ಪುಟ:ವಿದುರನೀತಿ ಮತ್ತು ನಾರದನೀತಿ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾರದನೀತಿ, ೯೧ ನಿನ್ನ ಶರೀರದ ಮೇಲೆ ಎಲ್ಲಾದರೂ ಇರುವೆಯು ಹತ್ತಿ ಕಡಿ ಯು ಹತ್ತಿದರೆ ಅದನ್ನು ಹಾಗೆ ನಿವಾರಣ ಮಾಡುತ್ತಿಯೋ ಅದರಂತೆ ದುಷ್ಟ ಜನರಿಂದಾ ಜನರ ಸಂರಕ್ಷಣೆ ಮಾಡುತ್ತಿ ಯಷ್ಟೆ ? ಸದ್ಗುರುವಿನ ಸಲುವಾಗಿ ತಮ್ಮ ಶರೀರ, ದ್ರವ್ಯ, ಮನೋಭಾವ ಇವುಗಳನ್ನು ಅರ್ಪಣಮಾಡಿ, ಆದರಿಂದ ಸೇವೆ ಧರ್ಮ ಸಂಪಾದನೆ ಯನ್ನು ಮಾಡತಕ್ಕಂಥ ಶಿಷ್ಯರು ನಿನ್ನ ರಾಜ್ಯದಲ್ಲಿರುವರಷ್ಟೇ ಕೇವಲ ನಿರ್ಧನ ಶೋತಿಯ (ವೇದಶಾಸ್ತ್ರ ಸಂಪನ್ನ ) ಕ್ಷೀಣ ವೃತ್ತಿ ( ಯಾತರಿಂದ ಜೀವನವು ನಡೆಯಲಾರದು ) ಅಂಥ ಉಭಯ ಸಾದುಗಳ ದೈನ್ಯವನ್ನು ಹೋಗಲಾಡಿಸಿ ಅವರನ್ನು ಒಳ್ಳೆ ಒಗೆಯಿಂದ ಪರಿಪಾಲನ ಮಾಡುತ್ತಿರುವಿಯಷ್ಟೆ ? ಬಡ ಬ್ರಾಮ್ಮಣ ಕನ್ಯಯು ದರಿದ್ರಾವಸ್ಥೆಯಿಂದ ಅವಳ ಲಗ್ನ ನಿಂತಪಕ್ಷದಲ್ಲಿ ಹಣಕೊಟ್ಟು ಆವಳ ಲಗ್ನ ಮಾಡುವಿಯಷ್ಟೆ ? ಯವನ್ನು ತನ್ನ ಕರ್ಮಾನುಸಾರವಾಗಿ ನಿನ್ನ ಬಂದಿಯಲ್ಲಿ ಬಿದ್ದಾ ಗೈ ಅವನು ಅಸ್ಪೃಷ್ಣನಾದರೆ ಅವನಿಗೆ ವೈದ್ಯನಕಡಿಯಿಂದ ಔಷ ದೋಪಚಾರಗಳನ್ನು ಮಾಡಿಸಿ, ಸೌಂರಕ್ಷಣೆ ಮಾಡಿಸುವಿಯಷ್ಟೆ ? ಬಹಳ ಹಸಿದು ಬಂದ ಅತಿಥಿಗಳು ನಿನ್ನ ಮನೆಯಲ್ಲಿ ಮಾಡಿರುವ ಪಕ್ಷಾನ್ನಗಳನ್ನು ಊಟಮಾಡಿ, ನಿನಗೆ ಆಶೀರ್ವಾದಗಳನ್ನು ಕೊಟ್ಟು ಹೋಗುತ್ತಿರುವರಷ್ಟೆ ? ಯಾವನಾದರೂ ಉತ್ತಮ ಕುಲದಲ್ಲಿ ಹುಟ್ಟಿದವನಾಗಿ, ಪ್ರಸಂಗ ನುಸಾರವಾಗಿ ಧನಲು ಮತ್ತು ಕುಲಕ ಸಾವಕಾರನಕೆಡಿಂದಾ ಸಾಲತೆಗೆದುಕೊಂಡು ಅದನ್ನು ತನ್ನ ಬಡತನದ ಮೂಲಕವಾಗಿ ಮುಟ್ಟಿ ಸಲಿಕ್ಕೆ ಆಗದೆ, ಜನಮನ ಹಾನಿಯ ಸಲುವಾಗಿ ದೇಹತ್ಯಾಗ ಮಡಿಕೆ ಳ್ಳುವ ಸಂಕಟ ಬಂದೊದಗಿದ್ದರೆ ಅವನನ್ನು ಬಹು ಸಂಕ್ಷೇಪದಿಂದ ಋಣಮುಕ್ತ ಮೂಡುತ್ತಿರುವಿಯಷ್ಟೆ ?