ಪುಟ:ವಿದ್ಯಾರ್ಥಿ ಕರಭೂಷಣ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Mwwwx ಪರಿಚ್ಛೇದ ೨ ೧೩೧ ಗಳಿಗೂ ಮನುಷ್ಯನಿಗೂ ಈ ಭಾಗದಲ್ಲಿರುವ ವ್ಯತ್ಯಾಸವು, ಸಾಮಾನ್ಯ ಮನುಷ್ಯನಿಗೂ ಸಾರಾಸಾರವಿಚಾರಜ್ಞನಾದ ಮನುಷ್ಯನಿಗೂ ಇರುವುದು. ಸಾಮಾನ್ಯವಾಗಿ, ಜನಗಳು ಸ್ವಾಭಿಮಾನವುಳ್ಳವರು ; ಪರರು ಮಾಡಿದ ಕೆಲಸಗಳಲ್ಲಿ ಎಷ್ಟು ಗುಣಗಳಿದ್ದಾಗ್ಯೂ, ಅದನ್ನು ಉಪರಿಪ್ಲವವಾಗಿ ನೋಡಿ ನಿಂದಿಸುವ ಸ್ವಭಾವವೂ ಜನರಲ್ಲಿರುವುದುಂಟು. ಇಂಧ ದುರಭಿ ಮಾನಪ್ರತಿನಿವಿಷ್ಟರಾದವರು, ಸಾರಾಸಾರವಿಚಾರಜ್ಞರಲ್ಲಿ ಗಣನೀಯರಾ ಗುವುದಿಲ್ಲ. ದುರಭಿಮಾನರಹಿತರಾಗಿ ವಿಚಾರಮಾಡುವ ಶಕ್ತಿಯನ್ನು ಸಂಪಾದಿಸಿಕೊಳ್ಳುವುದು ಅತ್ಯಂತ ಆವಶ್ಯಕವು, ನಮ್ಮನ್ನು ಯಾರಾ ದರೂ ಸ್ತುತಿಸಿದರೆ ನಾವು ಸಂತೋಷಪಡುತ್ತೇವೆ ; ದೂಷಿಸಿದರೆ ವ್ಯಸನ ಪಡುತ್ತೇವೆ. ಈ ಸ್ತುತಿಗೂ ನಿಂದೆಗೂ ನಾವು ಅರ್ಹರೇ ಅಲ್ಲವೇ ಎಂಬು ದನ್ನು ಪರಿಶೀಲಿಸಿ, ಮೃಷಾಸ್ತುತಿಯಿಂದ ಹಿಗ್ಗದೆ, ಮೃಷಾನಿಂದೆಯಿಂದ ತಗ್ಗದೆ, ತಮ್ಮ ಕೆಲಸಗಳನ್ನು ಮಾಡತಕ್ಕವರು, ಬಹಳ ವಿರಳರಾಗಿರುತ್ತಾರೆ. ಯಾರಾದರೂ ನಮ್ಮನ್ನು ನಿಂದಿಸಿದರೆ, ನಾವು ಆ ನಿಂದೆಗೆ ಅರ್ಹರೇ ಅಲ್ಲವೇ ಎಂಬುದಾಗಿ, ಸ್ವಾಭಿಮಾನವನ್ನು ಬಿಟ್ಟು ಪರೀಕ್ಷಿಸಿಕೊಳ್ಳಬೇಕು. ನಿಂದೆಗೆ ಕಾರಣವಾದ ದುಲ್ಯಾಪಾರಗಳನ್ನು ನಾವು ಮಾಡಿದ್ದರೆ, ಅದರಿಂದುಂಟಾದ ಅನರ್ಧಗಳನ್ನು ಪರಿಹಾರಮಾಡಬೇಕು, ನಿಂದಿಸಲ್ಪಡು ವುದಕ್ಕೆ ಅರ್ಹವಾದ ದುರ್ಗುಣಗಳು ನಮ್ಮಲ್ಲೇನಾದರೂ ಇದ್ದರೆ, ಅವು ಗಳನ್ನು ಬಿಡಬೇಕು. ಯಾರಾದರೂ ನಮ್ಮನ್ನು ಸ್ತುತಿಸಿದರೆ, ಆ ಸ್ತುತಿ ಯಿಂದ ಹಿಗ್ಗದೆ, ಅಂಧ ಸ್ತುತಿಗೆ ನಾವು ಅರ್ಹರೇ ಅಲ್ಲವೇ ಎಂಬುದಾಗಿ ಪರೀಕ್ಷಿಸಬೇಕು, ನಾವು ಅನರ್ಹರೆಂದು ಗೊತ್ತಾದರೆ, ಸ್ತುತಿಯನ್ನು