ಪುಟ:ವೇಣೀಬಂಧನ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೨) ವಾಗ್ಯೂಷಣ, ನು_ ಛೇ ಛೇ ಹಾಗೆಂದಿಗೂ ಅಲ್ಲ. ಕೌರವರು ನಿಮ್ಮ ಬಾಂಧವರಲ್ಲವೆ ? ಅವರಿಗೆ ಅನಿಷ್ಯವನ್ನು ಚಿಂತಿಸುವದುಂಟೆ? ಅವರಕೂಡ ನೀವು ಹ್ಯಾಗದ ರೂ ಒಡಂಬಡಿಕೆಯನ್ನೇ ಮಾಡಿಕೊಳ್ಳತಕ್ಕದ್ದು ! ಈ ವಿಷಯದಲ್ಲಿ ನಾನಂತೂ ನಿಮ್ಮಿಂದ ಬೇರೆಯಾಗಿದ್ದೇನೆ. ನನ್ನ ಮನಸಿನಲ್ಲಿ ಕೌರವರ ವಿಷಯವಾಗಿ ಸ್ವಾಭಾವಿಕ ದ್ವೀಪವು ನೆಲೆಗೊಂಡಿರುವದು. ಧರ್ಮರಾಜನು ಅವರ ಕೂಡ ಒಪ್ಪಂದ ಮಾಡಿಕೊಳ್ಳುವನಂತೆ; ನೀವು ಮೂವರೂ ಅದಕ್ಕೆ ಸಮ್ಮತಿಸಿರು ವಿರಂತೆ; ಆದರೆ ನಾನು ಆ ಒಪ್ಪಂದಕ್ಕೆ ಎಷ್ಟು ಮಾತ್ರವೂ ಒಪ್ಪಿಕೊಳ್ಳುವ ದಿಲ್ಲ. ಇಷ್ಮೆ ಅಲ್ಲ. ನನ್ನ ಕೈಲಾದಮಟ್ಟಿಗೆ ಆ ಒಪ್ಪಂದವನ್ನು ಮುರಿಯ ಲಿಕ್ಕೆ ಪ್ರಯತ್ನ ಮಾಡುತ್ತೇನೆ.” ಎಂದು ಅಂದನು. ಈ ಮಾತುಗಳನ್ನು ಕೇಳಿ ಸಹದೇವನು- ಅಣ್ಣಾ, ನೀವು ಹೀಗೆ ಸಿಟ್ಟಾದರೆ ಧರ್ಮ ರಾಜನಿಗೆ ಬೇದವಾಗಲಿಕ್ಕಿಲ್ಲವೆ?” ಅಂದನು. ಅದಕ್ಕೆ ಭೀಮಸೇನನು- ಏನಂದಿ ? ಧರ್ಮರಾಜನಿಗೆ ಖೇದವಾಗುತ್ತದೆಯೆ ? ಹಾಗಿದ್ದರೆ ನೆರೆದ ಸಭೆಯಲ್ಲಿ ದುಃಶಾಸನನು ಪಾಂಚಾಲಿಯ ತುರುಬು ಹಿಡಿದು ದರದರ ಎಳೆದು ತಂದು ತೀರ ಅಪಮಾನಾಸ್ಪದವಾದ ಕೆಲಸವನ್ನು ಮಾಡಿದಾಗ್ಯೂ ಅವನು ಸುಮ್ಮನೆ ಕೂಡುತ್ತಿದ್ದನೆ? ವಲ್ಕಲಗಳನ್ನುಟ್ಟು ಕೊಂಡು ಕಾಡು ಜನರ ಸಹವಾಸದಲ್ಲಿ ಹನ್ನೆರಡು ವರ್ಷ ಕಾಲ ಕಳೆಯುತ್ತಿದ್ದನೆ? ಮತ್ತು ವಿರಾಟರಾಜನ ಅರ ಮನೆಯಲ್ಲಿ ಅತಿ ಕೀಳರದ ಕೆಲಸಗಳನ್ನು ಮಾಡಲಿಕ್ಕೆ ಒಡಂಬಡುತ್ತಿದ್ದನೆ ? ಇಲ್ಲ, ಸಹದೇವಾ, ಆ ಧರ್ಮರಾಜನ ಅಂತಃಕರಣದಲ್ಲಿ ಸಿಟ್ಟು, ಅಪಮಾನ, ಬೇದಗಳೆಂಬ ವಿಕಾರಗಳು ಇಲ್ಲೇ ಇಲ್ಲ. ಏನು ಮಾಡತಕ್ಕದ್ದದೆ ? ನಾನಂತೂ ಇನ್ನು ಮೇಲೆ ಅವನ ಹಿರಿಯತನವನ್ನು ಒತ್ತಟ್ಟಿಗೆ ಕಟ್ಟಿಟ್ಟು ಈ ಗದಾಪ್ರಹಾರದಿಂದ ಕೌರವ ಕುಲದ ಸಂಹಾರ ಮಾಡುವದನ್ನು ನಿಶ್ಚಯಿಸಿ ದ್ದೇನೆ.” ಹೀಗೆಂದು ಮಾತಾಡುತ್ತ ಮಾತಾಡುತ್ತ ಸಹದೇವನೊಡನೆ ಪಾ೦ ಚಾಲಿಯ ಮಂದಿರದ ಬಳಿಗೆ ಬಂದನು. ಆಗ ದ್ರುಪದನಂದನೆಯು ಮಂದಿ ರದಲ್ಲಿದ್ದಿಲ್ಲವಾದಕಾರಣ ಅವಳ ದಾರೀ ನೋಡುತ್ತ ಆ ಉಭಯತರು ಅಲ್ಲಿ ಯೇ ಸ್ವಲ್ಪ ಹೊತ್ತು ಮಾತಾಡುತ್ತ ಕುಳಿತುಕೊಂಡರು. ಆ ಕಾಲಕ್ಕೆ ನೀನು ಸೇನನು ತಮಾ, ಸಹದೇವಾ, ಶ್ರೀಕೃಷ್ಣನು ಕೌರವರಕೂಡ ಸಂಧಿ ಯನ್ನು ಮಾಡುವ ನಿಮಿತ್ತವಾಗಿ ಹೋಗಿರುವನಂತೆ; ಏನಂತ ಸಂಧಿಯನ್ನು ಮಾಡುವನು ? ನೀನು ಎಲ್ಲಿ ಯಾ ? ” ಎಂದು ಕೇಳಲು, ಸಹದೇವನು