ಪುಟ:ವಿದ್ಯಾರ್ಥಿ ಕರಭೂಷಣ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೧ ୫ଟ ದಲ್ಲಿರುವ ಯುಕ್ತಿಯುಕ್ತವಾದ ಒಂದು ದೃಷ್ಟಾಂತವು, ಇಲ್ಲಿ ಸೂಚಿಸಲ್ಪ ಡುವುದಕ್ಕೆ ಯೋಗ್ಯವಾಗಿದೆ. ಅಂಬರೀಷನೆಂಬ ರಾಜನು, ಭಾಗವತೋತ್ರ ಮನು. ವಿದ್ಯೆಯನ್ನೂ, ವಿನಯಾದಿ ಸದ್ದು ಣಗಳನ್ನೂ, ಮನೋವಾಕ್ಕರ ಗಳಲ್ಲಿ ಧರಯುಕ್ತನಾಗಿರುವುದನ್ನೂ, ಇವನು ಆಚರಣೆಯಲ್ಲಿಟ್ಟು ಕೊಂಡಿ ದ್ದನು. ಒಂದಾನೊಂದು ದಿವಸ, ದೂರಾಸನು ಇವನ ಬಳಿಗೆ ಬಂದನು ; ಅಂಬರೀಷನು ಅವನಿಗೆ ಅವನ ಪದವಿಗನುರೂಪವಾದ ಮತ್ಯಾದೆಗಳನ್ನೆಲ್ಲ ಮಾಡಿ, ಸ್ನಾನವನ್ನು ತೀರಿಸಿಕೊಂಡು ಭೋಜನಕ್ಕೆ ಬರಬೇಕೆಂದು ಪ್ರಾರ್ಥಿ ಸಿದನು, ಆಮೇಲೆ ದೂರಾಸಮುನಿಯು ಸ್ನಾನಕ್ಕೆ ಹೊರಟುಹೋಗಿ, ಎಷ್ಟು ಹೊತ್ತಾದರೂ ಬರಲಿಲ್ಲ. ಆಗ ಅಂಬರೀಷನು ತನ್ನ ದ್ವಾದಶೀ ವ್ರತಕ್ಕೆ ಲೋಪವುಂಟಾಗುವುದೆಂದು, ಜಲಪಾರಣೆಯನ್ನು ಮಾಡಿದನು ಇದನ್ನು ತಿಳಿದು ದೂಲ್ಯಾಸಮುನಿಯು ಕೋಪಮಾಡಿಕೊಂಡು, ಅಂಬರೀ ಷನನ್ನು ನಾನಾ ವಿಧವಾಗಿ ನಿಂದಿಸಿ, ಅವನನ್ನು ದಹಿಸಿಬಿಡುವುದಕ್ಕೋಸ್ಕರ ಒಂದು ಶಕ್ತಿಯನ್ನು ಪ್ರಯೋಗಮಾಡಿದನು. ಕೂಡಲೆ, ಮಹಾವಿಷ್ಣು ವಿನ ಚಕ್ರ ರೂಪವಾದ ಆ ಶಕ್ತಿಯು, ದೂರಾಸನ ಶಕ್ತಿಯನ್ನು ದಹಿಸಿ, ಅವನನ್ನೂ ದಹಿಸು ವದಕ್ಕೆ ಹೋಯಿತು. ಆಗ ಬ್ರಹ್ಮನೂ ಮಹೇಶ್ವರನ ಇವನನ್ನು ರಕ್ಷಿಸುವುದಕ್ಕೆ ಸಮರ್ಥರಾಗದೆಹೋದರು. ಕೊನೆಗೆ ದೂರಾ ಸನು ವಿಷ್ಣುವನ್ನು ಮರೆಹೊಕ್ಕು, ಅನಂತರ ಅಂಬರೀಷನನ್ನೂ ಮರೆ ಹೊಕ್ಕು, ತನ್ನ ಪ್ರಾಣವನ್ನು ರಕ್ಷಿಸಿಕೊಂಡನು. ಈ ವಿಷಯವಿಲ್ಲಿಗಿರಲಿ, ಮುಖ್ಯವೇನೆಂದರೆ, ವಿದ್ಯಾವಿನಯಸಂಪನ್ನನಾಗಿಯ, ಧರ್ವಮಾರ್ಗೈಕ ಪರಾಯಣನಾಗಿಯ ಇರತಕ್ಕವನನ್ನು, ಉನ್ಮತ್ತತೆಯಿಂದ ಮೂಲೋ “ಣ