ಪುಟ:ವಿದ್ಯಾರ್ಥಿ ಕರಭೂಷಣ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೮ ಕರಭೂಷಣ wwwmmmmmmmmmmmmmmm ವರಾಗಿ ಕೆಲಸಮಾಡಿ, ಅದರ ಪ್ರಭಾವದಿಂದ ಅಸಾಧಾರಣವಾದ ಸಂಪತ್ತನ್ನು ಹೊಂದಿದರು. ಅಂಧ ಸಂಪತ್ತನ್ನು ಅಪೇಕ್ಷಿಸತಕ್ಕವರು, ಇಸ್ಪ್ಯಾರ್ಧಸಿದ್ದಿ ಗೋಸ್ಕರ ಅವರಂತೆ ಕೆಲಸಮಾಡುವುದನ್ನು ಕಲಿಯಬೇಕು, ಪ್ರಯತ್ನ ಗಳು ಫಲಕ್ಕೆ ಅನುರೂಪವಾಗಿರಬೇಕು. ಭಗೀರಧಪ್ರಯತ್ನದಿಂದ ಲಭ್ಯ ವಾಗತಕ್ಕುವುಗಳು, ಮಶಕಪ್ರಯತ್ನದಿಂದ ಸಾಧ್ಯವಾಗುವುದಿಲ್ಲ. ಜಿತೇಂ ದ್ರಿಯರಾಗದವರು, ವಸಿಷ್ಟಾದಿಗಳಂತೆ, ವಿಶ್ವಾಮಿತ್ರನಂಧ ರಾಜರ್ಷಿ ಗಳಿಗೂ ಹೊಟ್ಟೆಯ ಕಿಚ್ಚನ್ನು ಂಟುಮಾಡುವ ಪದವಿಯನ್ನು ಹೊಂದುವುದು ಸಾಧ್ಯವೆ ? ಪ್ರತಿಯೊಂದು ಇಷ್ಟಾರ್ಧಪ್ರಾಪ್ತಿಗೂ, ಉದ್ಯೋಗರೂಪ ವಾದ ಬೆಲೆಯೊಂದುಂಟು. ಆ ಬೆಲೆಯನ್ನು ಕೊಟ್ಟ ಹೊರತು, ಇಷ್ಟಾರ್ಥ ಪ್ರಾಪ್ತಿಯಾಗುವುದಿಲ್ಲ. ಗಣಿತಶಾಸ್ತ್ರ ವಿಶಾರದನಾದ ಯಕ್ಸಿಡ್ ಎಂಬ ವನನ್ನು, ಒಬ್ಬ ಚಕ್ರವರ್ತಿಯು, ಆ ಶಾಸ್ತ್ರವನ್ನು ಸ್ವಾಧೀನಮಾಡಿಕೊಳ್ಳು ವುದಕ್ಕೆ ಸುಲಭವಾದ ಮಾರ್ಗವೊಂದನ್ನು ಸೂಚಿಸಬೇಕೆಂದು ಪ್ರಾರ್ಥಿಸಿ ದನು. ಆಗ ಯೂಕ್ಲಿಡ್ ಎಂಬ ಪಂಡಿತನು, ದೊರೆಯನ್ನು ಕುರಿತು ( ಈ ಶಾಸ್ತ್ರವನ್ನು ಸ್ವಾಧೀನಮಾಡಿಕೊಳ್ಳಲಪೇಕ್ಷಿಸತಕ್ಕವರು, ತಾವು ವ್ಯಾಸಂಗಮಾಡತಕ್ಕ ಕಾಲದಲ್ಲಿ ವಿಷಯಾಂತರಗಳಿಗೆ ಮನಸ್ಸು ಚಲಿಸದಂತೆ ಏಕಾಗ್ರವಾಗಿ ನಿಲ್ಲಿಸಬೇಕು. ಇದೇ ಅತ್ಯಂತ ಸುಲಭವಾದ ಉಪಾಯವು. ವಿಷಯಸುಖಗಳಲ್ಲಿ ಮಗ್ನರಾಗಿ, ಪುಷ್ಪದಿಂದ ಪುಷ್ಪಕ್ಕೆ ಮಕರಂದಾ ರ್ಧವಾಗಿ ಚಲಿಸುವ ಜೇನುಹುಳಗಳಂತೆ ಸಂಚರಿಸತಕ್ಕವರಿಗೆ, ಗಣಿತಶಾಸ್ತ್ರ ರಸವು ಲಭಿಸುವುದು ಕಷ್ಟ, ಅಮೂಲ್ಯವಾದ ರತ್ನ ವನ್ನು ತೆಗೆಯತಕ್ಕ ವರು ಹೇಗೆ ಬಹಳ ಆಳವಾದ ಗಣಿಗಳಿಗೆ ಇಳಿದು ಭೂಗರ್ಭಶೋಧನೆ