ಪುಟ:ವಿದ್ಯಾರ್ಥಿ ಕರಭೂಷಣ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ವಿದ್ಯಾರ್ಥಿ ಕರಭೂಷಣ ನ್ಯೂನತೆಯನ್ನು ಪರಿಹರಿಸಿ ಹಾಸ್ಟಲುಗಳು ಅನ್ವರ್ಧವಾದ ಗುರು ಕುಲಗಳಾಗಿ ಪರಿಣಮಿಸುವಂತೆ ಮಾಡುವುದು, ಮುಖ್ಯ ಕತ್ರವ್ಯವಾಗಿ ರುವುದು. ಕಾಲವು ಅಮೂಲ್ಯವಾದುದು. ಕಷ್ಟಪಟ್ಟರೆ ಸಕಲ ಸಂಪತ್ತುಗ ಇನ್ನೂ, ಸಂಪಾದಿಸಬಹುದು ; ವ್ಯರ್ಧವಾಗಿ ಕಳೆಯಲ್ಪಟ್ಟ ಕಾಲವು ಪುನಃ ಬರುವುದಿಲ್ಲ, ಕಳೆದುಕೊಳ್ಳಲ್ಪಟ್ಟ ಸಮಯವು ಪುನಃ ಒದಗುವುದಿಲ್ಲ. ಸರ್ವರಿಗೂ ಆಗಾಗ್ಗೆ ಅನುಕೂಲವಾದ ಕಾಲವು ಒದಗುವುದುಂಟು. ಆಗ ಅದರ ಪ್ರಯೋಜನವನ್ನು ಹೊಂದದೆ ಹೋದರೆ, ಪುನಃ ಅಂಧ ಸಮಯವು ಸಿಕ್ಕುವುದು ಕಷ್ಟ ಲೋಕ ದಲ್ಲಿ, ಅಸಾಧಾರಣವಾದ ದೈತ್ಯ ಸ್ಪೃಶ್ಯಗಳನ್ನು ಪಡೆದು, ಹಿಡಿದ ಕೆಲಸವನ್ನು ಸಾಧಿಸುವುದರಲ್ಲಿ ಅಪ್ರತಿ ಹತವಾದ ಸಂಕಲ್ಪವುಳ್ಳವರು ಇರುತ್ತಾರೆ. ಅಂಧ ಜನಗಳು, ಎಷ್ಟಗಳಿಗೆ ಸ್ವಲ್ಪವೂ ಭಯಪಡದೆ, ಬಂದ ವಿಘ್ನಗಳನ್ನೆಲ್ಲ ನಿವಾರಣೆಮಾಡಿಕೊಂಡು ತಮ್ಮ ಸಂಕಲ್ಪಗಳನ್ನು ನೆರವೇರಿಸಿಕೊಳ್ಳುವರು. ವಿಘ್ನಗಳು ದುರ್ಜಯ ಗಳಾದರೆ, ಅವುಗಳನ್ನು ಜಯಿಸುವುದರಲ್ಲಿ ಪ್ರಾಣವನ್ನು ಬೇಕಾದರೂ ಬಿಡುವರು, ಬ್ರಿಟಿಷ್ ನ್ಯಾಯಾಧಿಪತಿಗಳಲ್ಲಿ ಅದ್ವಿತೀಯರಾದ ಲಾರ್ಡ್ ಬೇರ್ಕರವರನ್ನು ಬಂದೀಖಾನೆಗೆ ಹಾಕಿದರು. ಅಷ್ಟು ದೊಡ್ಡ ಪದವಿ ಯಲ್ಲಿರತಕ್ಕ ಇತರ ದೊಡ್ಡ ಮನುಷ್ಯರಿಗೆ ಇಂಧ ಅವಸ್ಥೆಯು ಬಂದಿದ್ದರೆ, ಅವರೆಂದಿಗೂ ಬದುಕುತ್ತಿರಲಿಲ್ಲ. ಆದರೆ, ಬೇರ್ಕರವರು ಜೈಲಿನಲ್ಲಿದ್ದು ಗೊಂಡು, ಲೋಕವನ್ನು ದ್ಧರಿಸುವುದಕ್ಕೆ ಸಾಧಕಗಳಾದ ಅನೇಕ ಗ್ರಂಧ ಗಳನ್ನು ಬರೆದರು. ಕಾಲವು ಬಹಳ ಬೆಲೆಯುಳ್ಳುದೆಂಬುದಾಗಿಯೂ, ಎಲ್ಲಿ