ಪುಟ:ವಿದುರನೀತಿ ಮತ್ತು ನಾರದನೀತಿ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯಕ್ಷಪ್ರಶ್ನೆ, ೮೩ ಗದ ಸುದ್ದಿ ಹತ್ತಲಿಲ್ಲ. ಮತ್ತು ಹಸಿವೆ ನೀರಡಕಿಗಳಿಂದ ಪೀಡಿತ ಕಾಗಿ ಒಂದು ಆಲದಮರದ ಕೆಳಕ್ಕೆ ಕೂತುಕೊಂಡಾಗ್ಯ, ಧರ್ಮರಾಜನು ಅಂದದ್ದೇನಂದರೆ- ನಕುಲನೇ ! ತೃಷೆಯಿಂದ ಪ್ರಾಣವು ವ್ಯಾಕುಲ ಪಡಹತ್ತಿರುವದಯ ! ಎಲ್ಲಿಂದಾದರೂ ನೀರು ಸೃಲ್ಲು ತಕೊಂಡು ಬ್ರಾ, ಅದನ್ನು ಕೇಳಿ ನಕುಲನು ಒಂದು ಎತ್ತರವಾದ ಗಿಡವನ್ನು ಹತ್ತಿ ನೋಡುವಾಗ್ಗೆ ದೂರದಲ್ಲಿ ನೀರಿನ ಝರಿಗಳು ಕಂಡು ಬಂದವು ಮುಂದೆ ಅದೇ ಸುಳವು ಹಿಡಿದು ಅಲ್ಲಿಗೆ ಹೋಗಿ ನೀರಿಗೆ ಕೈಹಚ್ಚಲು ಎಲ್ಲಾ ! ಮೊದಲು ನನ್ನ ಪ್ರಶ್ನೆಗಳಿಗೆ ಉತ್ಸರವನ್ನು ಕೊಡು, ಆ ಮೇ ಲ ನೀರುಕುಡಿ, ಉತ್ತರಕೊಡದೆ ಹಾಗೇ ನೀರು ಕುಡದದ್ದರಿಂದ ಅಲ್ಲೇ ನಕುಲನು ಅಚೇತನನಾಗಿ ಬಿದ್ದನು. ಅವನ ಶೋಧಾರ್ಥವಾಗಿ ಧರ್ಮ ಕಾಯನು ಭೀಮನನ್ನು ಕಳಿಸಿದನು. ಹೀಗೆ ಒಬ್ಬರ ಹಿಂದೊಬ್ಬರನ್ನು ಒಬ್ಬೊಬ್ಬರ ಶೋಧಾರ್ಥವಾಗಿ ಅರ್ಜುನ, ಸಹದೇವರನ್ನು ಕಳುಹಿಸಿ ದನು, ಆ ನಾಲ್ವರೂ ನೀರು ಕುಡಿದು ಬಿದ್ದಿರುವದರಿಂದ ಧರ್ಮರಾ ಜನು ಬಹಳ ಹೊತ್ತು ಹಾದಿನೋಡಿ, ತನ್ನ ಬಂಧುಗಳು ಬರುವದಿಲ ವೆಂತ ತಿಳಿದು, ಅಡವಿಯಲ್ಲಿ ಹುಡುಕುತ್ತಾ ಆ ನೀರಿನಹತ್ರ ಬಂದೆ ನು. ಅಷ್ಟರಲ್ಲಿ ಅಲ್ಲಿ ಅಚೇತನವಾಗಿ ಬಿದ್ದಿರುವ ಬಂಧುಗಳನ್ನು ನೋ ಡಿ ಬಹಳ ದುಃಖಿಸ ಹತ್ತಿದನು. ಇಷ್ಟರಲ್ಲಿ ವೃಕ್ಷದಮೇಲಿಂದ ಶಬ್ದ ಕೇಳಬಂದದ್ದೇನಂದರೆ-ಎಳ್ಳೆ, ಈ ಸ್ಥಳದ ಸ್ವಾಮಿಯಾದ ನಾನೆ ಬೃ ಯಕ್ಷನು, ಮತ್ತು ನಿನ್ನ ಬಂಧುಗಳಿಗೆ ಬಂದಿರುವ ಅವಸ್ಥೆಯು ನನ್ನಿಂದಾಗಿರುವದು. ಆದರೆ ಈಗ ನನ್ನ ಪ್ರಶ್ನೆಗಳಿಗೆ ಸರಿಯಾಗಿ ಉತ್ತ ರಕೊಟ್ಟಲ್ಲಿ ದೈವಯೋಗದಿಂದ ನಿಮ್ಮ ಬಂಧುಗಳು ಜೀವಂತರಾಗಬ ಹುದು. ಹಾಗಿಲ್ಲದೆ ನೀನು ನನ್ನಾಜ್ಞೆಯನ್ನು ಮುರಿದು ನೀರನ್ನು ಕು ಡಿದರೆ ನಿನ್ನ ಗತಿಯಾದರೂ ನಿನ್ನ ಬಂಧುಗಳಂತಾಗುವದು. ಈ ಮಾತನ್ನು ಕೇಳಿ ಧರ್ಮರಾಜನು ಮಾತಾಡಿದ್ದೇನಂದರೆ ಯಕ್ಷನೆ! ನಿನ್ನ ಎಂಥೆಂತ