ಪುಟ:ವಿದ್ಯಾರ್ಥಿ ಕರಭೂಷಣ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ವಿದ್ಯಾರ್ಥಿ ಕರಭೂಷಣ www ಆದಾಗ್ಯೂ, ಹೆಚ್ಚಾದ ಬುದ್ದಿ ಬಲವುಳ್ಳ ಮಾವುತನಿಗೆ ಅಧೀನವಾಗಿರುವುದು ಹೀಗೆಯೇ, ಪ್ರಪಂಚದಲ್ಲಿ ಮೇಧಾವಿಗಳು ರಾಜ್ಯಭಾರಮಾಡುವರು ; ಬುದ್ಧಿ ಹೀನರು ಸೇವಕವೃತ್ತಿಯಲ್ಲಿರುವರು. ಇಂತಹ ಬುದ್ದಿ ಬಲವು ಹೆಚ್ಚು ವದಕೆ ವಿದ್ಯಾಭ್ಯಾಸವೇ ಮುಖ್ಯ ಕಾರಣವು ಈ ಪ್ರಪಂಚಸೃಷ್ಟಿಯಾದ ಮೊದಲುಗೊಂಡು, ಅನೇಕ ಪಂಡಿತೋತ್ತಮರು ಅನೇಕ ಗ್ರಂಧಗಳನ್ನು ಬರೆದು, ಸಕಲ ವಸ್ತು ತತ್ವಗಳನ್ನೂ ಕೂಡ ವಿಚಾರಮಾಡಿದ್ದಾರೆ. ಅವು ಗಳನ್ನು ಪರಿಶೀಲಿಸಿ-ಆವಶ್ಯಕವಾದ ಕಾಲದಲ್ಲಿ ಅವುಗಳನ್ನು ಮೇಲುಪಂಕ್ತಿ ಯನ್ನಾಗಿ ಮಾಡಿಕೊಂಡು ಕೆಲಸಮಾಡತಕ್ಕವರು, ತಮ್ಮ ಇಷ್ಟಾರ್ಥ ಗಳನ್ನು ಪಡೆಯುವರು ; ಪಶುಗಳಂತೆ, ದೇವರು ಕೊಟ್ಟ ಬುದ್ದಿಯನ್ನು ವಿನಿಯೋಗಿಸದಿರತಕ್ಕನರು, ನರನಶುಗಳಾಗಿಯೇ ಇರಬೇಕಾಗವುದು. ಸಕಲಮನುಷ್ಯರಿಗೂ ಬುದ್ದಿಯು ಒಂದೇ ರೀತಿಯಾಗಿರುವುದಿಲ್ಲ ಹಾಗೆ ಒಂದೇ ರೀತಿಯಾಗಿದ್ದಾಗ್ಯೂ, ಜನಗಳ ವ್ಯಾಸಂಗದಲ್ಲಿ ವ್ಯತ್ಯಾಸ ವಿದ್ದೇ ಇರುವುದು, ಕೆಲವರಿಗೆ ಅನ್ನ ವಸ್ತ್ರಕ್ಕೆ ಅವಕಾಶವಿರುತ್ತದೆ, ಜೀವನ ಕ್ಯಾಗಿ ವಿಶೇಷ ಕಷ್ಟ ಪಡುವುದು ಅಂಧವರಿಗೆ ಅವಶ್ಯಕವಾಗಿರುವುದಿಲ್ಲ. ಕೆಡುವುದಕ್ಕೆ ಸಾಧನಗಳೂ ಸಮಯಗಳೂ ಕೂಡ ವಿಶೇಷವಾಗಿರುವುದಿಲ್ಲ. ಕೃಷಿಯನ್ನು ಮಾಡಿ ಮುಂದಕ್ಕೆ ಬರಬೇಕೆಂಬ ಆಶೆಯ ಇರುತ್ತದೆ. ಈ ಆನುಕೂಲ್ಯಗಳೇ, ಒಳ್ಳೆಯ ಅದೃಷ್ಟಗಳೆನ್ನಿಸಿಕೊಳ್ಳುವುವು, ಮತ್ತೆ ಕೆಲ ವರಿಗೆ, ಈ ಆನುಕೂಲ್ಯವೊಂದೂ ಇರುವುದಿಲ್ಲ. ಬಹಳ ಕಷ್ಟ ಪಟ್ಟು ಅನ್ನ ವಸ್ತ್ರಗಳನ್ನು ಸಂಪಾದಿಸಿ ಕುಟುಂಬಭರಣವನ್ನು ಮಾಡಿ ಕೊಳ್ಳಬೇಕಾ ಗುತ್ತದೆ. ಹೀಗೆ ಜನಗಳಿಗೆ ಅನುಕೂಲಗಳೂ ಪ್ರತಿಕೂಲಗಳೂ ಅನೇಕ