ಪುಟ:ವೇಣೀಬಂಧನ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಳೇಬಂಧನ, naan ಓಡಿ ತೂಗಿ ಎಲ್ಲಿಯೋ ಅಡಗಿಕೊಂಡನು. ಅದರಿಂದ ಧರ್ಮರಾಜನು ಚಿಂತೆ ಮಾಡಹತ್ತಿದನು, ಮತ್ತು ಅವನನ್ನು ಹುಡುಕುವದಕ್ಕಾಗಿ ನಾಲ್ಲೂ ಕಡೆಗೆ ಚಾರರನ್ನು ಕಳಿಸಿದನು. ಇತ್ತ ಶ್ರೀಕೃಷ್ಣನೂ ಭೀಮಾರ್ಜುನ ರನ್ನು ಕರಕೊಂಡು ರಣಭೂಮಿಯ ಸುತ್ತು ಮುತ್ತು ಶೋಧ ಮಾಡಹತ್ತಿ ದನು, ಮೂವರು ಹುಡುಕಿ ಹುಡುಕಿ ಬೇಸತ್ತು ನಿರಾಶೆಯುಳ್ಳವರಾದರು. ಅರ್ಜುನನು ನಿಟ್ಟುಸಿರು ಬಿಟ್ಟು ಸುಮ್ಮನೆ ಕುಳಿತುಕೊಂಡನು. ಅಸ್ಟ್ರಲ್ಲಿ ಭೀಮಶೇನನ ಗುರುತಿನವನೊಬ್ಬ ಮನುಷ್ಯನು ತಲೆಯಮೇಲೆ ಮಾಂಸದ ಹೊರೆಯನ್ನು ಹೊತ್ತುಕೊಂಡು, ತೇಕುತ್ತ ಬರುತ್ತಿದ್ದನು. ಅವನ ವಸ್ತ್ರ ಗಳೂ ಕಾಲುಗಳೂ ಅದೇ ಕೊಯ್ದ ಚಿಗರೆಯ ರಕ್ತದಿಂದ ಕೆಂಪಾಗಿದ್ದವು. ಅವನು ಅಸ್ಪಷ್ಟವಾದ ಧ್ವನಿಯಿಂದ-ಒಡೆಯರೆ, ಇಲ್ಲಿಯೇ ಸಮೀಪದಲ್ಲಿ ಒಂದು ಸರೋವರವಿರುವದು; ಅದರ ದಂಡೆಯ ಪ್ರದೇಶವು ಬಹಳ ವಿಸ್ತಾರ ವಾಗಿರುವದು; ಅಲ್ಲಿ ಇಬ್ಬರು ಗೃಹಸ್ಥರು ಹೋಗಿರುವರು. ಅವರ ಹೆಜ್ಜೆ ಗಳು ಮೂಡಿರುವವು. ಆದರೆ ಅಲ್ಲಿಂದ ತಿರುಗಿಬರುವಾಗ ಒಬ್ಬನ ಹೆಜ್ಜೆಗಳು ಮಾತ್ರ ಮೂಡಿರುವವು. ನಾನು ನೋಡಿದ ಸಂಗತಿಗಳನ್ನು ತಮಗೆ ಹೇಳಿ ದೆನು. ಮುಂದೆ ತಮ್ಮ ಇಚ್ಛೆಗೆ ಬಂದಂತೆ ಮಾಡಬೇಕು ಎಂದು ಹೇಳಿದನು, ದುರ್ಯೋಧನನಿಗೆ ಜಲಸ್ತಂಭಿನೀ ವಿದ್ಯೆಯು ಬರುತ್ತದೆ ಎಂಬದು ಶ್ರೀಕೃಷ್ಣ ನಿಗೆ ಗೊತ್ತಿತ್ತು. ಅದರಿಂದ ಅವನು ದುರ್ಯೋಧನನು ನಿಜವಾಗಿ ಸರೋ ವರದಲ್ಲಿ ಅಡಗಿಕೊಂಡಿರಬಹುದೆಂದು ಊಹಿಸಿದನು. ಆ ಬಳಿಕ ಅವರು ಮೂವರು ಒಳ್ಳೆ ಉಲ್ಲಾಸದಿಂದ ಆ ಸರೋವರದ ಬಳಿಗೆ ಹೋಗಿ ನೋ ಡಲು ಅಲ್ಲಿ ಮೂಡಿದ ಹೆಜ್ಜೆಗಳು ದುರ್ಯೋಧನನವೇ ಎಂಬದು ನಿಶ್ಚಯ ವಾಯಿತು. ಕೂಡಲೆ ಭೀಮಸೇನನು ಆ ಸರೋವರದೊಳಗಿನ ಮೀನಮೊಸಳ ಮೊದಲಾದ ಜಲಚರಗಳಿಗೆ ತೊಂದರೆಯಾಗುವಂತೆ ನೀರನ್ನು ಕದಡಿದನು. ಮತ್ತು ದುರ್ಯೋಧನನನ್ನು ಉದ್ದೇಶಿಸಿ, ಎಲಾ, ಭರತ ಕುಲಕಲಂಕಾ ಇನ್ನೂ ಕೈಯಲ್ಲಿ ಶಸ್ತ್ರವನ್ನು ಹಿಡಿದಿರುವೆ; ದುಃಶಾಸನನನ್ನು ಕೊಂದಂಥ ನಾನು ಕಡುಹಗೆ ಎಂದು ತಿಳಿಯುತ್ತಿರುವೆ; ಮಧುಕೈಟಭರೇ ಮೊದಲಾದ ದೈತ್ಯರನ್ನು ಸಂಹರಿಸಿದ ಶ್ರೀಹರಿಯಕೂಡ ಮದಾಂಧನಾಗಿ ಉದ್ದಾಮತನ ದಿಂದ ವರ್ತಿಸುತ್ತಿರುವೆ; ಹೀಗಿದ್ದರೂ ಈಗ ನನಗೆ ಹೆದರಿ ಕೆಸರಿನಲ್ಲಿ ಅಡಗಿ ಕೊಳ್ಳಲಿಕ್ಕೆ ನಾಚಿಕೆ ಬರುವದಿಲ್ಲವೆ? ನಿನಗೆ ಧಿಕ್ಕಾರವಿರಲಿ! ಎಲೈ ನರ