ಪುಟ:ವೇಣೀಬಂಧನ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- w ವಾಗ್ಯೂಷಣ, ೧೧೧mmmm ಎಂದು ಒಳ್ಳ ಆತುರದಿಂದ ಕೇಳಿದನು. ಅದಕ್ಕೆ ದೂತನು ದಣಿಯರೇ ಶರೀರ ದಿಂದ ಮಾತ್ರ ಪ್ರೇಮದಿಂದಿರುವನು. ಎಂದು ಹೇಳಿದನು. ಅದನ್ನು ಕೇಳಿ ದುರ್ಯೋಧನನು ದುಃಖದಿಂದ ಎಲಾ, ಇಂಥ ಸಂದಿಗ್ಧವಾದ ಮಾತುಗಳಿಂದ ನನ್ನ ಮನಸ್ಸನ್ನು ಯಾಕೆ ನೋಯಿಸುತ್ತೀ ? ಆದದ್ದಾದರೂ ಏನು ? ಸ್ಪಸ್ಮ ವಾಗಿ ವಿವರಿಸಿ ಹೇಳು ಎಂದು ಅಂದನು. ಆಗ ಆ ದೂತನು ಭೀಮಸೇನನು ದು:ಶಾಸನನ್ನು ಕೊಂದನು. ಕರ್ಣನು ಅವನಮೇಲೆ ಸಿಟ್ಟಾಗಿ ಅವನ ಕೂಡ ಯುದ್ದಕ್ಕೆ ನಿಂತನು. ಆಗ ಅರ್ಜುನನು ಭೀಮಸೇನನಿಗೂ ನಮ್ಮ ಒಡೆಯನ ಮಗನಾದ ವೃಷಸೇನನು ತನ್ನ ತಂದೆಗೂ ನೆರವಾಗಲಿಕ್ಕೆ ಬಂದರು. ಅರ್ಜುನ ವೃಷಸೇನರಿಗೆ ಒಳ್ಳೆ ನಿಕರದ ಕಾಳಗವೆಸಗಿತು. ಅದರಲ್ಲಿ ವೃಷಸೇನನು ಮರಣಹೊಂದಿದನು, ಇತ್ಯಾದಿ ಸಂಗತಿಗಳನ್ನು ದೂಶನು ದುರ್ಯೋ ಧನನ ಮನಸು ಕರಗುವಂತೆ ವರ್ಣಿಸಿ ಹೇಳಿದನು. ಆ ಬಳಿಕ ದುರ್ಯೋಧ ನನು ಬಹಳ ದುಃಖಪಟ್ಟು ಎಲಾ, ನಿಮ್ಮ ಒಡೆಯನಾದ ಕರ್ಣನು ಈಗ ಏನು ಮಾಡುತ್ತಿರುವನು ? ಎಂದು ಕೇಳಿದನು. ಅದಕ್ಕೆ ಆ ದೂತನು ಮಗನು ಸತ್ಯ ದುಃಖದಿಂದ ಕಣ್ಣೀರು ಸುರಿಸಿ ಜೀವದ ಹಂಗುದೊರೆದು ಅರ್ಜುನನ ಕೂಡ ಯುದ್ಧ ಮಾಡುವದಕ್ಕಾಗಿ ಒಬ್ಬನೇ ರಣಭೂಮಿಗೆ ಹೊರಡುವ ನಿಶ್ಚ ಯವನ್ನು ಮಾಡಿದ್ದಾನೆ. ಕಟ್ಟ ಕಡೆಯ ಉದ್ಧಾರಗಳನ್ನು ಈ ಪತ್ರದಲ್ಲಿ ಬರೆದು ದುರ್ಯೋಧನನಿಗೆ ಕೊಟ್ಟು ಬಾ ಎಂದು ನನ್ನನ್ನು ಕಳಿಸಿದ್ದಾನೆ. ಎಂದು ಪತ್ರವನ್ನು ಕೊಟ್ಟನು. ಆ ಪತ್ರದಲ್ಲಿ ದುರ್ಯೋಧನ ಮಹಾರಾಜ ರಿಗೆ ಸ್ವ, ಸಮರಾಂಗಣದಿಂದ ಕರ್ಣನು ಮಾಡಿಕೊಳ್ಳುವ ವಿಜ್ಞಾಪನೆಗಳು ಯಾವವೆಂದರೆ-ಶಸ್ತ್ರಾಸ್ತ್ರವಿದ್ಯೆಗಳಲ್ಲಿ ನನ್ನ ಹಾಗೆ ಯಾರೂ ಇಟ್ಟೆಂತಲೂ ಪಾಂಡವರನ್ನು ನಾನೇ ಕೊಲ್ಲಬಹುದೆಂತಲೂ ನನ್ನ ಮೇಲೆ ನಂಬಿಗೆಯನ್ನೆ ಇಟ್ಟಿದ್ದೀರಿ. ಆದಾಗ್ಯೂ ದುಃಶಾಸನನನ್ನು ಕೊಂದ ಭೀಮನ ಸೇಡು ತೀರಿಸಿಕೊ ಳ್ಳುವದು ನನ್ನಿಂದಾಗಲಿಲ್ಲ. ಆದಕಾರಣ ನಾವು ಇನ್ನು ಮೇಲೆ ತಮ್ಮ ದುಃಖ ವನ್ನು ಪರಾಕ್ರಮದಿಂದಾಗಲಿ ಕಂಬೇರಿನಿಂದಾಗಲಿ ನಿವಾರಣೆ ಮಾಡಿಕೊ ಳ್ಳಿರಿ, ನನ್ನನ್ನು ನಂಬಬೇಡಿರಿ” ಈ ನಿರಾಶೆಯಿಂದ ಕೂಡಿದ ಕರ್ಣನ ಪತ್ರವ ನ್ನು ಓದಿಕೊಂಡು ಬಹಳ ದುಃಖದಿಂದ ರೂಪಾ, ಇನ್ನು ಇಲ್ಲಿ ನಿಲ್ಲಬೇಡ ಬೇಗನೆ ಹೋಗಿ “ ದು:ಶಾಸನನು ನನ್ನ ತಮ್ಮನ ವೃಷಸೇನನು ನಿನ್ನ ಮಗನಲ್ಲ ಆದದ್ದಾಗಿ ಹೋಯಿತು ಪೂರ್ವದಲ್ಲಿ ನಾವಿಬ್ಬರೂ ಸಂಕಲ್ಪಮಾಡಿ