ಪುಟ:ವಿದುರನೀತಿ ಮತ್ತು ನಾರದನೀತಿ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೮ ವಿದುರನೀತಿ ಎಂಟನೇ ಅಧ್ಯಾಯ ಯಾವ ಪುರುಷನು ಸುರುಷರಿಂದ ಪೂಜೆಮಾಡಲ್ಪಟ್ಟು, ಕಾ ರ್ಯಗಳಲ್ಲಿ ಆಸಕ್ತಿಯಿರದೆ ತನ್ನ ಸಾಮರ್ಥ್ಯವನ್ನು ವಯಮಾಡದೆ ಇರುವನೋ ಅವನು ಪ್ರಶಸ್ತನಾದ್ದರಿಂದ ಅವನ ವಿಷಯವಾಗಿ ಸ ತುರುಷರು ಪ್ರಸನ್ನರಾಗುವರು. ತಾನು ಎರಡನೆಯವನಿಂದ ನಿಂದಿತನಾಗದೆ ಅನರ್ಥಯುಕ್ತವಾದ ಮಹತ್ತರವಾದ ಪ್ರಯೋಜನವನ್ನು ಯಾವನು ಬಿಡುವನೋ ಅವನು ಸು ಖದುಃಖಗಳನ್ನು ತ್ಯಾಗಮಾಡಿ ಬಿಟ್ಟ ಸರ್ಪದ ಹಾಗೆ ಪ್ರಕಾಶಿಸುವನು, ಗುಣಾಧಿಕರಲ್ಲಿ ದುರ್ಗುಣಾರೋಪಣೆ ಮಾಡುವದೂ ರಾಜ ಸ ಮೀಪದಲ್ಲಿರುವ ಪುರುಷನಲ್ಲಿ ಖಲಭಾವವನ್ನು ಆರೋಪಣೆ ಮಾಡುವ ದೂ, ತಂದೆ ಮೊದಲಾದ ಗರುಗಳಲ್ಲಿ ಮಿಥ್ಯಾವಾದಗಳಿಂದ ನಿರ್ಬಂಧ ಮಾಡುವದೂ, ಅತಿವಾದದಿಂದ ಇವು ಒಮ್ಮಹತ್ಯಕ್ಕೆ ಸಮಾನಗಳು, ಗುಣವಂತರಲ್ಲಿ ದೋಷಾರೋಪಣೆಯಂದ ಮೃತ್ಯುವಿಗೆ ಸಮಾ ನವಾದ ಅಸಯಪಡುವದೂ ಅತಿವಾದದಿಂದ ಎರಡನೇಯವರಿಗೆ ತೇ ಜೋವಧೆಮಾಡುವದೂ ಗುರುಶಿಶೂಷೆ ಮಾಡದೆ ತರೆಬೀಳುತ್ತ ಆತ್ಮ ಶ್ಲಾಘನೆ ಮಾಡಿಕೊಳ್ಳುವದೂ, ಈ ಮೂರು ವಿದ್ಯಾರ್ಥಿಗೆ ಶತ್ರುಗಳು. ಆಲಶ್ಯವೂ, ಮದಮೋಹಗಳೂ, ಚಾಪಲ್ಯವೂ, ಅತಿಭಾಷೆಯೂ ಸ್ಥನಾಗಿರುವದೂ ಅತ್ಯಹಂಕಾರವೂ, ತ್ಯಾಗ ಆಗದೇ ಹೋಗುವ ದೂ, ಇವು ಏಳು ವಿದ್ಯಾರ್ಥಿಗಳಲ್ಲಿ ಗೋಪಗಳು. ಮುಖಾರ್ಥಿಗೆ ವಿದ್ಯವುಂಟಾಗದು. ಆದಕಾರಣ ವಿದ್ಯವನ್ನು ಬಿಡತಕ್ಕದ್ದು ವಿದ್ಯಾರ್ಥಿಗೆ ಸುಖವಿಲ್ಲದ್ದರಿಂದ ಸುಖವನ್ನು ಬಿಡತಕ್ಕದು.