ಪುಟ:ವಿದುರನೀತಿ ಮತ್ತು ನಾರದನೀತಿ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯಕ್ಷಪ್ರಶ್ನೆ. ಬಾಮ್ಮಣ ಕ್ಷತ್ರಿಯ ವೈಶ್ಯ ವರ್ಣಗಳನ್ನು ಶೂದ್ರನು ಯಥಾ ಕ್ರಮವಾಗಿ ಸೇವೆಮಾಡಿ ಸ್ವರ್ಗವನ್ನು ಹೊಂದುವನು. ಚಾತುರ್ವಣ್ರ ಧರ್ಮಗಳನ್ನು ನಿನಗೆ ತಿಳಿಸಿದ್ದೇನೆ. ಆದರೆ ನಾನು ಹೇಳುವ ಕಾರಣಗಳನ್ನು ಕೇಳು ರಾದ್ಯವಿಲ್ಲದೆ ಕ್ಯಾತಧರ್ಮದಿಂದ ರಹಿತನಾದ ಧರ್ಮರಾಯನನ್ನು ರಾಜ್ಯದಲ್ಲಿಟ್ಟು ಸ್ವಧರ್ಮಸ್ಥನನ್ನು ಮಾಡೆಂದು ವಿದುರನು ಹೇಳಲು, ಧೃತರಾಷ್ಟ್ರನು ಅಂದದ್ದು--ನೀನು ಹೇಳಿದ ಪ್ರಕಾರ ನನಗುಂಟಾಗುವ ಬುದ್ದಿ ದುರ್ಯೋಧನನ್ನು ಹೊಂದಿದ ಕಾಲದಲ್ಲಿ ವಿಪರೀತವಾಗುತ್ತದೆ. ದೈವ ಪ್ರಯತ್ನವು ದಾಟಗೂಡಾದ್ದರಿಂದ ಪುರುಷಪ್ರಯತ್ನವು ನಿರರ್ಥಕವಾದದ್ದು. - - ಯಕ್ಷ ಪ್ರಶ್ನೆ: ವೈಶಂಪಾಯನ ಮುನಿಯು ಜನಮೇಜಯರಾಜಗೆ ಹೇಳಿದ್ದೇನಂದ --ಒಂದಾನೊಂದು ಕಾಲದಲ್ಲಿ ಧರ್ಮ, ಭೀಮ, ಅರ್ಜುನ, ನಕುಲ, ಸಹದೇವ ಸಂಚಪಾಂಡವರು ದೈತವನದಲ್ಲಿ ಇರುವಾಗೈ, ಒಬ್ಬ ಬಾಣನು ಅವರಿಗೆ ಅಂದದ್ದು- ಹೇ ಮಾಹಾರಾಯನೆ ! ನನ್ನ ಅಗ್ನಿಹೋತ್ರದ ಅರಣಿ ಅಂದರೆ ಬೆಂಕಿಯನ್ನು ಕೆಡವುವ ಕಟ್ಟಿಗೆಯ ನ್ನು ನಾನು ಗಿಡದಮೇಲೆ ಇಟ್ಟಿರಲು, ಅವನ್ನು ಒಂದು ಮೃಗವು ತಕೊಂಡು ಓಡಿಹೋಯಿತು. ಅದನ್ನು ಗೊತ್ತುಹಚ್ಚಿ ನನ್ನ ಅರಣಿ ಯನ್ನು ನನಗೆ ಕೊಡಬೇಕು. ಇಲ್ಲದೇ ಹೋದರೆ ಮಾತ್ರ ಅಗ್ನಿಹೋ ತ್ರದ ಭಂಗವಾಗುತ್ತದೆ. ಹೀಗೆ ಹೇಳಿದ ಬ್ರಾಮ್ಮಣನ ಮಾತನ್ನು ಕೇಳಿ ಆ ಪಂಚಪಾಂಡವರು ಯಾವತ್ತರು ತಮ್ಮ ಧನುಷ್ಯ ಬಾಣಗಳನ್ನು ತಕೊಂಡು ಯಾವತ್ತು ಅಡವಿಯನ್ನು ಶೋಧಿಸಿದಾಗ್ಯಾದರೂ, ಆ