ಪುಟ:ವಿದ್ಯಾರ್ಥಿ ಕರಭೂಷಣ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧ ೫೧ MM ಪಡೆದು, ಅನಂತರ ತೀರ್ಥಯಾತ್ರೆಯ ವ್ಯಾಜದಿಂದ ದೇಶಾಟನವನ್ನೂ ಪಂಡಿತಭಾಷಣವನ್ನೂ ಮಾಡುತ್ತ ತಾವು ಆರ್ಜಿಸಿರತಕ್ಕೆ ಜ್ಞಾನದಲ್ಲಿ ಯಾವುದು ಸಿದ್ದಾಂತರೂಪವಾದುದೋ ಅದನ್ನು ಗೊತ್ತು ಮಾಡಿಕೊಳ್ಳು ವುದಕ್ಕೂ, ಯಾವುದು ಮಿಥ್ಯಾರೂಪವಾದುದೋ ಅದನ್ನು ಪರಿತ್ಯಾಗ ಮಾಡುವುದಕ್ಕೂ ಅವಕಾಶವನ್ನು ಹೊಂದುವುದಕ್ಕೋಸ್ಕರ, ಪಂಡಿತರೇ ಮೊದಲಾದ ಸರ್ವಜನಗಳಲ್ಲಿಯೂ ಸೇರಿ, ಅವರ ಉದ್ಯೋಗಗಳನ್ನೂ ಅವರ ಮನೋಗತಗಳನ್ನೂ ಅವರ ವಾಕ್ಕುಗಳನ್ನೂ ಅವುಗಳಿಗಿರತಕ್ಕ ಪರಸ್ಪರಸಂಬಂಧವನ್ನೂ ಪರಿಶೀಲಿಸಿ ತಿಳಿದುಕೊಳ್ಳಬೇಕು, ಈ ರೀತಿಯಲ್ಲಿ ಆರ್ಜಿಸಲ್ಪಟ್ಟ ಜ್ಞಾನವನ್ನು ಲೋಕವ್ಯವಹಾರ ಜ್ಞಾನವನ್ನು ವರು. ಎಲ್ಲ ಜ್ಞಾನಗಳಿಗಿಂತಲೂ ಈ ವ್ಯವಹಾರಜ್ಞಾನವು ಅತ್ಯುತ್ತಮವಾದುದು. ಲೋಕವ್ಯವಹಾರಜ್ಞಾನವುಳ್ಳವನಾಗಿಯೂ, ಧರ್ಮಮಾರ್ಗೈಕಪರಾಯಣ ನಾಗಿಯ ಇರತಕ್ಕವನು, ಇಹಪರ ಸೌಖ್ಯಗಳೆರಡನ್ನೂ ಹೊಂದುವನು. ಲೋಕವ್ಯವಹಾರಜ್ಞಾನವನ್ನು ಮಾತ್ರ ಪಡೆದು ಧರ್ಮಮಾರ್ಗಾವಲಂಬನೆ ಯಲ್ಲಿ ಪರಾಣ್ಮುಖನಾದವನು, ಈ ಪ್ರಪಂಚದ ಸಂಪತ್ತನ್ನು ಹೊಂದಿ ದಾಗ್ಯೂ, ಇದರಿಂದುಂಟಾಗಬೇಕಾದ ಪರಮಸುಖವನ್ನು ಹೊಂದುವು ದಿಲ್ಲ ಇವನು, ಈ ಲೋಕದ ಸಂಪತ್ತನ್ನು ಹೊಂದಿ, ಹೊನ್ನು ಹೆಣ್ಣು ಮಣ್ಣುಗಳಿಗೆ ಭ್ರಮಿಸಿ, ಅಜ್ಞಾನದಿಂದುಂಟಾಗತಕ್ಕ ತಾಪತ್ರಯಗಳೆಂಬ ಸುಳಿಯಲ್ಲಿ ಸಿಕ್ಕಿ, ತಪ್ಪಿಸಿಕೊಳ್ಳುವುದಕ್ಕೆ ಶಕ್ತಿಯಿಲ್ಲದೆ, ಕೊನೆಗೆ ಅಧೋಗತಿಯನ್ನು ಹೊಂದುವನು. ಇದಕ್ಕೆ ಸಕ್ಕೋತ್ರಮವಾದ ಉದಾ ಹರಣೆಯು ಜ್ಞಾನವಾಸಿಷ್ಠ ದಲ್ಲಿರುವುದು.