ಪುಟ:ವೇಣೀಬಂಧನ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೩ - .. .. . . . . . ವೇಳೇಬಂಧನ. . ದಂತೆ ಪಾಂಡವರನ್ನು ಮೊದಲು ನಾಶಗೊಳಿಸೋಣ ರಣಭೂಮಿಯಲ್ಲಿ ಮರ ಣಹೊಂದಿದ ಬಂಧು ಬಾಂಧವರಿಗೆ ತಿಲಾಂಜಲಿಯನ್ನು ಕೊಡೋಣ ಆ ಬ ೪ಕ ಉಭಯತರು ಕಟ್ಟ ಕಡೆಯ ಭೆಟ್ಟಿಯನ್ನು ತಕ್ಕೊಂಡು ಈ ಶರೀರಗ ಳನ್ನು ತ್ಯಾಗಮಾಡೋಣ ” ಎಂದು ನಿಮ್ಮ ಬಳಿಯನಾದ ಕರ್ಣನಿಗೆ ಹೇಳು ಎಂದು ಅವನನ್ನು ಕಳಿಸಿದನು. ತಾನೂ ಹೊಸ ರಥವನ್ನು ತರಿಸಿ ರಣಭೂ ಮಿಗೆ ಹೊರಡಲನುವಾದನು. ಅಲ್ಲಿ ವೃದ್ಧರಾದ ದೃತರಾಸ್ಮನೂ ಗಾಂಧಾರಿಯ ದುಃಶಾಸನನು ಸತ್ಯನೆಂಬ ಸುದ್ದಿಯನ್ನು ಕೇಳಿ ಸಂಜಯನ ನ್ನು ಕರಕೊಂಡು ಇನ್ನಾದರೂ ಯುದ್ಧವನ್ನು ನಿಲ್ಲಿಸಬೇಕೆಂದು ದುರ್ಯೊ ಧನನಿಗೆ ಕಟ್ಟ ಕಡೆಯ ನಾಲ್ಕು ಮಾತುಗಳನ್ನು ಉಪದೇಶ ಮಾಡಬೇಕೆಂದು ಅಲ್ಲಿಗೆ ಬಂದರು. ದುರ್ಯೋಧನನು ಅವರನ್ನು ಕಂಡು ಮನಸಿನಲ್ಲಿ ನೊಂದುಕೊಂಡು ಇನ್ನು ಈ ಮಾತಾಪಿತೃಗಳಿಗೆ ಹ್ಯಾಗೆ ಮೋರೆಯನ್ನು ತೋರಿಸಲಿ? ಇಂದೇ ಮುಂಜಾನೆ ನಾನೂ ದುಃಶಾಸನನೂ ರಣಭೂಮಿಗೆ ಬರುವಾಗ ನಮಸ್ಕಾರಮಾಡಿ ಆಶೀರ್ವಾದವನ್ನು ತಕ್ಕೊಂಡು ಬಂದಿದ್ದೆವು. ಈಗ ದ.: ಹಾಸನನು ಎಲ್ಲಿ ಎಂದು ಅವರು ಕೇಳಿದರೆ-ನಾನು ಏನು ಹೇಳಲಿ. ಎಂದು ಚಿಂತಿಸಿದನು. ಅಸ್ಕರಲ್ಲಿ ಸಂಜಯನು-ಮಹಾರಾಜರು ಇಲ್ಲಿಯೇ ಇರುವರು ಎಂದು ಆ ವೃದ್ದರ ಕೈಹಿಡಿದು ಕರಕೊಂಡು ಬಂದನು. ದುರ್ಯೋಧನನು ಅವರನ್ನು ಆದರಿಸುವದಂತೂ ಒತ್ತಟ್ಟಿಗಿರಲಿ ಕಣ್ಣೆತ್ತಿ ಸಹ ನೋಡದೆ ಸುಮ್ಮನೆ ಕುಳಿತಿದ್ದನು. ೬ ನೇ ಪ್ರಕರಣ, -- - ಪುತ್ರವಾತ್ಸಲ್ಯವೂ ಕ್ಷಾತ್ರತೇಜವೂ, - ಆಗ ವೃದ್ಧರು ಬಾಳಾ, ದುರ್ಯೊಧನಾ ಎಂದೂ ನಮ್ಮ ಕೂಡ ಹೀಗೆ ಮೌನದಿಂದ ನಡೆದಿಲ್ಲ. ಇಂದೇ ಯಾಕೆ ಸುಮ್ಮನೆ ಇರುವೆ ? ಎಂದು ಅಂದ ರು. ಗಾಂಧಾರಿಯು ಮಗುವೇ, ನೀನು ನಮ್ಮ ಕೂಡ ಮಾತಾಡದಿದ್ದರೆ ದುಃಶಾ ಸನ ದುರ್ಮಷ್ರಣರು ಬಂದು ಮಾತಾಡುವರೆ ? ಹೀಗೆ ಯಾಕೆ ಮಾಡುತ್ತಿ? ಎಂದು ದುಃಖದಿಂದ ಕಣ್ಣೀರು ಸುರಿಸಹತ್ತಿದಳು. ತಾಯಿಯ ಕರುಣಾಪೂ