ಪುಟ:ವೇಣೀಬಂಧನ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

r,++++++. • • • • • • • • • • • • ವಾಷಣ. •••••••••••••••• ಮಾತಾಡಿದನು. ಅದಕ್ಕೆ ಕರ್ಣನು ನಾನು ಜೀವದಿಂದ ಇರುವವರೆಗೆ ದುಃಶಾ ಸನನನ್ನು ಕೊಲ್ಲುವ ಗಂಡಸು ಅದಾವನು ? ತಮಾ, ದುಃಶಾಸನಾ ಅ೦ಜ ಬೇಡ ಇಗೋ ನಾನು ಬಂದೆನು. ಎಂದು ರಣಭೂಮಿಗೆ ಹೊರಟು ಹೋದ ನು. ಆ ಬಳಿಕ ಅಶ್ವತ್ಥಾಮನು ರಾಜಾ, ಕೌರವೇಶ್ವರಾ, ಈ ರಾಧೇಯನ ಮೇಲೆ ನಂಬಿಗೆಯನ್ನಿಟ್ಟು ಕೊಡಬೇಡ; ತಮ್ಮನ ಮೇಲೆ ಒದಗಿದ ಸಂಕಟ ವನ್ನು ದೂರ ಮಾಡುವದಕ್ಕೆ ನೀನು ಸ್ವತ: ಟೊಂಕಾ ಕಟ್ಟು ಎಂದು ಹೇಳಿ ದನು. ದುರ್ಯೋಧನನು ಆ ಮಾತನ್ನು ಕಿವಿಯಮೇಲೆ ಹಾಕಿಕೊಳ್ಳದೆ ತಾನೂ ರಣಭೂಮಿಗೆ ಹೋಗುವದಕ್ಕಾಗಿ ರಥವನ್ನು ತರಹೇಳಿದನು. ೩ ನೆ ಪ್ರಕರಣ. ಕಟ್ಟ ಕಡೆಯ ಉದ್ಧಾರಗಳು. ಇತ್ಯ ಕರ್ಣ-ಗ.ರ್ಯೋಧನರು ದು:ಶಾಸನನನ್ನು ಬಿಡಿಸುವದಕ್ಕಾಗಿ ಹೋಗುತ್ತಿರಲು, ಅರ್ಜುನನು ಅಣ್ಣನ ಪ್ರತಿಜ್ಞೆಗೆ ಭಂಗಬಂದೀತೆಂದು ಅವ ರಿಗೆ ಎದುರಾಗಿ ಅಡ್ಡಗಟ್ಟಿದನು. ದುರ್ಯೋಧನನು ಅರ್ಜುನನ ಬಾಣದಿಂದ ರಥದಲ್ಲಿಯೇ ಮೂರ್ಛಿತನಾಗಿ ಬಿದ್ದನು. ಅತ್ತ ಭೀಮಸೇನನು ದುಃಶಾಸ ನನನ್ನು ನೆಲಕ್ಕೆ ಕೆಡವಿ ತನ್ನ ಪ್ರತಿಜ್ಞೆಯನ್ನು ಪೂರ್ಣ ಮಾಡುತ್ತಿದ್ದನು. ಅಶ್ವ ತ್ಥಾಮನು ಅದನ್ನೆಲ್ಲ ಕಂಡು ಮಾವಾ ಏನುಮಾಡಲಿ ? ಆ ನೀಲಕನಾದ ಭೀಮ ನು ದುಃಶಾಸನನನ್ನು ಕೊಲ್ಲುತ್ತಿರುವನು, ಕರ್ಣನ ಮಾತಿಗೆ ಸಿಟ್ಟಾಗಿ ನಾನು ಶಸ್ತ್ರಗಳನ್ನು ಬಿಟ್ಟು ಕೊಟ್ಟೆನು. ಈಗ ನನಗೆ ಎಂಥ ವಾಸವಾದರೂ ಬರಲಿ. ಘೋರವಾದ ನರಕವು ಸಂಭವಿಸಲಿ. ಅಲ್ಲಿ ಕೊಟ್ಟ ಶಸ್ತ್ರವನ್ನು ತೆಗೆದು ಕೊಂಡು ರಣಭೂಮಿಗೆ ಹೋಗಿ ದುಃಶಾಸನನನ್ನು ಸಂರಕ್ಷಿಸುವೆನು ಎಂದು ಅಂದನು. ಅಸ್ಟ್ರಲ್ಲಿ ಎಲೈ ಮಹಾತ್ಮನಾದ ಆಚಾರ್ಯಪುತ್ರನೆ, ಎಂದೂ ಸುಳ್ಳಾಡದೆ ಇಂದೇ ಮಾತ್ರ ಈ ಪಾಪಕ್ಕೆ ಗುರಿಯಾಗುವದು ಯೋಗ್ಯವಲ್ಲ. ಎಂಬ ಶಬ್ದಗಳು ಕೇಳಬಂದವು. ಆಗ ಅಶ್ವತ್ಥಾಮನು ಅಯ್ಯೋ! ಎಂಥ ಕಠಿಣ ಪ್ರಸಂಗವಿದು. ನಾನು ಯುದ್ಧಕ್ಕೆ ಹೋಗುವದು ದೇವರ ಮನಸಿಗೆ ಸಹ ಬರಲಿಲ್ಲವೇ ? ಅವನು ಸಹ ಸಾಂಡವರ ಪಕ್ಷಪಾತಿಯೇ ! ! ಮಾವಾ,