ಪುಟ:ವೇಣೀಬಂಧನ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಳೇಬಂಧನ. ದ್ದನು. ಅದನ್ನು ಕಂಡು ಧೃತರಾಹ್ಮನಿಗೆ ಸ್ವಲ್ಪ ಸಮಾಧಾನವಾಯಿತು. ಕೂಡಲೆ ಅವನು-ಅಪ್ಪಾ, ದುರ್ಯೋಧನಾ, ಪರಾಕ್ರಮದಲ್ಲಿ ತಂದೆಯನ್ನು ಕೂಡ ಮೀರಿದ ಅಶ್ವತ್ಥಾಮನು ಬರುತ್ತಿರುವನು; ಅವನನ್ನು ಆದರಿಸು, ಎಂದು ಹೇಳಿದನು. ಆದರೆ ಅವನ ವಿಷಯವಾಗಿ ದುರ್ಯೋಧನನ ಮನಸು ನೆಟ್ಟಗಿದ್ದಿಲ್ಲ ವಾದಕಾರಣ, ಅವನು-ತಂದೆಗಳ , ಈ ಅಶ್ವತ್ಥಾಮನು, ತನ್ನ ಶೌರ್ಯ, ತಾರುಣ್ಯ ಶಸ್ತ್ರವಿದ್ಯೆಗಳ ಕೌಶಲ್ಯ ಇವುಗಳ ಬಗ್ಗೆ ಸುಳ್ಳ ಅಭಿ ಮಾನವನ್ನು ಹೊಂದಿರುತ್ತಾನೆ. ಈತನು ಕರ್ಣನ ಮರಣವನ್ನೇ ನಿರೀಕ್ಷೆ ಸುತ್ತ ಕುಳಿತಿದ್ದನು. ಇಂಥವನಿಂದ ನಮ್ಮ ಹಿತವೇನಾಗುವದು? ಇವನ ಮೋರೆಯನ್ನು ಸಹ ನಾನು ನೋಡಲಾರೆನು. ಎಂದು ಮಾತಾಡುತ್ತಿರುವ ಸ್ಮರಲ್ಲಿ ಅಶ್ವತ್ಥಾಮನು ಅಲ್ಲಿಗೇ ಬಂದು-ರಾಜಾ, ಕೌರವೇಶ್ವರಾ, ನಿನಗೆ ವಿಜಯವಾಗಲಿ ಅಂದನು. ಅದಕ್ಕೆ ದುರ್ಯೋಧನನು ಬಾಸ್ಕೋಪಚಾರದ ಪೂರ್ತೆ ಎದ್ದು ನಿಂತು : ಬಾ, ಆಚಾಯಪುತ್ರಾ ಇತ್ತ ಬಾ, ಕೂಡ್ರು, ಎಂದು ಕೂಡಿಸಿಕೊಂಡನು. ತರುವಾಯ ಅಶ್ವತ್ಥಾಮನು ರಾಜಾ, ಆ ರಾಧೇಯನು ಬಂಟತನದ ದೊಡ್ಡ ದೊಡ್ಡ ಮಾತುಗಳನ್ನಾಡಿ ಏನು ಬೆಳಕು ಕೆಡವಿದನೆಂಬ ದು ಎಲ್ಲರಿಗೂ ಗೊತ್ತುಂಟು. ಈಗ ನಾನು ಶಸ್ತ್ರಾಸ್ತ್ರಗಳಿಂದ ಸಜ್ಜಾಗಿ ಬಂದಿ ದ್ದೇನೆ. ಇನ್ನುಮೇಲೆ ಹಗೆಗಳು ನಾಶ ಹೊಂದಿದರೆಂದು ತಿಳಿ. ಮನಸಿನೊ ಳಗಿನ ಚಿಂತೆಯನ್ನು ಬಿಡು ಎಂದು ಹೇಳಿದನು. ಈ ಮಾತು ದುರ್ಯೋ ಧನನಿಗೆ ರುಚಿಸಲಿಲ್ಲ. ಅವನು ಅಶ್ವತ್ಥಾಮನನ್ನು ಕುರಿತು-ಆಚಾರ್ಯ ಪುತ್ರಾ, ಇಷ್ಟು ಅವಸರವೇಕೆ ? ಹ್ಯಾಗಾದರೂ ನೀನು ಕರ್ಣನ ಮರಣದ ದಾರೀ ನೋಡುತ್ತಿದ್ದೆ. ಅದೇ ಪ್ರಕಾರ ನಾನೊಬ್ಬನು ಸಾಯುವವರೆಗೆ ಸುಮ್ಮ ನಿರು; ಆ ಮೇಲೆ ಬೇಕಾದರೆ ವೈರಿಗಳಿಗೆ ನಿನ್ನ ಪರಾಕ್ರಮವನ್ನು ತೋರಿ ಸು. ಯಾಕಂದರೆ ಕರ್ಣನೂ ನಾನೂ ಬೇರೆಯಲ್ಲ. ಎಂದು ಅಂದನು. ಅಶ್ವ ತ್ಥಾಮನು ದುರ್ಯೋಧನನ ಮನಸ್ಸಿನಲ್ಲಿಯ ಕರ್ಣನ ವಿಷಯವಾಗಿ ಇದ್ದ ಅಭಿಮಾನವನ್ನೂ ತನ್ನ ಬಗ್ಗೆ ಇದ್ದ ತಿರಸ್ಕಾರವನ್ನೂ ಅರಿತು, ಬಹಳ ಅಸಮಾಧಾನಪಟ್ಟು , ಒಳ್ಳೇದು ರಾಜಾ ಹಾಗೇ ಆಗಲಿ, ಎಂದು ಹೇಳಿ ಭರನೆ ತಿರುಗಿ ಒಳ್ಳೇ ಆವೇಶದಿಂದ ಕಾಲು ಅಪ್ಪಳಿಸುತ್ತ ಹೊರಟು ಹೋದ ನು. ಅಲ್ಲಿಯೇ ಸಮೀಪದಲ್ಲಿ ಕುಳಿತಿದ್ದ ಧೃತರಾಷ್ಟ್ರ ಗಾಂಧಾರಿ ಇವರಿಗೆ ಕುಶಲ ಪ್ರಶ್ನವನ್ನು ಕೇಳುವದಂತೂ ಒತ್ತಟ್ಟಿಗಿರಲಿ ಅವರನ್ನು ಕಣ್ಣೆತ್ತಿಸಹ