುರನೀತಿ ಮತ್ತು ನಾರದನೀತಿ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ, ಹೂಗುವದು ಗುರು ವಾಕ್ಯ ಪ್ರಕಾರ ನಡಿಯುವದು ಅದು ಸದ್ದೇ ವಯ, ಇವು ಎಂಟು ವ್ರತಹಾನಿಯನ್ನು ಮಾಡುವವು. ತನಗೆ ಪ್ರತಿಕೂಲವಾದ ಕಾರ್ಯವನ್ನು (ಎರಡನೇಯವನಿಗೆ ಕೂಡಿಸದೆ ಹೋದ ಹಾಗಾದರೆ ಈ ಸೂಕ್ಷ್ಮದಿಂದ ಧರ್ಮವುಂಟಾ ಗುತ್ತದೆ. ಇಲ್ಲದೆ ಹೋದ ಹಾಗಾದರೆ ಅಧರ್ಮವುಂಟಾಗುವದು. ಶಾಂತದಿಂದ ಕೋಧವನ್ನು, ಸಾಧುಪ್ಪದಿಂದ ದುಷ್ಯನನ್ನು, ದ್ರವ್ಯ ದಾನದಿಂದ ಅರ್ಥಕಾರ್ಪಣ್ಯವುಳ್ಳವನನ್ನು, ತನ್ನ ಸತ್ಯವಾಕ್ಯದಿಂದ ಎರಡ ನೇಯವನು ಹೇಳುವ ಅಪದ್ಧವಾಕ್ಯವನ್ನು ಈ ಮೇರೆ ಬೇಯಿಸಬೇಕು. - ಸ್ತ್ರೀ ಸಾನಿಧ್ಯದಿಂದ ದೂರ್ತನಾದ ಜಾರನು, ಮಂದ ಬುದ್ಧಿ ಯುಳ್ಳವನು, ಭಯಶೀಲನು, ಕೋಪಿಷ್ಠನು, ತಾನೇ ಪುರುಷನೆಂದು ಅಹಂಕಾರವುಳ್ಳವನು, ಚೋರನ್ನು, ಕೃತಮ್ಮನನ್ನು, ಪರಮಾತ್ಮನಿಲ್ಲ ಎಂಬುವ ನಾಸ್ತಿಕನು, ಇವರಲ್ಲಿ ವಿಶ್ವಾಸವಿಡಬಾರದು. ನಿರಂತರದಲ್ಲೂ ವ್ಯದೊಸ ಸೇವೆಯಾಗಿ ಸರ್ವಭೂತನಮಸ್ಕಾ ರಪರನಾದವನಿಗೆ ಆಯು: ಪ್ರಮಾಣವು, ಪ್ರಜ್ಞಾವಿಶೇಷವು, ಯಶಸ್ಸು ದೇಹದಾರಥ್ಯವು, ಈ ನಾಲ್ಕು ಪ್ರವರ್ಧಮಾನವಾಗುವದು ಅತಿಕೇಶವು, ಧರ್ಮಾತಕಮವು, ಶತ್ರುಗಳಿಗೆ ನನ್ನನಾಗುವ ದು ಇವುಗಳಿಂದುಂಟಾಗುವ ಪ್ರಯೋಜನಗಳಲ್ಲಿ ಮನಸ್ಸನ್ನಿಡಬೇಡ. ವಿದ್ಯವಿರದ ಸುರುಷನೂ ಪ್ರಚಾರಹಿತವಾದ ದಾಂಪತ್ಯವೂ ಆಹಾರವಿರದ ಪ್ರಜೆಗಳೂ ಅರಸಿರದ ರಾಜ್ಯವೂ ಇವುಗಳ ದರ್ಶನ ಕಾಲದಲ್ಲಿ ವ್ಯಸನಪಡತಕ್ಕದ್ದು. ಪ್ರಾಣಧಾರಿಗಳಿಗೆ ಮಾರ್ಗವು ನಡಿಯುವದೂ ಪರ್ವತಗಳಲ್ಲಿ ಉದಕವಿರುವದೂ ಸ್ತ್ರೀಯರಿಗೆ ಸಂಭೋಗಭಾವವೂ ಮನಸ್ಸಿನಲ್ಲಿ ದುಷ್ಟವಾಕ್ಕುಗಳುಂಟಾಗಿರುವದೂ ಇವು ಇವುಗಳಿಗೆ ವಾರ್ಧಿಕ್ಯಗಳು.