________________
ವಾಗ್ಯೂಷಣ, ಅನ್ನ ಕೊಂದ ಸುದ್ದಿ ಎಕ್ಸ್ ದುರೈವವೇ ಗುಪ್ತವಾಗಿ ಮೋಸದಿಂದ ಕೊಲ್ಲಿಸಿ ಲೋಕಾಪವಾದಕ್ಕೆ ಗುರಿಯಾಗಲಿಯಾ ? ಇಂಥ ನೀತಕೆಲಸವನ್ನು ನಾನು ಎಂದೂ ಮಾಡಲಾರೆನು ಎಂದು ಅಂದನು. ಅಸ್ಟ್ರಲ್ಲಿ ರಣಭೂಮಿಯಿಂದ ಒಬ್ಬ ದೂತನು ಬಂದು ಅರ್ಜುನನು ಕರ್ಣ ನನ್ನು ಕೊಂದ ಸುದ್ದಿಯನ್ನು ಹೇಳಿದನು. ಆ ಸುದ್ದಿಯನ್ನು ಕೇಳಿದ ಕ್ಷಣವೇ ದುರ್ಯೋಧನನು ಅಯ್ಯೋ ಮಿತ್ರಾ ಕರ್ಣಾ ಎಂದು ಎಚ್ಚರದಪ್ಪಿ ನೆಲಕ್ಕೆ ಬಿದ್ದನು. ಧೃತರಾಷ್ಟ್ರನು ಅಯ್ಯೋ! ದುರ್ದೈವವೇ, ನನ್ನ ಮಗನು ಯಾವನ ಪರಾಕ್ರಮವನ್ನು ನಂಬಿದ್ದನೋ ಅವನು ಸಹ ರಣಭೂಮಿಯಲ್ಲಿ ಮಡಿದನೆ ! ಎಂದು ಶೋಕಮಾಡಹತ್ತಿದನು. ಸ್ವಲ್ಪ ಹೊತ್ತಿನಮೇಲೆ ದುರ್ಯೋಧನನು ಎಚ್ಚತ್ತು ಎಲೈ ಅಂಗರಾಜಾ, ಕರ್ಣಾ ನಾನು ಎಂದಾದರೂ ನಿನಗೆ ಅಪ್ರಿ ಯವಾದದ್ದನ್ನು ಮಾಡಿದ್ದೆನೆ ? ನಿನ್ನನ್ನು ಅಗಲಿ ಎಲ್ಲಿಗಾದರು ಹೋಗಿದ್ದೆನೆ ? ನೀನು ಮಾತ್ರ ಈಗ ನನ್ನನ್ನು ಅಗಲಿ ಎಲ್ಲಿಗೆ ಹೋದೆ ? ಎಂದು ಪುನಃ ಮೂರ್ಛಿತನಾದನು.-ಗಾಂಧಾರಿಯು ಅವನನ್ನು ಎಚ್ಚರಿಸ ತೊಡಗಿದಳು. ಎಚ್ಚಬಳಿಕ ದುರ್ಯೋಧನನು ನನ್ನನ್ನು ಯಾಕೆ ಎಚ್ಚರಿಸಿದಿರಿ ? ನನ್ನ ಮಿತ್ರನಾದ ಕರ್ಣನು ಮೃತಪಟ್ಟ ಮೇಲೆ ಅವನ ಹಿಂದೆ ನಾನು ಉಸರಾಡಿ ಸುವದು ಕೂಡ ನಾಚಿಕೆಯ ಮಾತಾಗಿದೆ. ಅವನನ್ನು ಕೊಂದಂಥಾ ಅರ್ಜುನ ನನ್ನು ಯಮಲೋಕಕ್ಕೆ ಅಟ್ಟುವದಕ್ಕಾಗಿಯೇ ಬದುಕಬೇಕಲ್ಲದೆ ಬೇರೆ ಯಾವ ಉದ್ದೇಶವೂ ಇಲ್ಲ. ಎಂದು ಶೋಕಮಾಡಹತ್ತಿದನು. ಧೃತರಾಷ್ಟ್ರನಿಗೆ ಮಗನು ಯುದ್ಧದ ಹವ್ಯಾಸವನ್ನು ಬಿಡುವದಿಲ್ಲೆಂಬದು ಪೂರ್ಣವಾಗಿ ಗೊತ್ತಾ ಯಿತು. ಆಗ ಅವನು ಉಪಾಯಗಾಣದೆ ವತ್ಸಾ, ಯುದ್ದ ಮಾಡುವದೇ ನಿನ್ನ ಮನಸಿನ ನಿಶ್ಚಯವಾಗಿದ್ದರೆ ಶಲ್ಯನಿಗಾಗಲಿ ಅಶ್ವತ್ಥಾಮನಿಗಾಗಲಿ ಸೇನಾಪತಿ ಯ ಪಟ್ಟವನ್ನು ಕಟ್ಟು ಎಂದು ಹೇಳಿದನು. ಅದಕ್ಕೆ ದುರ್ಯೋಧನನು ಯಾರಿ ಗೆ ಪಟ್ಟಗಟ್ಟಿ ಏನುಪ್ರಯೋಜನವು, ಕರ್ಣನು ಸತ್ತ ದುಃಖದಿಂದ ಹುಟ್ಟಿದ ಅಶ್ರುಜಲಗಳಿಂದ ಸೇನಾಪತಿಯ ಪಟ್ಟಕ್ಕೆ ನನ್ನ ಅಭಿಷೇಕವನ್ನು ನಾನೇ ಮಾಡಿಕೊಂಡಿದ್ದೇನೆ. ಇನ್ನುಮೇಲೆ ನಾನು ಆ ಪಾರ್ಥನನ್ನು ಕೊಲ್ಲುವೆನು ಇಲ್ಲವೆ ಸ್ವರ್ಗಕ್ಕೆ ಹೋಗಿ ಕರ್ಣನನ್ನು ಕಾಣುವೆನು ಎಂದು ತನ್ನ ಗದೆಯ ನ್ನು ತಕ್ಕೊಂಡು ಸಿದ್ಧವಾದ ರಥವನ್ನು ಏರಿ ರಣಭೂಮಿಗೆ ಹೊರಡಲನು ವಾದನು.