ಪುಟ:ವೇಣೀಬಂಧನ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಬಂಧನ,

  • *PPPPPY

- ದುಃಖಿಸಿ ಫಲವೇನು ? ಸಮಾಧಾನವನ್ನು ತಾಳು, ಎಂದು ಸಂತೈಸುತ್ತಿರಲು, ಅಶ್ವತ್ಥಾಮನು-ಮಾವಾ, ತಾ ತನು ಮರಣಹೊಂದಿದ ಮೇಲೆ ನಾನು ಇನ್ನು ಏತಕ್ಕೆ ಬದುಕಲಿ ? ನಾನಿಲ್ಲದಿರಲು ಪರಲೋಕದಲ್ಲಿ ಅವನಿಗೆ ಅಡಿಗಡಿಗೆ ತೊಂದರೆಯಾಗುತ್ತಿದ್ದೀತು. ಬೇಗನೆ ಹೋಗಿ ಆತನನ್ನು ಸಮಾಧಾನ ಪಡಿಸುತ್ತೇನೆ. ಎಂದು ನಿಟ್ಟುಸುರು ಬಿಟ್ಟು ಸುಮ್ಮನಾದನು, ಆಗೆ ಕೃಪನು ಮಗುವೆ, ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ತಂದೆಯ ಸೇವೆ ಯನ್ನು ಮಾಡುವದು ಮಗನ ಕರ್ತವ್ಯವು. ನೀನು ಜೀವದಿಂದಿದ್ದು ತರ್ಪಣೋದಕದಿಂದ ಸತ್ತ ತಂದೆಯನ್ನು ಸಂತುಷ್ಮಪಡಿಸುವದು ನಿನ್ನ ಕರ್ತವ್ಯವು. ಆದಕಾರಣ ನೀನು ಇನ್ನು ಮೇಲೆ ವ್ಯರ್ಥವಾಗಿ ಚಿಂತಿಸಬೇಡ. ಎಂದು ಹೇಳಿದನು. ಅಶ್ವತ್ಥಾಮನು ಮಾವಾ ಬ್ರಾಹ್ಮಣರು ಈ ಶಸ್ತ್ರಗಳನ್ನು ಹಿಡಿಯಕೂಡದು. ಈ ಶಸ್ತ್ರದಿಂದಲೇ ನಮ್ಮ ತಂದೆಯು ಮೃತಪಟ್ಟನು. ಆದಕಾರಣ ನಾನು ಇಂದಿನಿಂದ ಈ ಶಸ್ತ್ರಗಳನ್ನು ಬಿಟ್ಟುಬಿಡುವೆನು ಎಂದು ಕೈಯೊಳಗಿನ ಶಸ್ತ್ರವನ್ನು ನೆಲದಮೇಲೆ ಕಲ್ಲಿ ಕೊಟ್ಟನು. ಆಗ ಮುಂದಿನ ಶಬ್ದ ಗಳು ಅಲ್ಲಿ ಕುಳಿತವರ ಕಿವಿಗೆ ಬಿದ್ದವು, ಎಲ ಎಲೈ ಕುರುಪಾಂಡವರ ಸೈನ್ಯದೊಳಗಿನ ವೀರಾಗ್ರಣಿಗಳ ಕೇಳಿರಿ, ದ್ರೋಣಾಚಾರ್ಯರು ಪುತ್ರ ಶೋಕದಿಂದ ಆಯುಧಗಳನ್ನು ಬಿಟ್ಟು ಧ್ಯಾನಾಸಕ್ತರಾಗಿ ಕುಳಿತ ಸಮಯ ದಲ್ಲಿ ಆ ದುಷ್ಕ ಪಾಂಚಾಲ ತನಯನಾದ ದೃಷ್ಟ್ಯದ್ಯುಮ್ಮನು ಕೊರಳು ಕೊಯ್ಯುವದನ್ನು ಕಂಡು ನೀವೆಲ್ಲರು ಸುಮ್ಮನಿರಬಹುದೆ ? ಧರ್ಮಭ್ರಸ್ಮರೆ, ಪಾತಕಿಗಳ, ಈ ಧರ್ಮವಿರುದ್ಧವಾದ ಕಾರ್ಯವನ್ನು ಮಾಡಗೊಡಲಿಕ್ಕೆ ನಿಮ್ಮ ಮನಸಿಗೆ ನಾಚಿಕೆ ಬರಲಿಲ್ಲವೇ ? ಈ ಉದ್ಧಾರಗಳನ್ನು ಕೇಳಿದ ಕೂ ಡಲೆ ಅಶ್ವತ್ಥಾಮನಲ್ಲಿ ವೀರಾವೇಶವು ಜಾಗ್ರತವಾಯಿತು. ಅವನು ಸಿಟ್ಟಿನಿಂದ ಸಂತಪ್ತನಾದನು; ಅವನ ಮೈಯಲ್ಲಿ ನಡುಗು ಹುಟ್ಟಿತು. ಕಂಣುಗಳು ರಕ್ತ ವನ್ನು ಕಾರುವವೋ ಏನೋ ಅನ್ನುವಂತೆ ಕೆಂಪಾದವು. ಕೂಡಲೆ ಅವನು ಶಸ್ತ್ರವನ್ನು ತಕ್ಕೊಂಡು ಎದ್ದು ನಿಂತು “ ಎಲಾ ನೀಚಾ, ಪಾಂಚಾಲ ಕಲಾ ಧಮಾ, ಈ ಅಶ್ವತ್ಥಾಮನು ಜೀವದಿಂದಿರಲು ನಮ್ಮ ತಾತನ ಶುಭ್ರವಾದ ಚಂಡಿಕೆಗೆ ಹ್ಯಾಗೆ ಕೈ ಹಚ್ಚಿದೆ? ಎಲಾ ರಣಹೇಡಿಯೇ ಪ್ರಳಯಕಾಲದ ಮಾರುತನಂತೆ ನಾನು ಈ ಪಾಂಡು ಪಾಂಚಾಲಸೇನೆಯನ್ನು ಕಸದಂತೆ ಹಾರಿಸಿ ಬಿಡುವೆನೆಂಬುದನ್ನು ಮರೆತೆಯಾ ? ಮಾವಾ ಯಾವನು ನಮ್ಮ