ಪುಟ:ವಿದ್ಯಾರ್ಥಿ ಕರಭೂಷಣ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

iii ಪ್ರಕೃತ ಗ್ರಂಧವನ್ನು ಮರುಭಾಗವಾಗಿ ಮಾಡಬೇಕೆಂದು ನಿಶ್ಚಯಿಸಿ, ಈಗ ಈ ಪ್ರಧಮಭಾಗವು ಮುದ್ರಿಸಲ್ಪಟ್ಟಿರುವುದು, ಉಳಿದ ಎರಡು ಭಾಗಗಳೂ ಇಷ್ಟರಲ್ಲಿಯೇ ಮುದ್ರಿಸಲ್ಪಡುವುವು. , ಇದರಲ್ಲಿರುವ ವಿಷಯಗಳು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವೇ ಆವಶ್ಯಕವೆಂದು ತಿಳಿಯಬಾರದು ; ಬಾಲಕರ ತಾಯಿ ತಂದೆಗಳಿಗೂ ಉಪಾ ಧ್ಯಾಯರಿಗೂ ಆವಶ್ಯಕಗಳಾದ ಎಷ್ಟೋ ವಿಷಯಗಳು, ಇದರಲ್ಲಿ ಅಡಕ ವಾಗಿರುವುವು. ಈ ಗ್ರಂಧದ ಪರನದಿಂದ ನಮ್ಮ ಬಾಲಕರಿಗೆ ಸ್ವಲ್ಪ ಮಟ್ಟಿ ಗಾದರೂ ಪ್ರಯೋಜನವುಂಟಾದರೆ, ಆಗ ಇದನ್ನು ರಚಿಸುವುದಕ್ಕಾಗಿ ಪಟ್ಟಿ ಶ್ರಮವು ಸಫಲವಾದಂತೆ ಭಾವಿಸಲ್ಪಡುವುದು. ಇದರಲ್ಲಿ ಯಾವುದಾದರೊಂದು ಪ್ರಾಮಾದಿತವಾದ ದೋಷವಿದ್ದರೆ, ಅದನ್ನು ಗುಣಗ್ರಹಣ ತತ್ಪರರಾದ ಪ್ರಾಜ್ಞರು ಮನ್ನಿಸಿ ಸೌಹಾರ್ದದಿಂದ ತಿಳಿಯಿಸಿದ ಪಕ್ಷದಲ್ಲಿ, ಮುಂದಣ ಭಾಗಗಳನ್ನು ಕ್ರಮಪಡಿಸುವುದಕ್ಕೆ ಅನುಕೂಲಿಸುತ್ತದೆಂದು ಪ್ರಾರ್ಧನೆ. ೨೩-೩ -೧೪ ) ಮೈಸೂರು | ಎಂ, ವೆಂಕಟಕೃಷ್ಣಯ್ಯ, ಗ್ರಂಥಕರ್ತ,