ಪುಟ:ವಿದ್ಯಾರ್ಥಿ ಕರಭೂಷಣ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨ ವಿದ್ಯಾರ್ಥಿ ಕರಭೂಷಣ mM ಕಣ್ಣು, ಕಿವಿ, ಮೂಗು, ನಾಲಗೆ, ತೂಗಿಂದ್ರಿಯ, ಇವುಗಳೆಲ್ಲವೂ ಮುಖ್ಯ ದ್ವಾರಗಳು ; ಇವುಗಳ ಮೂಲಕವಾಗಿ ಎಷ್ಟೋ ವಸ್ತು ತತ್ವಗಳು ನಮ್ಮ ಮನಸ್ಸಿಗೆ ಬರುತ್ತವೆ, ಅದರಿಂದ ಜ್ಞಾನವುಂಟಾಗುತ್ತದೆ, ಸಂಚೇಂದ್ರಿಯ ಗಳನ್ನೂ ಚೆನ್ನಾಗಿ ಉಪಯೋಗಿಸಿಕೊಂಡು ವಸ್ತುತ್ವಗಳನ್ನು ಯಾರು ವಿಶೇಷವಾಗಿ ತಿಳಿದು ಕೊಳ್ಳುವರೋ, ಅವರು ಸತ್ವತೋಮುಖವಾದ ಪ್ರಜ್ಞೆ ಯುಳ್ಳವರಾಗುತ್ತಾರೆ, ವಿದ್ವಾಂಸರಾದಮಾತ್ರಕ್ಕೆ ಜನರು ಸತ್ವಜ್ಞರಾದ ರೆಂದು ಹೇಳುವುದಕ್ಕಾಗುವದಿಲ್ಲ. ಬೀದಿಗುಡಿಸತಕ್ಕ ಎರೇ ಮೊದಲಾದ ಹೀನಸ್ಥಿತಿಯಲ್ಲಿರತಕ್ಕ ಪ್ರತಿಯೊಬ್ಬರೂ, ಪಂಡಿತೋತ್ತಮರೆಂದೆನ್ನಿಸಿಕೊಂ ಡಿರತಕ್ಕ ಮಹಾಜನಗಳಿಗೂ ಗೊತ್ತಿಲ್ಲದಿರುವ ಅನೇಕ ವಿಷಯಗಳನ್ನು ತಿಳಿದುಕೊಂಡಿರುವರೆಂಬುದಾಗಿಯೂ, ದೊಡ್ಡ ಪಂಡಿತರೂ ಅವರಿಂದ ಗ್ರಹಿಸ ತಕ್ಕೆ ವಿಷಯಗಳು ವಿಶೇಷವಾಗಿರುವುವೆಂಬುದಾಗಿಯ, ಆಂಗೇಯ ಪಂಡಿತೋತ್ತಮರಾದ ಸರ್ ವಾಲ್ಟರ್‌ ಸ್ಕಾಟಿರವರು ಹೇಳಿರುವರು. ಪ್ರಪಂಚದಲ್ಲಿರತಕ್ಕೆ ಎಲ್ಲಾ ಸ್ತ್ರೀ ಪುರುಷರೂ ಅನೇಕ ಭಾಗಗಳಲ್ಲಿ ನಮಗೆ ಗುರುಗಳಾಗಿರುವುದಕ್ಕೆ ಅರ್ಹತೆಯುಳ್ಳವರೆಂದು, ರಾಜೇಂದ್ರಲಾಲ್ ಮಿತ್ರ ರವರು ಹೇಳಿರುವರು, ಕೂಲಿಯಮ೦ದಲೂ ಸಂಪದಭ್ಯುದಯ ಪ್ರಯತ್ನ ಗಳ ವಿಷಯದಲ್ಲಿ ಅನೇಕ ರಹಸ್ಯಗಳು ತಿಳಿಯುವುವೆಂದು, ಅರ್ಧಶಾಸ್ತ್ರ, ವಿಶಾರದರಾದ ಮ| ಸಿ, ರಂಗಾಚಾರ್ರವರು ಹೇಳುತ್ತಿದ್ದರು. ಹೀನಸ್ಥಿತಿಯಲ್ಲಿರತಕ್ಕೆ ಅನೇಕ ಜನಗಳು, ಅನೇಕ ವಿಷಯಗಳಲ್ಲಿ, ಪ್ರಭು ಪದವಿಯಲ್ಲಿಯ ಸಚಿವಸದವಿಯಲ್ಲಿಯ ಇರತಕ್ಕೆ ಮಹಾಜನ ಗಳಿಗಿಂತಲೂ ಹೆಚ್ಚು ತಿಳಿವಳಿಕೆಯುಳ್ಳವರಾಗಿರುವರು. ಆದರೆ, ಅದೃಷ್ಟ