ಪುಟ:ವೇಣೀಬಂಧನ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಾಗ್ಯೂಷಣ ಒಳ್ಳೇ ಭರಕ್ಕೆ ಬಂತು. ಅಸ್ಟ್ರಲ್ಲಿ ಗದಾಯುದ್ಧ ಕುಶಲನಾದ ಬಲರಾ ಮನು ಅಲ್ಲಿಗೆ ಬಂದನು; ಭೀಮನಿಗಿಂತ ದುರ್ಯೋಧನನ ಮೇಲೆ ಅವನ ಪ್ರೀತಿಯು ಹೆಚ್ಚೆಂಬದು ನಿಮಗೆ ಗೊತ್ತುಂಟು. ಈ ಸಮಯದಲ್ಲಿ ಅವನು ಭೀಮನಿಗೆ ಗೊತ್ತಾಗದಂತೆ ದುರ್ಯೋಧನನಿಗೆ ಕೆಲವು ಪೇಚ ಗಳನ್ನು ಸಂಕೇತಗಳಿಂದ ತಿಳಿಸಿದನು. ದುರ್ಯೋಧನನು ಅವನ ಇಂಗಿತವನ್ನು ತಿಳಿದು, ಭೀಮನ ಮೇಲೆ ಗದೆಯ ಪೆಟ್ಟನ್ನು ಹಾಕಲು, ಅವನು ಕೂಡಲೆ ನೆಲಕ್ಕೆ ಬಿದ್ದು ಪ್ರಾಣಬಿಟ್ಟನು. ಎಂದು ಸುಳ್ಳು ಸಂಗತಿ ಯನ್ನು ಕಲ್ಪಿಸಿಕೊಂಡು ಅದು ಸಂಭವನೀಯವಾಗಿ ತೋರುವಂತೆ ಹೊಂದಿಸಿ ಹೇಳಿದನು. ಈ ಮಾತಿನಿಂದ ಭಯಂಕರ ಪರಿಣಾಮವಾಯಿತು. ಧರ್ಮರಾ ಜನೂ ದೌಪದಿಯ ಪುನಃ ಮೂರ್ಛಿತರಾದರು. ಸೇವಕರು ಅವರನ್ನು ಎಚ್ಚರಿಸಿದರು. ತರುವಾಯ ಬ್ರೌಪದಿಯು-ಹಾ ನಾಥಾ, ಭೀಮಸೇನಾ, ನನ್ನ ಅಪಮಾನದ ಸೇಡು ತೀರಿಸಿಕೊಳ್ಳುವದರಲ್ಲಿ ಪ್ರಾಣಕ್ಕೆ ಎರವಾದಿರಾ ? ಹಿಂದಕ್ಕೆ ಬಕ, ಹಿಡಿಂಬ, ಕಿರ್ಮೀರ, ಕೀಚಕ, ಜರಾಸಂಧ ಮೊದಲಾದವ ರನ್ನು ಕೊಂದ ಸಾಮರ್ಥ್ಯವು ಎಲ್ಲಿ ಹೋಯಿತು ? ಪ್ರಾಣದೊಡೆಯರೆ, ಆ ನೀತನಾದ ದುಃಶಾಸನನನ್ನು ಕೊಂದಮೇಲೆ ಒಮ್ಮೆಯಾದರೂ ದರ್ಶ ನ ಕೊಡಬಾರದೆ ? ಹಗೆಗಳನ್ನು ಕೊಂದಬಳಿಕ ಅವರ ರಕ್ತದಿಂದ ತುಂಬಿದ ಕೈಗಳಿಂದ ನಿನ್ನ ಹೆಳಲನ್ನು ಹಾಕುತ್ತೇನೆಂದು ಪ್ರತಿಜ್ಞೆ ಯನ್ನು ಮಾಡಿದ್ದಿರಲ್ಲ, ಕ್ಷತ್ರಿಯರು ಹೀಗೆ ಪ್ರತಿಜ್ಞಭಂಗವನ್ನು ಮಾಡುವರೆ ? ಅಥವಾ ನಿಲ್ಲಿರಿ ನಿಲ್ಲಿರಿ ನಾನೇ ನಿಮ್ಮ ಬಳಿಗೆ ಬರುತ್ತೇನೆ. ಹೆಳಲುಹಾಕಿ ಪ್ರತಿಜ್ಞೆಯನ್ನು ಪೂರ್ಣ ಮಾಡುವಿರಂತೆ ಎಂದು ಮತ್ತೆ ಮೂರ್ಛಿತಳಾದಳು. ದಾನಿಯು ಅವಳನ್ನು ಎಚ್ಚರಿಸಿದಳು. ಧರ್ಮರಾ ಜನು ವಿಪ್ರವರ್ಯರೆ, ಮುಂದೇನಾಯಿತು ? ಎಂದು ಕೇಳಿದನು. ಅದಕ್ಕೆ ಆ ಬ್ರಾಹ್ಮಣನು ಸುಳ್ಳೇ ಶೋಕಮಾಡುವವನಂತೆ ನಟಿಸಿ, ರಾಜಾ, ಮುಂದಿನ ಸಂಗತಿಯನ್ನು ಏನೆಂದು ಹೇಳಲಿ? ಭೀಮನು ಪರಲೋಕಕ್ಕೆ ತೆರಳಿದ ಕೂಡಲೆ, ಅರ್ಜುನನು ಗಾಂಡೀವಧನುಷ್ಯವನ್ನು ನೆಲಕ್ಕೆ ಚಲ್ಲಿ ಕೊಟ್ಟು, ದುಃಖದಿಂದ ಅಳಹತ್ತಿದನು. ಆಗ ದುರ್ಯೋಧನನು ಅವನಿಗೆ ಕೆಲವು ನಿಷ್ಟುರ ಮಾತುಗಳನ್ನು ಆಡಿದನು. ಅವನು ಅವುಗಳನ್ನು ಸಹಿಸದೆ, ಭೀಮನ ಕೈಯೊಳಗಿನ ರಕ್ತಮಯವಾದ ಗದೆಯನ್ನು ತಕ್ಕೊಂಡು, ದುರ್ಯೋಧನನ