ಪುಟ:ವೇಣೀಬಂಧನ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣಿಬಂಧನ. ೩೩ ಕಣ್ಣೀರು ತಂದು ಭೀಮಸೇನನನ್ನು ನೋಡಿ ಭೀಮಾ, ಕರ್ಣದುಃಶಾ ಸನರನ್ನು ಕೊಂದ ನೀವಿಬ್ಬರೂ ನನಗೆ ಸರಿಯಾದ ಶತ್ರುಗಳು; ನಿಮ್ಮಿಬ್ಬರ ಸೇಡನ್ನೂ ನಾನು ತೀರಿಸಿಕೊಳ್ಳಬೇಕಾಗಿದೆ. ಇದಲ್ಲದೆ ನಿಮ್ಮೆಲ್ಲರಲ್ಲಿ ನೀನೇ ನಿಜವಾದ ಸಾಹಸಿಗನು; ನಿನ್ನ ಕೊಡವೇ ನನ್ನ ಹಗೆತನವು. ಈ ಬಗೆ ಯಾಗಿ ನೀನು ನನಗೆ ಅಪ್ರಿಯನಾಗಿದ್ದರೂ, ನಿನ್ನ ಸಾಹಸವನ್ನು ಕಂಡು ನಿನ್ನ ಕೂಡವೇ ಯುದ್ದಮಾಡಬೇಕೆಂದು ಮನಸಾಗುತ್ತದೆ. ಎಂದು ಅಂದನು. ಆ ಬಳಿಕ ಉಭಯತರು ತಮ್ಮ ತಮ್ಮ ಗದೆಗಳನ್ನು ತಕ್ಕೊಂಡು, ದ್ವಂದ್ವ ಯುದ್ಧಕ್ಕೆ ಸನ್ನದ್ಧರಾದರು. ಮೊದಮೊದಲು ಅವರು ಪರಸ್ಪರರನ್ನು ಮದ ಲಿಸಿ ಹೊಡದಾಡಿದರು. ಆ ಬಳಿಕ ಗದೆಗಳಿಂದ ಒಬ್ಬರ ಮೇಲೊಬ್ಬರು ಪೆಟ್ಟು ಹಾಕಲಾರಂಭಿಸಿದರು. ಉಭಯತರೂ ಗದಾಯುದ್ಧದಲ್ಲಿ ಕುಶಲರು; ಆದಾ ಭೀಮನಲ್ಲಿ ಶಕ್ತಿಸಾಹಸಗಳ, ದುರ್ಯೋಧನನಲ್ಲಿ ಕೌಶಲ್ಯವೂ ಮಿಗಿ ಲಾಗಿದ್ದವು. ಅವರಿಬ್ಬರೂ ತಮ್ಮ ತಮ್ಮ ಬುದ್ದಿ ಚಾತುರ್ಯವನ್ನೂ ಉಪ ಯೋಗಿಸಿ ಒಳ್ಳೆ ಚಟುವಟಿಕೆಯಿಂದ ನಾನಾವಿಧವಾಗಿ ಗದೆಯನ್ನು ತಿರುವು ತಿದ್ದರು. ಅವರನ್ನು ಕಂಡು, ಪ್ರೇಕ್ಷಕರು ತಟಸ್ಥರಾಗಿ ನಿಂತು ನೋಡುತ್ತ ಅಚ್ಚರಿಸುತ್ತಿದ್ದರು.

  • ಇತ್ಯ ಧರ್ಮರಾಜನು ದುರ್ಯೋಧನನು ಸಿಕ್ಕನೋ ಇಲ್ಲವೋ ಎಂದು ಚಿಂತಿಸುತ್ತ ತನ್ನ ಶಿಬಿರದಲ್ಲಿ ಕುಳಿತಿದ್ದನು. ಅಸ್ಟ್ರಲ್ಲಿ ಅವನು ಕಳಿಸಿದ ಒಬ್ಬ ಚಾರನು ಬಂದು, ಶ್ರೀ ಕೃಷ್ಣನು ಹೇಳಿದ ಮೇರೆಗೆ ಎಲ್ಲ ವೃತ್ತಾಂತ ವನ್ನು ವಿವರಿಸಿ ಹೇಳಿದನು. ಆಗ ಧರ್ಮರಾಜನು ಭಾರತಯುದ್ಧವು ಮುಗಿದು ಪಾಂಡವರು ಜಯಶಾಲಿಗಳಾಗುವರೆಂದೂ, ಬ್ರೌಪದಿಯು ಇನ್ನು ಮೇಲೆ ತನ್ನ - ವೇಳೇಬಂಧನ' ಸಮಾರಂಭವು ನೆರವೇರುವದೆಂದೂ ಹರ್ಷಭರಿತ ರಾದರು; ಮತ್ತು ಈ ಆನಂದವನ್ನು ಲೋಕಕ್ಕೆ ತಿಳಿಯಪಡಿಸುವದಕ್ಕಾಗಿ ಶ್ರೀ ಕೃಸನ ಅಪ್ಪಣೆಯ ಪ್ರಕಾರ ನಾಲ್ಕೂ ಕಡೆಗೆ ಮಂಗಲ ಸಮಾರಂಭ ಗಳು ನಡೆಯಬೇಕೆಂದು ಆಜ್ಞಾಪಿಸಿದನು. ಆ ಬಳಿಕ ಧರ್ಮರಾಜನ್ನೂ, ಬ್ರೌಪದಿಯೂ ಗದಾಯುದ್ಧದ ಪರಿಣಾಮವನ್ನು ಕುರಿತು ಮಾತಾಡುತ್ತ ಕುಳಿ ತುಕೊಂಡರು. ಬ್ರೌಪದಿಯು ಸ್ತ್ರೀ ಸ್ವಭಾವಕ್ಕನುಸರಿಸಿ ಮನಸಿನ ಕೋಮು ಲತೆಯಿಂದ ಜಯದ ಬಗ್ಗೆ ಸಂಶಯಗೊಂಡು, ತಾಯಿ, ಜಗದಂಬೆ, ನನ್ನ ಪ್ರಾಣನಾಥರಿಗೆ ಜಯವನ್ನು ಕೊಟ್ಟು, ಕಾಪಾಡಮ್ಮಾ ಎಂದು ಕೈ ಮುಗಿದು ಅನನ್ಯಭಾವದಿಂದ ಬೇಡಿಕೊಂಡಳು.