ಪುಟ:ವೇಣೀಬಂಧನ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣಿಬಂಧನ ೩೭ PA ಮೈ ಮೇಲೆ ಏರಿಹೋದನು. ಉಭಯತರೂ ಒಳ್ಳೆ ನಿಕರದಿಂದ ಹೋರಾಡ ತಿರಲು, ಈ ಯುದ್ಧದಲ್ಲಿ ಅರ್ಜುನನಿಗೆ ಯಶದೊರೆಯುವದು ಅಸಂಭವ ವೆಂತಲೂ, ಅರ್ಜುನನ ಮೇಲೆ ಒಂದುವೇಳೆ ಭಯಂಕರ ಪ್ರಸಂಗವು ಒದಗಿ ದರೆ ಶ್ರೀ ಕೃನಿಗೆ ಬಹಳ ದು:ಖವಾಗುವದೆಂತಲೂ, ಭಾವಿಸಿ, ಬಲರಾ ಮನು ಜುಲುಮೆಯಿಂದ ಶ್ರೀ ಕೃಹ್ಮನನ್ನು ತನ್ನ ರಥದಲ್ಲಿ ಕೂಡಿಸಿಕೊಂಡು ದ್ವಾರಕೆಗೆ ಹೋದನು. ಎಂದು ಹೇಳಿ ಸುಮ್ಮನಾದನು. ಇದರಿಂದ ಧರ್ಮ ರಾಜನ ಮನಸ್ಸು ಅರ್ಜುನನ ಜಯದ ವಿಷಯವಾಗಿ ಸಂಶಯಗೊಂಡಿತು; ಹಾಗು ಅವನಾದರೂ ಭೀಮಸೇನನ ಗತಿಯನ್ನೇ ಹೊಂದುವನೆಂದು ನಿಶ್ಚ ಯಿಸಿ ಉಭಯತರನ್ನೂ ನೆನೆನೆನಿಸಿ ಪ್ರಳಾವಿಸಹತ್ತಿದನು. ದ್ವೇಷ ದಿಯೂ ಅದನ್ನು ಕೇಳಿ ದುಃಖಾತಿಶಯದಿಂದ ಅಗ್ನಿಪ್ರವೇಶ ಮಾಡುವ ದನ್ನು ನಿಶ್ಚಯಿಸಿ ಚಿತೆಯನ್ನು ಸಿದ್ಧ ಮಾಡುವದಕ್ಕಾಗಿ ಸೇವಕರಿಗೆ ಆಜ್ಞಾಪಿ ನಿದಳು. ಮತ್ತು ಧರ್ಮರಾಜನನ್ನು ಕುರಿತು-ಮಹಾರಾಜರೇ, ಯಾವ ನೀತನು ಭೀಮಸೇನನ ಪ್ರಾಣವನ್ನು ಹರಣಮಾಡಿದನೋ ಅವನ ಸೇಡು ತೀರಿಸಿಕೊಳ್ಳದೆ ಬಿಡಬೇಡಿರಿ, ಎಂದು ಹೇಳಿದಳು. ಅದಕ್ಕೆ ಧರ್ಮರಾಜನು ಪ್ರಿಯೆ, ಇನ್ನು ಸೇಡುತೀರಿಸಿಕೊಂಡು ಏನು ಮಾಡುವದದೆ ? ನನಗೆ ಈ ರಾಜ್ಯಲಕ್ಷ್ಮಿಯು ಇನ್ನು ಬೇಕಾಗಿಲ್ಲ. ನನ್ನ ಪ್ರಿಯ ತಮ್ಮಂದಿರನ್ನು ಬಹಳ ಹೊತ್ತು ಅಗಲಿ ಇರಲಾರೆನು. ಇದಲ್ಲದೆ ಒಬ್ಬ ತಮ್ಮನು ಮರಣ ಹೊಂದಿ ದರೆ ನಾನು ಪ್ರಾಣತ್ಯಾಗ ಮಾಡತಕ್ಕದ್ದೆಂದು ನನ್ನ ನಿಶ್ಚಯವುಂಟು. ಆದಕಾ ರಣ ಎಲೈ ಪಾಂಚಾಲಿಯೇ ನಾವಿಬ್ಬರೂ ನಮ್ಮ ದೇಹಗಳನ್ನು ಅಗ್ನಿ ನಾರಾ ಯಣನಿಗೆ ಆಹುತಿ ಕೊಟ್ಟು ಅವರ ಭೆಟ್ಟಿಗೆ ಹೋಗೋಣ ನಡೆ ಎಂದು ಅಂದನು. ಈ ಮಾತುಗಳನ್ನು ಕೇಳಿ ಆ ಕಪಟಿಯಾದ ಬ್ರಾಹ್ಮಣನು ತನ್ನ ಮನೋರಥವು ಕೈಗೂಡಿತೆಂದು ಮನಸಿನಲ್ಲಿಯೇ ಸಂತೋಷಪಡುತ್ತ ಹೋಗಿಬರುತ್ತೇನೆಂದು ಹೇಳಿ ಅಲ್ಲಿಂದ ಹೊರಟು ಹೋದನು.