ಪುಟ:ವೇಣೀಬಂಧನ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣಿಬಂಧನ, ೨೫. I rrrrrrrrr rrrrrrrrrr rrrrrrr ••••••••••• ಈ ಶರೀರದ ಮೇಲಿನ ಮಮತೆಗಾಗಿ ಒಪ್ಪಂದವನ್ನು ಮಾಡಿಕೊಳ್ಳಲಿಯಾ ? ದೊಡ್ಡವರು ನನಗೆ ಹೆಸರಿಡಲಿಕ್ಕಿಲ್ಲವೇ? ಅದರಿಂದ ಪರಿಣಾಮದಲ್ಲಿ ಹಿತವಾ ದರೂ ಆಗುವದೇ? ಒಂದುವೇಳೆ ನಿಮ್ಮ ಮಾತಿನಂತೆ ನಡೆದರೆ ಬಲಹೀನ ನಾದ ನನ್ನ ಕೂಡ ಜಯಶಾಲಿಗಳಾದ ಪಾಂಡವರು ಒಪ್ಪಂದವನ್ನು ಮಾಡಿ ಕೊಳ್ಳುವರೇ ಈ ಎಲ್ಲ ಸಂಗತಿಗಳನ್ನು ಆಲೋಚಿಸಿ ಹೇಳತಕ್ಕದ್ದನ್ನು ಹೇಳಿ ರಿ ಎಂದು ಅಂದನು. ಅದಕ್ಕೆ ಧೃತರಾಷ್ಟ್ರನು ತವಾ ದುರ್ಯೋಧನಾ, ಧರ್ಮರಾಜನು ನಿಮ್ಮ ಮಾತನ್ನು ಮೀರುವನೆಂಬಂತಿಲ್ಲ; ಒಬ್ಬ ತಮ್ಮನು ಮರಣಹೊಂದಿದರೆ ಬೆಂಕಿಯಲ್ಲಿ ಹಾರಿಕೊಂಡು ಪ್ರಾಣಬಿಡುವೆನೆಂದು ಅವ ನು ನಿಶ್ಚಯಸಿದ್ದಾನೆ. ಯುದ್ಧದಲ್ಲಿ ಮರಣದ ಸರತಿಯು ಯಾವಾಗ್ಗೆ ಯಾರ ಮೇಲೆ ಬರುವದೆಂಬುದನ್ನು ಯಾರು ಖಂಡಿತವಾಗಿ ಹೇಳುವರು? ಆದಕಾರಣ ನೀನು ಒಪ್ಪಂದದ ಮಾತು ತೆಗೆದರೆ ಅದಕ್ಕೆ ಧರ್ಮರಾಜನು ನಿಶ್ಚಯವಾಗಿ ಸಮ್ಮತಿಕೊಡುವನು ಎಂದು ಹೇಳಿದನು. ಅದಕ್ಕೆ ದುರ್ಯೋಧನನು ತಂದೆ ಗಳೇ ನೀವೇ ವಿಚಾರಮಾಡಿರಿ. ಧರ್ಮರಾಜನು ಒಬ್ಬ ತಮ್ಮನು ಮರಣ ಹೊಂದಿದರೆ ಪ್ರಾಣತ್ಯಾಗಮಾಡುವದನ್ನು ನಿಶ್ಚಯಿಸಿದ್ದಾನೆ. ಆದರೆ ನನ್ನ ನೂರುಮಂದಿ ತಮ್ಮಂದಿರು ಮರಣಹೊಂದಿರಲು ನಾನು ಜೀವದಿಂದುಳಿದು ದುಃಶಾಸನ ರಕ್ತವನ್ನು ಕುಡಿದಂಥಾ ಆ ನೀಕನಾದ ಭೀಮಸೇನನನ್ನು ನನ್ನ ಗದೆಯಿಂದ ಸಂಹರಿಸಿ ಅವನ ರಕ್ತಮಾಂಸಗಳನ್ನು ನಾಲ್ಕು ದಿಕ್ಕಿಗೆ ಈಡಾಡದೆ ಭಿಕ್ಷುಕನಹಾಗೆ ಅತಿದೈನ್ಯದಿಂದ ಸಂಧಿಯನ್ನು ಬೇಡಿಕೊಳ್ಳ ಲಿಯಾ? ಎಂದು ಆವೇಶದಿಂದ ಕೇಳಿದನು. ಇದನ್ನು ಕೇಳಿ ಅವನ ತಾಯಿತಂದೆಗಳಿಗೆ ಬಹಳ ದುಃಖವಾಯಿತು. ಗಾಂಧಾರಿಯು-ಅಯ್ಯೋ ದುರ್ದೈವವೇ ನಾನು ನೂರುಮಂದಿ ಮಕ್ಕಳನ್ನು ಹಡೆಯಲಿಲ್ಲ. ನೂರು ದುಃಖ ಗಳನ್ನೇ ಹಡೆದಿರುವೆನು. ಎಂದು ದೊಡ್ಡ ಧ್ವನಿತೆಗೆದು ಅಳಹತ್ತಿದಳು. ಧೃತ ರಾತ್ಮನು ಯುದ್ಧ ಮಾಡುವ ವಿಷಯದಲ್ಲಿ ಮಗನ ನಿಶ್ಚಯವನ್ನು ಕಂಡು ಮಗನೇ ಶತ್ರುಗಳನ್ನು ಗೆಲ್ಲುವ ಅಪೇಕ್ಷೆಯು ನಿನಗಿದ್ದರೆ ಗುಪ್ತವಾಗಿ ಮೋಸ ದಿಂದಾದರೂ ಕೊಲ್ಲುವ ಹಂಚಿಕೆಯನ್ನು ತೆಗೆಯಬಾರದೇ ಎಂದು ಪುತ್ರ ಮೋಹದಿಂದ ಕ್ಷಾತ್ರಧರ್ಮಕ್ಕೆ ವಿರುದ್ಧವಾಗಿ ಹೇಳಿದನು. ದುರ್ಯೋಧನನಿಗೆ ಆ ಮಾತು ರುಚಿಸಲಿಲ್ಲ. ಕೂಡಲೆ ಅವನು ಪಾಂಡವರು ನನ್ನ ತಮ್ಮಂದಿ ರನ್ನು ನನ್ನ ಕಣ್ಣೆದುರಿಗೆ ಕೊಂದಿರುವರು. ನಾನು ಮಾತ್ರ ಅವರನ್ನು