ಪುಟ:ವಿದ್ಯಾರ್ಥಿ ಕರಭೂಷಣ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ವಿದ್ಯಾರ್ಥಿ ಕರಭೂಷಣ ಕೂಡಲೆ ವಿನೋದಕರವಾದ ಯಾವುದಾದರೂ ಇತರ ಕೆಲಸಗಳನ್ನಿಟ್ಟು ಕೊಂಡು, ಪುನಃ ವ್ಯಾಸಂಗಮಾಡುವುದಕ್ಕು ಪಕ್ರಮಿಸುತಬಂದರೆ, ಕೆಲವು ದಿವಸಗಳಲ್ಲಿ, ಅತ್ಯಂತ ಕ್ಷೇಶಕರವಾದ ಕೆಲಸವನ್ನು ಬೇಸರಿಕೆಯಿಲ್ಲದೆಯೇ ಮಾಡತಕ್ಕ ಶಕ್ತಿಯ ಬರುವುದು, ಈ ವ್ಯಾಸಂಗದ ಮರ್ಮವನ್ನು ತಿಳಿದುಕೊಳ್ಳದೆ, ಬೇಸುಕೆಯಾದಮೇಲೂ ವ್ಯಾಸಂಗಮಾಡು ತಬಂದರೆ, ಆರೋಗ್ಯವೂ ತಪ್ಪುವುದು ; ರೋಗಾದಿಗಳೂ ಸಂಭವಿಸುವುವು ; ಕೊನೆಗೆ ಅಕಾಲಮರಣವೂ ಉಂಟಾಗುವುದು. ಇಂಧ ಅನರ್ಧಕ್ಕೆ ಗುರಿಯಾಗದೆ, ವ್ಯಾಸಂಗದಲ್ಲಿಯೂ ವಿಹಾರಗಳಲ್ಲಿಯೂ ಏರ್ಪಾಡುಗಳನ್ನು ಮಾಡಿಕೊ ಳ್ಳುವುದು ಅತ್ಯಂತ ಆವಶ್ಯಕವು ವಿದ್ಯಾರ್ಧಿಗಳು ಮೇಜಿನ ಬಳಿಯಲ್ಲಿ ಕುಳಿತುಕೊಂಡು ವ್ಯಾಸಂಗ ಮಾಡುವುದುಂಟು. ವ್ಯಾಸಂಗಮಾಡುವಾಗ್ಗೆ ಕೆಲವರು ಮಲಗಿಕೊಂಡೂ, ಇನ್ನು ಕೆಲವರು ಈಜಿಛೇರೆಂಬ ಕುರ್ಚಿಯ ಮೇಲೆ ಒರಗಿಕೊಂಡೂ ಓದು ವುದುಂಟು. ಹೀಗೆ ಮಾಡುವುದರಿಂದ, `ಬೆನ್ನು ಮೂಳೆ ಕ್ರಮಕ್ರಮವಾಗಿ ಬೊಗ್ಗಿ ಹೋಗುತ್ತದೆ. ಶರೀರ ನೆಟ್ಟಗಿರುವುದೇ ಅಸಾಧ್ಯವಾಗುತ್ತದೆ. ನಿಂತುಗೊಂಡು ವ್ಯಾಸಂಗಮಾಡುವದೇ ಉತ್ತಮವು, ಬರೆಯುವಾಗ ಮಾತ್ರ ಕುಳಿತುಕೊಳ್ಳಬಹುದು, ಆಗಲೂ ಕೂಡ, ಬರೆಯುವುದಕ್ಕೆ ಬೊಗ್ಗ ಬಾರದು, ನೆಟ್ಟಗೆ ಕುಳಿತುಕೊಂಡು ಬರೆಯುವುದನ್ನು ಅಭ್ಯಾಸ ಮಾಡಬೇಕು, ಬೊಗ್ಗಿಕೊಂಡು ಒರೆಯತಕ್ಕವರ ಬೆನ್ನು ಮೂಳೆಯ ಬೊಗ್ಗಿ ಹೋಗುವುದು, ಹಾಗಾಗುವುದಕ್ಕೆ ಅವಕಾಶಕೊಡಕೂಡದು. ನಾಲ್ವತ್ತು ವರ್ಷ ವಯಸ್ಸಾದ ಮೇಲೆ ನಿಂತುಗೊಂಡು ಓದತಕ್ಕವರೇ