ಪುಟ:ವೇಣೀಬಂಧನ.djvu/೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

(L) ವಾಗ್ಯೂಷಣ, Ninn-vu ಧಾನವಾಯಿತು. ಆದರೂ ಅವರು ತುಟಿಬಿಚ್ಚಿ ಎರಡು ಮಾಡಲಿಲ್ಲ. ನಾನು ಮಾತ್ರ ಅವಳ ಬಿರಿನುಡಿಯನ್ನು ಸಹಿಸದೆ ಕೂಡಲೆ ಅವಳ ಮಾತಿಗೆ ಪ್ರತ್ಯುತ್ತರವಾಗಿ-ಭಾನುಮತಿಬಾಯಿಯವರೆ, ನಿಮ್ಮ ಹೆಳಲು ಬಿಚ್ಚಿದ ಹೊರತು ತಮ್ಮ ಹೆಳಲು ಹಾಕಿಕೊಳ್ಳಲಿಕ್ಕಿಲ್ಲೆಂದು ನಮ್ಮ ದೇವಿಯವರು ಪ್ರತಿಜ್ಞೆಯನ್ನು ಮಾಡಿರುವರು ಕಂಡಿರಾ !! ಎಂದು ಹೇಳಿದೆನು. ದಾನಿಯ ಈ ಸಮಯೋಚಿತವಾದ ಉತ್ತರವನ್ನು ಕೇಳಿ ಭೀಮಸೇನನಿಗೆ ಬಹಳ ಸಂತೋಷವಾಯಿತು. ಕೂಡಲೆ ಅವನು ತನ್ನ ಮೈಮೇಲಿನದೊಂದು ಆಭ ರಣವನ್ನು ತೆಗೆದು, ಆ ದಾನಿಗೆ ಉಚಿತವಾಗಿ ಕೊಟ್ಟು, ಶಾಬಾಸ ಮಗಳ ಶಾಭಾಸ ಬಹಳ ಚನ್ನಾಗಿ ಮಾತಾಡಿದೆ ಅಂದನು. ಆದರೆ ಭಾನುಮತಿಯು ಆಡಿದ ಮಾತಿಗೆ ಅವನು ಕೋಪದಿಂದ ಕಿಡಿಕಿಡಿಯಾಗಿ ಹುಬ್ಬು ಗಂಟಿಕ್ಕಿ ಎದ್ದು ನಿಂತು ಕೈಯೊಳಗಿನ ಗದೆಯನ್ನು ಗರಗರನೆ ತಿರು ವು, ದೌಪದಿಯ ಕಡೆಗೆ ದೃಷ್ಟಿಯನ್ನಿಟ್ಟು,--ಎಲೈ ಪಾಂಚಾಲ ರಾಜಪುತ್ರಿ ಯಾದ ದೌಪದಿಯೇ, ಸಮಾಧಾನ ತಾಳು, ಸಮಾಧಾನ ತಾಳು, ಇನ್ನು ಸ್ವಲ್ಪ ದಿವಸಗಳಲ್ಲಿಯೇ ನಾನು ಈ ನನ್ನ ಪ್ರಚಂಡವಾದ ಗದೆಯ ಪೆಟ್ಟಿ ನಿಂದ ಯಾವತ್ತು ಕುರುಕುಲವನ್ನು ಸಂಹಾರಮಾಡುವೆನು; ಆ ನೀಚನಾದ ದುಃಶಾಸನನ ಎದೆಯನ್ನು ನೀ ಬಿಸಿಬಿಸಿ ರಕ್ತವನ್ನು ಕುಡಿದು ನನ್ನ ಕೋಪಾನವನ್ನು ಶಾಂತಗೊಳಿಸುವೆನು. ಮತ್ತು ಆ ಅಧಮಾಧಮನಾದ ದುರ್ಯೋಧನನ ತೊಡೆಗಳನ್ನು ಮುರಿದು ಪುಡಿಪುಡಿಮಾಡಿ ಚಲ್ಲುವೆನು. ಮತ್ತು ಅವರೆಲ್ಲರ ರಕ್ತದಿಂದ ನಿನ್ನನ್ನು ಎರೆದು, ಎಲ್ಲವುಗಳಿಂದ ಸಿಕ್ಕಿ ರಕ್ತ ಮಯವಾದ ನನ್ನ ಕೈಗಳಿಂದಲೇ ಈ ನಿನ್ನ ಬಿಟ್ಟಿದ ಹೆಳಲನ್ನು ಹಾಕು ವೆನು. ಇದೇ ನನ್ನ ಪ್ರತಿಜ್ಞೆಯು; ಇದನ್ನು ನಾನು ಮೊದಲೇ ಮಾಡಿರು ವೆನು, ಈಗ ಇದನ್ನು ನಿಶ್ಚಯವಾಗಿ ಕೊನೆಗಾಣಿಸುವೆನು, ಎಂದು ಸಾರಿ ಸಾರಿ ನುಡಿದನು.