ಪುಟ:ವೇಣೀಬಂಧನ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಳೇಬಂಧನ. ೭ ನೇ ಪ್ರಕರಣ = > < ದುರಾಗ್ರಹ ಅದೇ ಸಮಯದಲ್ಲಿ ಭೀಮಾರ್ಜುನರು ಒಂದೇ ರಥದಲ್ಲಿ ಕುಳಿತು ಕಂಡು, ದುರ್ಯೋಧನನನ್ನು ಹುಡುಕುತ್ತ ಅಲ್ಲಿಗೆ ಬಂದರು. ಕೋಮಲವು ನಸಿನ ಅರ್ಜುನನು ಧೃತರಾಹ್ಮನನ್ನೂ ಗಾಂಧಾರಿಯನ್ನೂ ಕಂಡು, ಅಣ್ಣಾ, ಇಲ್ಲಿ ಪುತ್ರಶೋಕದಿಂದ ದು:ಖಿತರಾದ ವೃದ್ಧರು ಇರುವರು; ನಮ್ಮನ್ನು ಕಂಡು ಅವರಿಗೆ ಮತ್ತಿಷ್ಟು ದುಃಖವಾದೀತು. ಆದಕಾರಣ ನಾವು ಇಲ್ಲಿಂದ ತಿರುಗಿ ಹೋಗುವದು ಒಳ್ಳೇದು ಎಂದು ಹೇಳಿದನು. ಅದಕ್ಕೆ ಭೀಮಶೇ ನನ-ತಮ್ಮಾ, ನಿನಗೆ ಶಿಸ್ಮಸಾಂಪ್ರದಾಯವು ಗೊತ್ತಿಲ್ಲ; ಹಿರಿಯರನ್ನು ಕಂಡು ಕಾಣದೆ ಹೋಗಬಾರದು; ಅವರಿಗೆ ಭೆಟ್ಟಿಯಾಗಿ ನಾವು ಯಾರು ಏನು ಎಂಬದನ್ನು ಹೇಳಿ, ನಮಸ್ಕಾರಮಾಡಿ ಹೋಗೋಣ ನಡೆ ಎಂದು ಹೇಳಿ ದನು. ಅಣ್ಣನ ಮಾತಿಗೆ ಅರ್ಜುನನು ಒಪ್ಪಿಕೊಂಡನು; ಉಭಯತರೂ ರಥವನ್ನು ಇಳಿದು ಬಂದು, ಅರ್ಜುನನು ಮುಂದೆ ಹೋಗಿ,--ಹಿರಿಯರೇ, ಶತ್ರುಗಳನ್ನು ಗೆಲ್ಲುವ ವಿಷಯದಲ್ಲಿ ನಿಮ್ಮ ಹಿರಿಯಮಗನು ಯಾವಾತನನ್ನು ನಂಬಿದ್ದನೋ, ಯಾವಾತನು ತನ್ನ ಪರಾಕ್ರಮದ ಸೊಕ್ಕಿನಿಂದ ಭೀಸ ದ್ರೋಣರನ್ನು ಕೂಡ ತೃಣಕ್ಕೆ ಬಗೆಯುತ್ತಿದ್ದನೋ, ಅ ರಾಧೇಯನಾದ ಕರ್ಣನನ್ನು ರಣರಂಗದಲ್ಲಿ ಸೋಲಿಸಿ ಕೊಂದಂಥ ಪಾರ್ಥನು ನಮಸ್ಕರಿಸು ಇಾನೆ ಎಂದು ಹೇಳಿ ನೆಲಮುಟ್ಟಿ ನಮಸ್ಕಾರಮಾಡಿದನು. ಆ ಬಳಿಕ ಭೀಮಸೇನನೂ ಹಾಗೇ ಮಾಡಿ-ಹಿರಿಯರೆ, ಯಾವನು ರಣಭೂಮಿಯಲ್ಲಿ ನೂರುಮಂದಿ ಕೌರವರನ್ನು ಸೋಲಿಸಿದನೋ, ಯಾವನು ದುಃಶಾಸನನ ಎದೆ ಯನ್ನು ಸೀಳಿ ರಕ್ತವನ್ನು ಹೀರಿದನೆ ಮತ್ತು ಯಾವಾತನು ಈಗ ತನ್ನ ಗದೆಯ ಹೊಡೆತದಿಂದ ದುರ್ಯೋಧನನ ತೊಡೆಗಳನ್ನು ಸೀಳಿ ಪುಡಿ ಪುಡಿ ಮಾಡಬೇಕೆಂದು ಇಲ್ಲಿಗೆ ಬಂದಿರುವನೋ ಆ ಭೀಮಸೇನನೂ ತಮಗೆ ನಮ್ಮ ಸ್ಮರಿಸುತ್ತಾನೆ ಎಂದು ಹೇಳಿದನು. ಈ ಮಾತು ಧೃತರಾಸ್ಮನ ಮನಸಿಗೆ ಹತ್ತಿತು. ಕೂಡಲೆ ಅವನು ಸಿಟ್ಟಾಗಿ,--ಎಲಾ, ನೀಟಾ ಟೊಣಪಾ, ವೃಕೋ ದರಾ, ವ್ಯರ್ಥವಾಗಿ ಯಾಕೆ ಬಡಬಡಿಸುತ್ತಿ ? ಲೋಕದಲ್ಲಿ ನೀನೊಬ್ಬನೇ