ಪುಟ:ವೇಣೀಬಂಧನ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಳೇಬಂಧನ, annananan ಸ್ಥಳದಲ್ಲಿ ನಿಂತಿರುವರು; ಮತ್ತು ದೇವೀ, ಸಿಟ್ಟಾಗಬೇಡ, ಈ ಪರಜನಕ್ಕೆ ಇಂಥ ಕೆಲಸಗಳನ್ನು ಮಾಡುವ ಅಭ್ಯಾಸವಿಲ್ಲ. ಅವರಿಗೆ ಶಿಕ್ಷಣವನ್ನು ಕೊಡುವದು ನಿನ್ನ ಕೈಯಲ್ಲಿ ಅದೆ. ನಾನಾದರೂ ನಿನ್ನ ಪರಿಜನರಲ್ಲಿ ಒಬ್ಬನೆಂದು ತಿಳಿ, ಮುಗುಳುನಗೆಯಿಂದಲೂ, ಮೃದು ಮಧುರ ಭಾಷಣ ಗಳಿಂದಲೂ ನನಗೂ ಶಿಕ್ಷಣವನ್ನು ಕೊಡು ಎಂದು ವಿನಯದಿಂದ ಹೇಳಿ ಕೊಳ್ಳುತ್ತಿರುವರು. ಇದನ್ನು ಕಂಡು ಭಾನುಮತಿಯು ನಾಚಿ ಮೈಮೇಲಿನ ವಸ್ತ್ರಗಳನ್ನು ಸಾವರಿಸಿಕೊಂಡು.. -ಒತ್ತಟ್ಟಿಗೆ ಸರಿದು ಮುಗುಳು ನಗೆಯಿಂದ ಲೂ ಅತಿ ವಿನಯದಿಂದಲೂ ಪ್ರಾಣದೊಡೆಯರೇ, ಈ ಪಾದಗಳಿಗೆ ಜಯ ವಾಗಬೇಕೆಂದು ನಾನು ಒಂದು ವ್ರತವನ್ನು ಮಾಡುವ ಸಂಕಲ್ಪವನ್ನು ಮಾ ಡಿದ್ದೇನೆ. ಅದನ್ನು ಮಾಡಿದ ಹೊರತು ನನ್ನ ಮನಸಿಗೆ ಸಮಾಧಾನವಾಗು ವದಿಲ್ಲ. ಅದಕ್ಕೆ ತಾವು ಅಪ್ಪಣೆಯನ್ನು ದಯಪಾಲಿಸುವಿರೆಂದು ಬೇಡಿಕೊ ಳ್ಳುತ್ತೇನೆ. ಆ ಮಾತಿಗೆ ದುರ್ಯೋಧನನು ಪ್ರಿಯೆ, ನಿನ್ನ ಕನಸಿನ ವೃತ್ತಾಂತ ನನ್ನೆಲ್ಲ ನಾನು ಕೇಳಿದೆನು. ಅದರಲ್ಲೇನೂ ಹುರುಳಿಲ್ಲ. ವ್ರತೋಪವಾಸಾದಿ ಗಳಿಂದ ನಿನ್ನ ಈ ಸುಕುಮಾರ ದೇಹವನ್ನು ಏತಕ್ಕೆ ಕಸ್ಮಪಡಿಸುವಿ? ರಣ ಭೂಮಿಯಲ್ಲಿ ನಾಲ್ಕೂ ಕಡೆಗೂ ಪಸರಿಸಿರುವ ಪ್ರಚಂಡವಾದ ಸೈನ್ಯವೂ, ಕರ್ಣ ದ್ರೋಣರಂಥ ಮಹಾ ಮಹಾ ಪರಾಕ್ರಮಿಗಳೂ, ಶೌರ್ಯದಲ್ಲಿ ಒಬ್ಬರಿಗಿಂತ ಒಬ್ಬರು ಮಿಗಿಲಾಗಿರುವ ನನ್ನ ನೂರು ಮಂದಿ ತಮ್ಮಂದಿರೂ ಇರಲು, ನಿನಗೆ ಯಾರ ಭಯವು ? ಎಂದು ಧೈರ್ಯವನ್ನು ಹೇಳಲು, ಭಾ ನುಮತಿಯು ಸಮಾಧಾನಪಟ್ಟು, ಹೌದು, ಪ್ರಾಣನಾಥರೆ, ಹೌದು; ತಾವು ಅನ್ನುವದು ನಿಜವು, ಈ ಪಾದಗಳ ಸನ್ನಿಧಿಯಲ್ಲಿ ನಾನು ಇದ್ದರೆ ನನಗೆ ಯಾರ ಭಯವೂ ಇಲ್ಲ. ಸರ್ವಕಾಲವೂ ಇತ್ತಕಡೆಯ ಒಡೆಯರ ಮನೋ ರಥವನ್ನು ಪೂರ್ಣ ಮಾಡುವದೊಂದೇ ಚಿಂತೆಯಲ್ಲದೆ ಬೇರೆ ಏನುಂಟು ? ಎಂದು ಬಿನ್ನವಿಸಿದಳು; ಅದಕ್ಕೆ ದುರ್ಯೋಧನನು ತನ್ನ ಮನಸ್ಸಿನೊಳ ಗಿನ ಉದ್ದೇಶವನ್ನು ಪ್ರಿಯಪತ್ನಿಗೆ ತಿಳಿಸಿದನು; ಆಗ ಆ ದಂಪತಿಗಳ ಮೋ ರೆಯ ಮೇಲೆ ಉಲ್ಲಾಸದ ಕಳೆಯು ಉಕ್ಕುತ್ತಿತ್ತು. ಅದೇ ಕಾಲಕ್ಕೆ ಒಂದು ದೊಡ್ಡ ಬಿರುಗಾಳಿಯು ಬಿಟ್ಟಿತು. ಸಮೀಪದಲ್ಲಿ ನಾಲ್ಕೂ ಕಡೆಗೆ ಗದ್ದಲ ವಾದದ್ದು ಕೇಳಬಂತು, ಆಗ ಭಾನುಮತಿಯು ಹೆದರಿ ದುರ್ಯೋಧನನ ಕೊರಳಿಗೆ ಗಟ್ಟಿಯಾಗಿ ಅಟ್ಟಿ ಮಿಟ್ಟಿ ಹಾಕಿ ಬಿಗಿಯಾಗಿ ಅಪ್ಪಿಕೊಂಡಳು.