ಪುಟ:ವೇಣೀಬಂಧನ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

60 ಏಾಗೂಷಣ, www.rrrr r rr ..... ......... . . ಳನ್ನು ಮಾಡುತ್ತಿದ್ದೆನೋ ಏನೋ, ದೇವರೇ ಪಾರು ಮಾಡಿದನು. ನಿಪ್ಪಾ ರಣವಾಗಿ ನನ್ನ ಮೇಲೆ ಬರುತ್ತಿದ್ದ ಶ್ರೀಹತ್ಯಾ ಪಾತಕವು ದೈವಭೋಗ ದಿಂದಲೇ ದೂರವಾಯಿತು ಎಂದು ಸಮಾಧಾನಪಟ್ಟನು, ಆದರೂ ಅವರು ಇನ್ನುಮುಂದೆ ಏನು ಮಾತಾಡುವರೋ ಕೇಳಬೇಕೆಂದು ಅಲ್ಲಿಯೇ ಸುಮ್ಮನೆ ನಿಂತುಕೊಂಡನು. ಆ ಬಳಿಕ ಗೆಳತಿಯು ಗೆಳತೀ, ಭಾನುಮತಿ, ಇದು ಕೆಟ್ಟ ಕನಸು; ಇದಕ್ಕೆ ಬೇಗನೆ ಶಾಂತಿಯನ್ನು ಮಾಡಿಸು; ಅಂದರೆ ಅರಿ ಸ್ಮವು ದೂರಾಗುವದು ಎಂದು ಹೇಳಿ, ಆಕಾಶದ ಕಡೆಗೆ ಕೈಮುಗಿದು, ಎಲೈ, ದೇವಿ, ಭವಾನೀ ಶಾಂಕರೀ ನಮ್ಮ ಈ ಕುರುಕುಲವನ್ನು ರಕ್ಷಿಸು ! ರಕ್ಷಿಸು !! ಎಂದು ಬೇಡಿಕೊಂಡಳು. ಅಪ್ಪರಲ್ಲಿ ಬಾಲಸೂರ್ಯನು ಮೇಲಕ್ಕೇರಿ ತನ್ನ ಕೆಂಪು ಕಿರಣ ಗಳನ್ನು ಉದ್ಯಾನದೊಳಗಿನ ಲತಾಮಂಟಪಗಳ ಮೇಲೆ ಹರವಿದ ಕಾರಣ ಅಲ್ಲಿಯ ನೆಲವು ಕೇಶರ ಕಸ್ತೂರಿಗಳಿಂದ ಸಾರಣೆ ಮಾಡಿದಂತೆ ಕಂಗೊಳಿಸು ತಿತ್ತು. ಭಾನುಮತಿಯು ಮೇಲಕ್ಕೇರಿಬಂದ ಸೂರ್ಯನಾರಾಯಣನನ್ನು ಕಂಡು ಅವನ ಪೂಜಾನಿಮಿತ್ತವಾಗಿ ಸಾಹಿತ್ಯಗಳನ್ನು ಕೊಡೆಂದು ದಾನಿಗೆ ಆಜ್ಞಾಪಿಸಿದಳು. ಮರೆಗೆ ನಿಂತು ಇದನ್ನೆಲ್ಲ ನೋಡುತ್ತಿದ್ದ ದುರ್ಯೋಧನನು ಭಾನುಮತಿಯ ಹತ್ತಿರ ಹೋಗಲಿಕ್ಕೆ ಇದೇ ತಕ್ಕ ಪ್ರಸಂಗವೆಂದು ಅರಿತು, ದಾನಿಯ ಕೈಯೊಳಗಿನ ಪೂಜಾ ಸಾಹಿತ್ಯಗಳ ಪಟ್ಟಿಯನ್ನು ತಕೊಂಡು, ಸೂರ್ಯಾಭಿಮುಖವಾಗಿ ನಿಂತಿರುವ ಭಾನುಮತಿಯ ಹಿಂದೆ ನಿಂತುಕೊಂಡು ಪೂಜಾದ್ರವ್ಯಗಳನ್ನು ಕೊಡುತ್ತಿದ್ದನು. ಭಾನುಮತಿಯು ಹಿಂದಿರುಗಿ ನೋಡದೆ ಸೂರ್ಯನನ್ನೇ ನೋಡುತ್ತ ಎಲೈ ಸಹಸ್ರರಶ್ಮಿಯಾದ ಸೂರ್ಯ ನಾರಾಯಣನೇ, ನಿನಗೆ ನಾನು ಅನನ್ಯಭಾವದಿಂದ ನಮಸ್ಕರಿಸುತ್ತೇನೆ. ನನಗೆ ರಾತ್ರಿಯಲ್ಲಿ ಬಿದ್ದ ಕೆಟ್ಟ ಕನಸಿನ ಅರಿವು ನನ್ನ ಪ್ರಾಣನಾಥ ರಿಗೂ ಅವರ ತಮ್ಮಂದಿರಿಗೂ ಬಡಕೊಳ್ಳದಂತೆ ದಯಪಾಲಿಸು ಎಂದು ಬೇಡಿಕೊಂಡಳು. ತರುವಾಯ ಬೇರೆ ದೇವತೆಗಳ ಪೂಜೆಗಾಗಿ ಇನ್ನಿಷ್ಟು ಹೂವುಗಳನ್ನು ಕೊಡೆಂದು ದಾನಿಗೆ ಬೇಡಲು, ದುರ್ಯೋಧನನು ಹೂಗ ಳನ್ನು ಕೊಡುವಾಗ ಬೇಕೆಂತಲೇ ಕೆಲವು ಹೂವುಗಳನ್ನು ನೆಲದಮೇಲೆ ಚಲ್ಲಿದನು, ದೇವಿಯು ದಾನಿಗೆ ಸಿಟ್ಟು ಮಾಡುತ್ತ ಹಿಂದಿರುಗಿ ನೋಡು ಕ್ವಾಳ; ಸ್ವತಃ ಮಹಾರಾಜರೇ ಪೂಜಾದ್ರವ್ಯಗಳನ್ನು ಹಿಡಕೊಂಡು ದಾಸಿಯ