ಪುಟ:ವೇಣೀಬಂಧನ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮ ವಾಗ್ಯೂಷಣ ಮುಂದೆ ಆದ ಈ ಅವಮಾನವು ಸಹನವಾಗುವದೆ? ಕೂಡಲೆ ಅವನ ಕಣ್ಣು ಗಳು ಕೆಂದಾದವು. ಒಳ್ಳೆ ಆವೇಶದಿಂದ-ಎಳೇ, ರಾಧೆಯ ಬಸುರಿಗೆ ಹೊರೆ ಯಾದ ನೀಚಾ, ಸೂತಕುಲಾಧವಾ, ನನ್ನನ್ನು ಹೀಗೆ ಅವಮಾನ ಪಡಿಸು ತೀಯಾ ? ಎಂದು ಅಂದನು ಅದಕ್ಕೆ ಕರ್ಣನು-ನಾನು ಸೂತನಿರಲಿ, ಸೂತಪುತ್ರನಿರಲಿ, ಅದನ್ನೇನು ಮಾಡುತ್ತಿ ? ಸುಲದಲ್ಲಿ ಹುಟ್ಟುವದು ದೈವಾ ಧೀನದ ಮಾತು; ಆದರೆ ಪೌರುಷವು ನನ್ನದಾಗಿದೆ. ಎಂದು ಉತ್ತರವನ್ನು ಕೊಟ್ಟನು. ಅಶ್ವತ್ಥಾಮನು ಅದನ್ನು ಕಿವಿಯಮೇಲೆ ಹಾಕಿಕೊಳ್ಳದೆ, ಎಲಾ, ನೀಚಾ, ಏನಂದಿ, ನನ್ನ ದುಃಖದ ಪ್ರತೀಕಾರವನ್ನು ಶಸ್ತ್ರಗಳಿಂದ ಬಿಟ್ಟು, ಕಣ್ಣೀರುಗಳಿಂದ ಮಾಡಿಕೊಳ್ಳಲಿಯಾ ? ನಿನ್ನ ಹಾಗೆ ನನ್ನ ಶಸ್ತ್ರಾಸ್ತ್ರಗಳು ಗುರುಶಾಪದಿಂದ ನಿರ್ವೀಯ್ರವಾಗಿರುವವೆ ? ನಿನ್ನಂತೆ ನಾನು ಇದೇ ಈಗ ಹಗೆಗಳಿಗೆ ಬೆನ್ನು ತೋರಿಸಿ ರಣಭೂಮಿಯಿಂದ ಓಡಿ ಬಂದಿರುವೆನೆ ? ನಿನ್ನ ಹಾಗೆ ನಾನು ಭಟ್ಟಂಗಿಗಳ ಕುಲದಲ್ಲಿ ಹುಟ್ಟಿರುವೆನೆ ? ಎಂದು ಮರ್ಮೋ ದೈಾಟನ ಮಾಡಿ ಮಾತಾಡಿದನು. ಅದರಿಂದ ಕರ್ಣನಿಗೂ ಕೋಪವು ಹೆಣ್ಣ ಯಿತು. ಎಲಾ ಮರ್ಲಾ, ಬ್ರಾಮ್ಮಣರ ತೋರಾ, ಶಸ್ತ್ರವನ್ನು ಹಿಡಿದಿರು ವೆನೆಂದು ಸುಮ್ಮನೆ ಯಾಕೆ ನೌರುಷವನ್ನು ಕೊಳ್ಳುತ್ತಿರುವೆ ? ನಾನೂ ನನ್ನ ಕಸ್ತಸ್ತ್ರಗಳೂ ನಿರ್ವೀಯ್ರವಾಗಿರಲಿ, ಸವೀರ್ಯವಾಗಿರಲಿ, ಪರಾಕ್ರಮ ಶಾಲಿ ಯಾದ ನಿನ್ನ ತಂದೆಯಂತೆ ನಾನೇನಾದರೂ ಪಾಂಚಾಲತನಯನಿಗೆ ಹೆದರಿ ಶಸ್ತ್ರವನ್ನು ಕಲ್ಲಿಕೊಟ್ಟಿರುವನೇನು ? ಎಂದು ಸಿಟ್ಟಿನ ಭರದಲ್ಲಿ ದ್ರೋಣಾ ಚಾರ್ಯರಂಥ ಅಪ್ರತಿಮ ವೀರರ ಮೇಲೆ ಸುಳ್ಳು ಆರೋಪವನ್ನು ಹೊರಿಸಿ ನಿಂದಿಸಿದನು. ಯಾಕಂದರೆ ದ್ರೋಣಾಚಾರ್ಯರು ದೃಷ್ಟ್ಯದ್ಯುಮ್ಮನಿಗೆ ಹೆದ ರಿದಿಲ್ಲವೆಂಬ ಸಂಗತಿಯು ಕರ್ಣನಿಗೂ ಗೊತ್ತಿತ್ತು, ಅಶ್ವತ್ಥಾಮನು ತಂದೆಯ ನಿಂದೆಯನ್ನು ಕೇಳಿ ಎಲಾ ಸೂತಕುಲಾಧಮಾ, ರಾಧೆಯ ಬಸುರಿಗೆ ಹೊರೆ ಯಾದವನೆ, ನನ್ನ ತಂದೆಯನ್ನು ನಿಂದಿಸುತ್ತೀಯಾ? ಅವರು ರಣಭೂಮಿ ಯಲ್ಲಿ ಏನು ಕೆಲಸ ಮಾಡಿದರೆಂಬದನ್ನು ಈ ಭೂದೇವಿಯು ಬಲ್ಲಳು. ಶಸ್ತ್ರವನ್ನು ಯಾಕೆ ಚಲ್ಲಿ ಕೊಟ್ಟಿರೆಂಬದಕ್ಕೆ ಅಜಾತ ಶತ್ರುವಾದ ಧರ್ಮರಾ ಜನು, ಸಾಕ್ಷಿಯಾಗಿರುವನು. ಆದರೆ ಆ ಕಾಲಕ್ಕೆ ರಣಹೇಡಿಯಾದ ನೀನು ಎಲ್ಲಿದ್ದಿಯೋ ಯಾರಿಗೆ ಗೊತ್ತು? ನಮ್ಮ ತಂದೆಯು ದು:ಖದಿಂದಾಗಲಿ ಅಂಜಿ ಕೆಯಿಂದಾಗಲಿ ಬೇರೆ ಯಾವ ಕಾರಣದಿಂದಾದರೂ ಆಗಲಿ, ಶಸ್ತ್ರವನ್ನು