ಪುಟ:ವಿದ್ಯಾರ್ಥಿ ಕರಭೂಷಣ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೩ ೧೬೫. ಹೋಗುವುದು, ಸೌದೆಯೊಡೆಯುವುದು, ಇತರ ಕೆಲಸಗಳನ್ನು ಮಾಡು ವುದು, ಚಿತ್ರ ಬರೆಯುವುದು, ಉಪನ್ಯಾಸಗಳನ್ನು ಬರೆಯುವುದು, ಉಪ ನ್ಯಾಸಗಳನ್ನು ಮಾಡುವುದು, ಈ ಕೆಲಸಗಳಲ್ಲಿ ಯಾವಾಗ ಯಾವುದು ಅನುಕೂಲವೋ ಅದನ್ನು ಅವರು ಮಾಡುವರು. ಮನಸ್ಸು, ಒಂದೇ ಕೆಲಸ ದಲ್ಲಿ ಬಹಳಹೊತ್ತು ವಿನಿಯೋಗಿಸಲ್ಪಟ್ಟರೆ-ಬೇಚಾರನ್ನು ಹೊಂದುವುದು. ಬೇಚಾರಾದಕೂಡಲೆ ಆ ಕೆಲಸವನ್ನು ಬಿಟ್ಟು ಬೇರೆ ಕೆಲಸದಲ್ಲಿ ಅದಕ್ಕೆ ಉದ್ಯೋಗವನ್ನು ಕೊಟ್ಟರೆ, ಆ ವುದ್ಯೋಗವೇ ವಿಶ್ರಾಂತಿಯಾಗಿ ಪರಿಣ ಮಿಸುವದು. ಕೆಲವುಸಂದರ್ಭಗಳಲ್ಲಿ ನಿದ್ರೆಯ ಕೂಡ ಅತ್ಯಂತ ಆವಶ್ಯಕವಾಗಿರು ವುದು ವ್ಯಾಸಂಗದ ಕ್ಷೇಶದಿಂದ ತಲೆನೋವು ಒಂದು ಬಹಳ ಬೇಜಾರಾ ಗುವುದುಂಟು. ಕೂಡಲೆ ಮಲಗಿಕೊಂಡು ಕಾಲುಗಂಟಿ-ಅಧವಾ ಅರ್ಧ ಗಂಟೆ ನಿದ್ದೆ ಮಾಡಿದಾಗ್ಯೂ, ನಿದ್ದೆ ಬಾರದಿದ್ದರೆ ಕಣ್ಣ ಮುಚ್ಚಿಕೊಂಡು ಮಲಗಿದ್ದಾಗ್ಯೂ ವಿಶ್ರಾಂತಿಯು ಬಹಳವಾಗಿ ಉಂಟಾಗುವುದು. ಮೆ|| ಗ್ಲಾರ್ಡ್‌ ಸಾಹೇಬರಿಗೆ, ಕವು ಕಾಲಗಳಲ್ಲಿ ಹಗಲೂ ರಾತ್ರಿಯ ಕೆಲಸಬೀಳುತಿದ್ದಿತು ; ನಿದ್ದೆಗೆ ಅವಕಾಶವೇ ಆಗುತ್ತಿರಲಿಲ್ಲ ; ರಾತ್ರಿಯ ಹೊತ್ತು ಪಾರ್ಲಿಮೆಂಟ್ ಮಾಟಿಂಗು ಆಗುತಿದ್ದಿತು. ಅಂಧ ಕಾಲ ದಲ್ಲಿಯೂ ಕೂಡ, ಇವರು ಮಧ್ಯೆಮಧ್ಯೆ ವಿಶ್ರಾಂತಿಯನ್ನು ತೆಗೆದು ಕೊಳ್ಳುತ ತಮ್ಮ ಕೆಲಸವನ್ನು ಬಹಳಚೆನ್ನಾಗಿ ಮಾಡುತಿದ್ದರು, ಪಾರ್ಲಿ ಮೆಂಟಿನಲ್ಲಿ ಒಂದೊಂದುವೇಳೆ ಐದಾರುಗಂಟೆಗಳು ಅವಿಚ್ಛಿನ್ನ ವಾಗಿ ಮಾತ ನಾಡಬೇಕಾದ ಸಂದರ್ಭವೂ ಬರುತಿದ್ದಿತು. ಅಂಧ ಸಂದರ್ಭಗಳಲ್ಲಿ ಬೇಜಾ