ಪುಟ:ವಿದ್ಯಾರ್ಥಿ ಕರಭೂಷಣ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾರ್ಥಿ ಕರಭೂಷಣ ಉದ್ಯೋಗವನ್ನು ಕೊಟ್ಟು ಕೊಳ್ಳಬಹುದು ಆದರೆ, ಲಕ್ಷದಲ್ಲಿ ಒಬ್ಬನೂ, ಆರೀತಿ ಆತ್ಮಾವಲಂಬಿಯಾಗಿರುವುದು ಅಪೂರ್ವವು ಪ್ರಾಯಕವಾಗಿ, ಇಂಧವರು ಅಶಿಕ್ಷಿತರಾಗಿ, ತಮ್ಮ ಬುದ್ದಿಗೂ ಕೈ ಕಾಲುಗಳಿಗೂ ಕೆಟ್ಟ ಉದ್ಯೋಗಗಳನ್ನು ಕಲ್ಪಿಸಿಕೊಳ್ಳುವರು ಇದರಿಂದಲೇ, ಬಹುಜನಗಳು ದುರ್ಮಾರ್ಗಪ್ರವೃತ್ತರಾಗಿ, ತಾವಿರತಕ್ಕೆ ಕಾಲವು ಕಲಿಗಾಲವೆನ್ನಿ ಸುವು ದಕ್ಕೆ ಸಹಾಯ ಭೂತರಾಗುವರು. ರಾಜನೇ ಕಾಲಕ್ಕೆ ಕಾರಣವೆಂದು ನಮ್ಮ ಮಹರ್ಷಿಗಳು ಹೇಳಿರುವರು. ಇದಕ್ಕೆ ಅರ್ಧವೇನು ? ಮಾತಾ ಪಿತೃಗಳೂ ಬಂಧುಮಿತ್ರರೂ ಪೋಷಕರೂ ಇಲ್ಲದ ಮಕ್ಕಳನ್ನು , ಯಾವ ರಾಜನು ಪಿತೃನಿರ್ವಿಶೇಷವಾಗಿ ಪರಿಪಾಲಿಸಿ ಸುಶಿಕ್ಷಿತರನ್ನಾಗಿಯೂ ದೇಶಕ್ಕೆ ಅಲಂಕಾರಭೂತರನ್ನಾಗಿಯೂ ಮಾಡುವನೋ, ಅವನೇ ಧರ್ಮ ಪ್ರಧಾನವಾಗಿರುವ ರಾಜ್ಯ ನಿರ್ಮಾಣಕ್ಕೆ ಕಾರಣಭೂತನೆಂದು ತಿಳಿಯ ಬೇಕು, ಪ್ರಭುಗಳು ಪ್ರಯತ್ನ ಮಾಡಿದರೆ, ಈ ಭಾಗದಲ್ಲಿ ಸಹಾಯ ಮಾಡ ತಕ್ಕ ದೇಶಾಭಿಮಾನಿಗಳು ಬೇಕಾದಹಾಗೆ ಸಿಕ್ಕುತ್ತಾರೆ , ಇವರ ಸದಿಷ್ಟಾ ರ್ಧಗಳೆಲ್ಲವೂ ಪರಿಪೂರ್ಣವಾಗುತ್ತವೆ. ಆದುದರಿಂದಲೇ, ರಾಜನು ಕಾಲಕ್ಕೆ ಕಾರಣನೆಂದು ನಮ್ಮ ಹಿರಿಯರು ಹೇಳಿರುವರು ಬಾಲ್ಯವೇ ವಿದ್ಯಾಭ್ಯಾಸಕ್ಕೆ ಅನುಕೂಲವಾದ ಕಾಲವು ಆಗ ಸ್ತ್ರೀ ಪುರುಷರಿಗೆ ಸಾಂಸಾರಿಕ ಕ್ಷೇಶಗಳಿರುವುದಿಲ್ಲ. ವಿದ್ಯಾಭ್ಯಾಸಮಾಡುವು ದಕ್ಕೂ ವಿನಯಾದಿ ಸದ್ಗುಣಗಳನ್ನು ಆರ್ಜಿಸುವುದಕ್ಕೂ ಎಷ್ಟು ಮಟ್ಟಿಗೆ ಏಕಾಗ್ರಚಿತ್ರವು ಬೇಕೋ ಅಷ್ಟು ಮಟ್ಟಿಗೆ ಐಕಾಗ್ರವನ್ನು ಹೊಂದು ವುದು, ಬಾಲ್ಯಾವಸ್ಥೆಯಲ್ಲಿ ಸಾಧ್ಯವೇ ಹೊರತು, ಇನ್ನಾವಾಗಲೂ ಸಾಧ್ಯ