ಪುಟ:ವಿದ್ಯಾರ್ಥಿ ಕರಭೂಷಣ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೬ ವಿದ್ಯಾರ್ಥಿ ಕರಭೂಷಣ ವರ್ತಮಾನಪತ್ರಿಕೆಯಲ್ಲಿ ಮುದ್ರಿಸಲ್ಪಟ್ಟಿರುವುವು ಬ್ರಿಟಿಷ್ ಜನಗಳು ಲೋಕೋತ್ತರವಾದ ಪದವಿಯನ್ನು ಹೊಂದುವುದಕ್ಕೆ, ಹೀಗೆ ಕಾಲ ವಿಭಾಗದ ವಿಷಯದಲ್ಲಿಯ, ಪುಸ್ತಕ ರಿಕಾರ್ಡು ಮೊದಲಾದುವು ಗಳನ್ನು ಬೇಕಾದಾಗ ಸಿಕ್ಕುವಂತೆ ಕ್ರಮವಾಗಿ ಇಡತಕ್ಕ ವಿಷಯದಲ್ಲಿಯ, ಸಮಸ್ತ ವಿಷಯಗಳನ್ನೂ ಲೇಶವೂ ಸಾವಕಾಶಮಾಡದೆ ಆ ಕ್ಷಣದಲ್ಲಿಯೇ ವ್ಯವಸ್ಥೆ ಮಾಡುವ ಶಕ್ತಿಯನ್ನು ಸಂಪಾದಿಸಿಕೊಳ್ಳತಕ್ಕ ವಿಷಯದಲ್ಲಿ, ಇವರು ನಿಸರ್ಗವಾಗಿ ಹೊಂದಿರತಕ್ಕ ಶ್ರದ್ಧೆಯೇ ಮುಖ್ಯ ಕಾರಣವು. ಉದ್ಯೋಗವು ಪುರುಷ ಲಕ್ಷಣವೆಂದು ನಮ್ಮ ಹಿರಿಯರು ಹೇಳು ವರು ಇದು ಆಬಾಲವೃದ್ದರಿಗೂ ಅಕ್ಷಣವಾದುದು ಎಲ್ಲಾ ಉದ್ಯೋ ಗಗಳೂ ಪುರುಷಲಕ್ಷಣವೆಂದು ಹೇಳುವುದಕ್ಕಾಗುವುದಿಲ್ಲ ನದುದ್ಯೋ ಗಗಳು ಮಾತ್ರ ಪುರುಷ ಲಕ್ಷಣವೆಂದು ಹೇಳಲ್ಪಡಬೇಕು ದುರುದ್ಯೋಗ ಗಳಿ೦ದ ಅನೇಕ ಅನರ್ಧಗ ನಗುವುವು ಇಹಪರಗಳೆರಡೂ ತಪ್ಪವದಕ್ಕೆ ದುರುದ್ಯೋಗಗಳು ಕಾರಣವಾಗುವವ, ಅರ್ಧದಂಡ (ಜುಲ್ಯಾನೆ) ಮೊದ ಅ.ಗೊಂಡು ಮರಣದಂಡನೆಯವರೆಗೂ ದಂಡ ವಿಧಿಸಲ್ಪಡುವುದಕ್ಕೆ ಅರ್ಹ ವಾದ ದುರುದ್ಯೋಗಗಳಿರುವುವು ಅಂಧ ದುರುದ್ಯೋಗಗಳನ್ನು ಮಾಡು ವುದಕ್ಕಿಂತ, ಉದ್ಯೋಗವಿಲ್ಲದಿರುವುದೇ ಮೇಲು ಆದರೆ ಉದ್ಯೋಗವಿ ಅದೆಯೇ ಇರುವುದಕ್ಕಾಗುವುದಿಲ್ಲ ಸರಿಯಾದ ಉದ್ಯೋಗವನ್ನು ಕೊಡದಿದ್ದರೆ, ಮನಸ್ಸು ತಾನೇ ದುರುದ್ಯೋಗಗಳನ್ನು ಸಂಪಾದಿಸಿಕೊ ಳ್ಳುವುದು ಅನುಭವಸಿದ್ಧವಾಗಿಯೇ ಇದೆ ; ಮನಸ್ಸಿನಲ್ಲಿ ಮಾಡಲ್ಪಟ್ಟ ಸಂಕ ಲ್ಪದಂತೆ ಕೈಕಾಲುಗಳು ನಡೆಯುವುದೂ ಪ್ರಸಿದ್ಧವಾಗಿರುವುದು ಸರ್