ಪುಟ:ವೇಣೀಬಂಧನ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಬಂಧನ, ೩೫ commonewwwaaannnnon ನಮ್ಮಂಥವರಿಗೆ ಈ ಯುದ್ಧ ಮೊದಲಾದ ಚಮತ್ಕಾರಗಳನ್ನು ನೋಡುವದ ರಲ್ಲಿ ಕೌತುಕವೆನಿಸುವದು ಸ್ವಾಭಾವಿಕವು. ನಾನು ಈಗ ನಡೆದಿರುವ ಕೃತಿ ಯರ ಫೋರಸಂಗ್ರಾಮವನ್ನು ನೋಡುತ್ತ ಸಮಂತಪಂಚಕದ ಸುತ್ತಲು ತಿರುಗಾಡುತ್ತಿರುವೆನು. ಇಂದು ಮಧ್ಯಾಹ್ನದ ಬಿಸಿಲಿನ ತಾಪದಿಂದ ಕಂಗೆಟ್ಟು ನೀರಡಿಸಿ ಒಳ್ಳೇ ಭರಕ್ಕೆ ಬಂದ ಅರ್ಜುನ ಸುಯೋಧನರ ಗದಾಯುದ್ಧವನ್ನು ನೋಡುವದನ್ನು ಅಷ್ಟಕ್ಕೇ ಬಿಟ್ಟು ಇಲ್ಲಿಗೆ ಬಂದೆನು. ಎಂದು ಹೇಳಿದನು. ಅರ್ಜುನ ಸುಯೋಧನರ ಗದಾಯುದ್ಧವೆಂದಕೂಡಲೆ ಅಲ್ಲಿ ಕುಳಿತವರೆಲ್ಲರೂ ಒಮ್ಮೆಲೆ ಗಾಬರಿಯಾಗಿ ಒಬ್ಬರಿಗೊಬ್ಬರು ಮಿಕಿ ಮಿಕಿ ಮೋರೆ ನೋಡಹ ತಿದರು. ಅಲ್ಲಿಯೇ ನಿಂತುಕೊಂಡಿದ್ದ ಒಬ್ಬ ಸೇವಕನು ಏನೈ ವಿಪ್ರಶ್ನೆಗೆ ಹೀಗೇಕೆ ಅನ್ನುತ್ತೀರಿ ? ಭೀಮ-ದುರ್ಯೋಧನರ ಗದಾಯುದ್ಧವೆಂದು ಅನ್ನಿರಿ, ಅಂದನು. ಈ ಮಾತಿಗೆ ಬ್ರಾಹ್ಮಣನ ಬಾಯಿಂದ ಏನು ಉತ್ತರವು ಹೊರ ಡುವದೆಂಬದನ್ನು ಧರ್ಮರಾಜನೂ ಬ್ರೌಪದಿಯ ಒಳ್ಳ ಆತುರದಿಂದ ನೋಡುತ್ತಿದ್ದರು. ಅದನ್ನು ಕಂಡು ಕಪಟ ಬ್ರಾಹ್ಮಣನು ಭೀಮ-ದುರ್ಯೊ ಧನರ ಯುದ್ದವು ಆಗಲೇ ಮುಗಿದು ಹೋಗಿರುವದು. ಭೀಮನ ಮಾತು ಇನ್ನು ಯಾತಕ್ಕೆ? ಎಂದು ಅಂದನು. ಆ ಮಾತು ಕಿವಿಗೆ ಬಿದ್ದ ಕ್ಷಣವೆ, ಧರ್ಮ ರಾಜನೂ ನದಿಯ ಮೂರ್ಛಿತರಾದರು. ಅದನ್ನು ಕಂಡು ಆ ಚಾರ್ವಾ ಕನು ಮನಸ್ಸಿನಲ್ಲಿಯೇ ಸಂತೋಷಪಡುತ್ತ ಈಗ ಮೂರ್ಛ ಹೋದವರು ಯಾರೆಂಬುದನ್ನು ಸೇವಕರಿಂದ ಕೇಳಿಕೊಂಡು, ಅಹಹ! ಪ್ರಮಾದವಾಯಿತು. ನಾನು ನಿಷ್ಕಾರಣವಾಗಿ ಇವರಿಗೆ ದುಃಖವನ್ನುಂಟುಮಾಡಿದೆನು. ಎಂದು ಹೊರ ಹೊರಗೆ ದುಃಖವನ್ನೂ ಸಹಾನುಭೂತಿಯನ್ನೂ ತೋರಿಸಿದನು. ಸ್ವಲ್ಪ ಹೊತ್ತಿನ ಮೇಲೆ ಧರ್ಮರಾಜನೂ ದೌಪದಿಯ ಚೇತರಿಸಿಕೊಂಡರು. ಧರ್ಮರಾಜನು-ಎಲೈ ಬ್ರಾಹ್ಮಣಶ್ರೇಷ್ಠರೆ, ನಡೆದ ವೃತ್ತಾಂತವನ್ನು ಸಾದ್ಯಂತವಾಗಿ ಹೇಳಿರಿ. ಎಂದು ದೈನ್ಯದಿಂದ ಬಿನ್ನವಿಸಿದನು. ಆಗ ಕಪಟ ಯಾದ ಬ್ರಾಹ್ಮಣನು-ಎಲೈ ರಾಜನೇ, ನೀನು ಧರ್ಮರಾಜನೆಂತಲೂ, ಈ ಸಾಧಿಯು ಬ್ರೌಪದಿಯೆಂತಲೂ ನನಗೆ ಮೊದಲೇ ಗೊತ್ತಾಗಿದ್ದರೆ ನಾನು ಇಲ್ಲಿಗೆ ಬರುತ್ತಿದ್ದಿಲ್ಲ. ಉಪಾಯವಿಲ್ಲ ಆದ ಮಾತಿಗೆ ಮರುಗಿ ಫಲವೇನು ? ನೀವು ಕೇಳುತ್ತೀರೆಂದ ಬಳಿಕ ಗದಾಯುದ್ಧದ ಸಂಕ್ಷಿಪ್ತ ವೃತ್ತಾಂತವನ್ನು ಹೇಳುವೆನು ಕೇಳಿರಿ. ಮೊದಲು ಭೀಮ ದುರ್ಯೋಧನರ ಗದಾಯುದ ವು