ಪುಟ:ವಿದ್ಯಾರ್ಥಿ ಕರಭೂಷಣ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ೧೦೨ ವಿದ್ಯಾರ್ಥಿ ಕರಭೂಷಣ ದ್ರವ್ಯವನ್ನೂ ಕೊಡುವೆನು.” ಎಂದು ಹೇಳಿದನು. ಅದನ್ನು ಮನಸ್ಸಿಗೆ ತಂದುಕೊಳ್ಳದೆ, ಆ ಕುದುರೆಯ ಯಜಮಾನನು, ಕತ್ತಿಯನ್ನು ಹಿರಿದು ಈ ಪ್ರಭುವನ್ನು ಸಂಹರಿಸುವ ಪ್ರಯತ್ನವನ್ನು ಮಾಡಿದನು. ದೊರೆಯು ಅತ್ಯಂತ ಲಾಘವದಿಂದ ಅವನ ಕತ್ತಿಯನ್ನು ಕಿತ್ತು ಕೊಂಡನು, ಅಷ್ಟರಲ್ಲಿ, ದೊರೆಯ ಕುದುರೆಯವನು ಬಂದು, ಈತನೇ ಚಕ್ರವರ್ತಿಯೆಂದು ಆ ಕುದುರೆಯ ಯಜಮಾನನಿಗೆ ಹೇಳಲು, ಅವನು ಕ್ಷಮಾಪಣೆಯನ್ನು ಕೇಳಿ ಕೊಂಡು, ತನ್ನ ಕುದುರೆಯನ್ನು ಕಾಣಿಕೆಯಾಗಿ ಪರಿಗ್ರಹಿಸಬೇಕೆಂದು ಕೇಳಿಕೊಂಡನು. ಆಗ ದೊರೆಯು ತನ್ನ ಕೆಲಸ ಪೂರಯಿಸುವವರೆಗೂ ಆ ಕುದುರೆಯನ್ನು ಪಯೋಗಿಸಿಕೊಂಡು, ಅನಂತರ ವಿಶೇಷವಾದ ಬಹುಮಾನ ಗಳೊಡನೆ ಕುದುರೆಯನ್ನು ಮರಳಿ ಕೊಟ್ಟು ಬಿಟ್ಟನು. ಹೀಗೆ ಸ್ಥಿರಸಂಕಲ್ಪ ರಾದವರು, ಹಿಡಿದ ಕೆಲಸದಲ್ಲಿ ಮನಸ್ಸನ್ನು ಲೀನಮಾಡಿ, ಕಾಲ್ಯಾಂತರ ಗಳಿಗೆ ಬುದ್ದಿ ಯನ್ನು ಕೊಡದೆ, ಕೆಲಸ ಪೂರಯಿಸುವವರೆಗೂ ನಿಶ್ಚಲಚಿತ್ತ ರಾಗಿ ಕೆಲಸಮಾಡುವರು. ಇದೇ ನಿಜವಾದ ತಪಸ್ಸು, ಇಂಧ ತಪಸ್ಸಿಗೆ ಸಿದ್ದಿಯಾಗುವುದೇ ಹೊರತು, ಚಂಚಲಚಿತ್ತರಾಗಿ ಕೆಲಸಮಾಡತಕ್ಕವರ ತಪಸ್ಸು ಎಂದಿಗೂ ಸಿದ್ಧಿಸುವುದಿಲ್ಲ. ಪ್ರತಿಯೊಂದು ಕೆಲಸವನ್ನು ಮಾಡುವುದಕ್ಕೂ ಕಾಲವನ್ನು ಕೃಷ್ಣ ಮಾಡಿ-ಆ ಕಾಲದಲ್ಲಿ ಬೇರೆಯಾದ ಕೆಲಸಗಳು ಎಷ್ಟು ಬಂದಾಗ ಅದನ್ನು ಬಿಟ್ಟು-ಉಪಕ್ರಮಿಸಿದ ಕೆಲಸವನ್ನು ಮಾಡುವುದಕ್ಕೆ, ಬ್ರಿಟಿಷ್ ಜನರು « ಪಂಕ್ಚುಯಾಲಿಟಿ ” ಎಂದು ಹೇಳುವರು. ಬ್ರಿಟಿಷ್ ಜನಗಳ ಸಂಸತ್ತಿಗೆ ಇದೇ ಮುಖ್ಯ ಕಾರಣವು, ಈ ಗುಣದ ಬೆಲೆಯನ್ನು ಗೊತ್ತು