ಪುಟ:ವಿದುರನೀತಿ ಮತ್ತು ನಾರದನೀತಿ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾರದನೀತಿ. ಪ್ರಸಂಗವಶಾತ್ ನಿನ್ನದಶಿಂದಾ ಯಾವನು ತನ್ನ ಜೀವ ಸಹಾ ಕೊ ಟೈನೊ ಅಂಥವರ ಹೆಂಡರುಮಕ್ಕಳಿಂದ ಕೂಡಿದ ಕುಂಟುಂಬದವರನ್ನು ನಿನ್ನ ಸ್ಪಂತಜನರಂತೆ ಸಂರಕ್ಷಣೆ ಮಾಡುತ್ತಿಯಷ್ಟೆ ? ಚಿಕ್ಕವಯಸಿನಲ್ಲಿ ನಿನ್ನ ಕೂಡಾಡಿದ ಬಡಬಗ್ಗರಾದ ನಿನ್ನ ಮಿತ್ರರು ನಿನ್ನನ್ನು ಕಾಣಬಲದರೆ ಅವರಿಗೆ ಬೇಕಾದ ಸಂಪತ್ತಿ ಮುಂತಾದ್ದನ್ನು ಕೊಟ್ಟು ಸಂತೋಷ ಬಡಿಸುವಿಯಷ್ಟೆ ? ಎರಡನೆಯವರಲ್ಲಿರುವ ಗುಣವನ್ನೂ ಮತ್ತು ಅವರ ಮನಸ್ಸಿನ ಅಭಿಪ್ರಾಯವನ್ನು ತಿಳಿದುಕೊಳ್ಳುವ ಜ್ಞಾನವು ನಿನ್ನಲ್ಲಿರುವದಷ್ಟೆ ? ನಿನ್ನ ಪ್ರಧಾನಿಗಳು ಯಾವತ್ತು ರಾಷ್ಟ್ರದಲ್ಲಿ ಕೀರ್ತಿ ಅಥವಾ ಅಸ ಕೀರ್ತಿ ಪಡಿಯುತ್ತಾರೋ ಇದನ್ನು ನೀನು ನಿನ್ನ ಚಾರರ ಮುಖಾಂತರ ವಾಗಿ ತಿಳಿದುಕೊಳ್ಳುಯಷ್ಟೇ? ನಿನ್ನ ಯಾವತ್ತು ಪ್ರಜೆಗಳು ತಮ್ಮ ತಮ್ಮ ಕಪ್ಪು ಕಾಣಿಕೆಗಳನ್ನು ಒಪ್ಪಿಸಿ, ರಾಜಾಜ್ಞೆಯನ್ನು ಲಂಘನಮಾಡದೆ, ಭೂಮಿಸೇವಕ ( ಹೊಲ ಮನೆ ) ಯಥಾಯೋಗ್ಯವಾಗಿ ಮಾಡುತ್ತಿರುವರಷ್ಟೆ? ತೀರ್ಥಯಾತ್ರೆಯನ್ನು ಮಾಡತಕ್ಕ ಜನರಿಗೆ ಮಾರ್ಗದಲ್ಲಿ ಸುಲ ಕೊಳ್ಳತಕ್ಕಂಥ ಚೌರ್ಯಕರ್ಮಿಗಳ ಪಾರಿಸತ್ಯ ಮಾಡಿ, ಮಾರ್ಗವನ್ನು ನಿರ್ಭಯವಾಗಿ ಮಾಡಿರುವಿಯಷ್ಟೆ ? - ನೀನು ನಿನ್ನ ಯಾವತ್ತು ದೇಶದಲ್ಲಿ ವಿಚಾರಣೆಯನ್ನು ಇಟ್ಟು ಕಳ್ಳರ ಬಂಡಾಟವು ನಿಲ್ಲುವಂತೆ ಕಳ್ಳರನ್ನು ಶಿಕ್ಷಿಸುತ್ತಿಯಷ್ಟೇ? ಬಡವರು ತಮ್ಮ ದು:ಖವನ್ನು ಹೇಳಲು ಬರಲು ಅವರಿಗೆ ಯಾವತರದ ಪ್ರತಿಬಂಧಗಳಿಲ್ಕವಷ್ಟೇ? ನಿನ್ನ ಸೈನ್ಯವು ಪರಚನಾಶಾರ್ಥವಾಗಿ ಯಾವಾಗ್ಗೆ ಹೊರಡು ಇದೋ ಅಗ್ಗೆ ಊರ ಜನರನ್ನು ಹೊಡೆದು ಬಡಿದು ಮಾಡೋಣ ಮತ್ತು ಸುಲಕೊಳ್ಳೋಣ ಇಂಥ ಕೆಲಸಗಳನ್ನು ಮಾಡುವದಿಲ್ಲವಷ್ಟೇ?