ಪುಟ:ವಿದ್ಯಾರ್ಥಿ ಕರಭೂಷಣ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೨ وف ಒಬ್ಬ ಮನುಷ್ಯನು ಬಂದು, 66 ನನ್ನ ಹೆಂಡತಿಗೆ ಪ್ರಸವಯಾತನೆಯುಂ ಟಾಗಿ ದೇಹದಮೇಲೆ ಪ್ರಜ್ಞೆ ತಪ್ಪಿದೆ ; ಶಿಶುವು ಉದರದಲ್ಲಿಯೇ ಸತ್ತಿರು ವಂತೆ ತೋರುತ್ತದೆ. ತಾವು ಬಂದು ಸತ್ತ ಮಗುವನ್ನು ಉದರದಿಂದ ತೆಗೆದು ನನ್ನ ಕುಟುಂಬವನ್ನು ಉದ್ಧರಿಸಬೇಕು. ” ಎಂದು ಪ್ರಾರ್ಥಿಸಿ ದನು. ಹೀಗೆ ಹೇಳುತ್ತಿರುವಾಗಲೇ, ಆ ಡಾಕ್ಟರ ಹೆಂಡತಿ ಸತ್ತಳೆಂದು ವರ್ತಮಾನ ಬಂದಿತು. ಆಗ ಡಾಕ್ಟರು, ತಮ್ಮ ಮನೆಗೆ ಹೋಗುವುದನ್ನು ಸಿಲ್ಲಿಸಿ, ಆ ಮನುಷ್ಯನ ಮನೆಗೆ ಹೋಗಿ, ಊದರದಲ್ಲಿ ಸತ್ತಿದ್ದ ಮಗುವನ್ನು ಈಚೆಗೆ ತೆಗೆದು, ಬಾಣಂತಿಗೆ ಅಪಾಯ ತಪ್ಪುವವರೆಗೂ ಅಲ್ಲಿದ್ದು, ತರು ವಾಯ ಸ್ವರ್ಗಕ್ಷಳಾದ ಹೆಂಡತಿಯ ಉತ್ತರಕ್ರಿಯೆಗಳ ವಿಷಯಕ್ಕೆ ಗಮನವನ್ನು ಕೊಟ್ಟರು ಈ ಡಾಕ್ಟರು, ಸರಕಾರದ ಸಂಬಳವನ್ನು ತೆಗೆದು ಕೊಂಡು ಕೆಲಸಮಾಡಿದಾಗ್ಯೂ, ಸಂಬಳಕ್ಕೆ ತಕ್ಕಷ್ಟು ಕೆಲಸವನ್ನು ಮಾಡು ವುದು ತನ್ನ ಕರ್ತವ್ಯವೆಂದು ಭಾವಿಸದೆ, ಹಗಲಲ್ಲಿಮಾತ್ರವಲ್ಲದೆ ರಾತ್ರಿಯ ಲ್ಲಿಯೂ ಕೂಡ ಮರು ನಾಲ್ಕು ಆವೃತ್ತಿ ಆಸ್ಪತ್ರೆಯ ವಾರ್ಡುಗಳಲ್ಲಿ ಒಳಳ ಯಾತನೆಪಡುವ ರೋಗಿಗಳ ಕಷ್ಟವನ್ನು ತಪ್ಪಿಸುವುದರಲ್ಲಿ ಆದರತೋರಿಸು ತಿರುವರು. ಇದೇ -ಸದುದ್ಯೋಗಿಗಳ ಲಕ್ಷಣವು, ಇಂಧವರು, ವಿರಾಮ ಎಲ್ಲ ವೆಂದು ಎಂದಿಗೂ ಹೇಳುವುದಿಲ್ಲ ಸೋಮಾರಿಗಳಿಗೆ ಕಾಲವೆಲ್ಲ ವಿರಾಮವಾಗಿರುತ್ತದೆ ; ಆದಾಗ್ಯೂ, ನನಗೆ ವಿರಾಮವಿಲ್ಲ ವೆಂದು ಅವರು ಪ್ರಲಪಿಸುತ್ತಾರೆ, ಪ್ರಪಂಚದಲ್ಲಿ ಅಸಾಧ್ಯವಾದ ಕೆಲಸಗಳನ್ನು ಕೂಡ ಸಾಧಿಸುವುದರಲ್ಲಿ ಉದ್ಯೋಗಮಾಡಿ ಮನೋರಧಪ್ರಾಪ್ತಿಯನ್ನು ಹೊಂದಿ ದವರು ಅನೇಕರಿರುವರು. ಇವರಲ್ಲಿ ಯಾರೂ ನನಗೆ ವಿರಾಮವಿಲ್ಲ ವೆಂದು