ಪುಟ:ವೇಣೀಬಂಧನ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

hL ವಾಗ್ಯೂಷಣ, ತಂದೆಯನ್ನು ಕೊಂದನೋ, ಯಾವನು ಈ ಕಾರ್ಯಕ್ಕೆ ಸಹಾಯ ಮಾಡಿ ದನೋ, ಯಾವನು ಈ ಕಾರ್ಯಕ್ಕೆ ಸಮ್ಮತಿಯನ್ನು ಕೊಟ್ಟೆನೋ. ಯಾವಾತನು ಈ ಕಾರ್ಯವನ್ನು ನೋಡಿ ಸುಮ್ಮನೆ ಇದ್ದನೋ, ಅವನ ಶ್ರೀಕೃಷ್ಣನಿರಲಿ, ಧರ್ಮನಿರಲಿ, ಭೀಮನಿರಲಿ, ಅರ್ಜುನನಿರಲಿ, ದ್ರುಪದ ತನಯನಿರಲಿ, ಆ ಶಸ್ತ್ರಧಾರಿಗಳಾದ ನರಪಶುಗಳನ್ನೆಲ್ಲ ಕೊಂದು ಅವರ ರಕ್ತಮಾಂಸಗಳಿಂದ ಭೂತಗಳಿಗೆ ಉಣಬಡಿಸುವೆನು. ಇದೇ ನನ್ನ ಪ್ರತಿ ಜ್ಞೆಯು ” ಎಂದು ವೀರಾವೇಶದಿಂದ ಮಾತಾಡುತ್ತಿರಲು, ಕೃಪನು, ಕಂದಾ, ನೀನು ಅಂಥವನೇ ಸರಿ. ಭೀಷ್ಮ ದ್ರೋಣರ ತರುವಾಯ ಕೌರವರ ಸೈನ್ಯಕ್ಕೆ ನೀನೇ ನಾಯಕನು. ನಿನ್ನ ಹೊರತು ಮತ್ತೊಬ್ಬರು ಯಾರಿರುವರು? ಆದಕಾರಣ ನೀನೇ ಕುರುಸೈನ್ಯದ ಒಡೆತನವನ್ನು ಸ್ವೀಕರಿಸು. ಈ ಕೆಲಸ ವನ್ನು ನಿನಗೇ ಒಪ್ಪಿಸುವದಕ್ಕಾಗಿ ದುರ್ಯೋಧನನು ನಿನ್ನ ದಾರೀ ನೋಡುತ್ತಿ ದ್ದಾನು. ನಡೆ, ಬೆಗನೆ ಅಲ್ಲಿಗೆ ಹೋಗೋಣ ಎಂದು ಇಬ್ಬರೂ ದುರ್ಯೋ ಧನನ ಕಡೆಗೆ ನಡೆದರು. ೪ ನೇ ಪ್ರಕರಣ, = > < -- ವಾಗ್ವಾದ. ಇತ್ತ ದುರ್ಯೋಧನನು ರಣಭೂಮಿಯ ಒಂದು ಮಗ್ಗಲು ಆಲದ ಮರದ ಬುಡದಲ್ಲಿ ಕರ್ಣನ ಸಂಗಡ ದ್ರೋಣಾಚಾರ್ಯರ ಸ್ವಭಾವದ ವಿಷಯವಾಗಿ ಮಾತಾಡುತ್ತ ಕುಳಿತಿದ್ದನು. ಕರ್ಣನು ಬಹುಕಾಲದಿಂದ ಭೀಷ್ಮ ದ್ರೋಣರ ವಿಷಯವಾಗಿ ಬಹಳ ಅಸೂಯೆಪಡುತ್ತಿದ್ದನು. ಅದಕ್ಕೆ ನುಸರಿಸಿಯೇ ಈಗ ಅವನು-ಮಿತ್ರಾ, ಆಚಾರ್ಯರ ಮನಸಿನಲ್ಲಿ ಕುರು ಪಾಂಡವರನ್ನು ಸಂಹರಿಸಿ ತನ್ನ ಮಗನಾದ ಅಶ್ವತ್ಥಾಮನನ್ನು ಹಸ್ತಿನಾ ವತಿಯ ಗಾದಿಯ ಮೇಲೆ ಕೂಡಿಸಬೇಕೆಂಬ ಸ್ವಾರ್ಥದ ವಿಚಾರವು ಇತ್ತೆಂ ಬಂತೆ ತೋರುತ್ತದೆ. ಇಲ್ಲದಿದ್ದರೆ ಮಗನು ಸತ್ತನೆಂಬ ಸುದ್ದಿಯನ್ನು ಕೇಳಿದ ಮಾತ್ರಕ್ಕೆ ಶಸ್ತ್ರವನ್ನು ಚೆಲ್ಲಿ ಕೊಟ್ಟು ಆತ್ಮರಕ್ಷಣೆಯನ್ನು ಕೂಡ ಮಾಡಿಕೊಳ್ಳದೆ, ಕೂಡುತ್ತಿದ್ದನೆ? ಎಂದು ದ್ರೋಣಾಚಾರ್ಯರನ್ನು ಆಡಿ ಕೊಳ್ಳುತ್ತಿದ್ದನು. ದುರ್ಯೋಧನನಿಗೂ ಆಚಾರ್ಯರಬಗ್ಗೆ ಸ್ವಲ್ಪ ಸಂಶಯವು