ಪುಟ:ವೇಣೀಬಂಧನ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಳೇಬಂಧನ.

ಈ ಮೇರೆಗೆ ಧರ್ಮರಾಜನೂ ಬ್ರೌಪದಿಯೂ ಚಿತಾರೋಹಣ ಮಾಡಲಿಕ್ಕೆ ಸಿದ್ಧರಾದದ್ದನ್ನು ಕಂಡು ಯಾವತ್ತು ಸೇವಕರು ಕಣ್ಣೀರು ಸುರಿ ಸಹತ್ತಿದರು. ಮತ್ತು ಅವರ ಸಂರಕ್ಷಣೆಯ ಸಲುವಾಗಿ ಲೋಕಪಾಲನನ್ನು ಮರೆಹೊಕ್ಕು ಅನನ್ಯಭಾವದಿಂದ ಸ್ತೋತ್ರ ಮಾಡಹತ್ತಿದರು. ಧರ್ಮರಾಜ ನು ಅವರನ್ನು ಸಂತೈಸಿ, ನೀರು ತರಹೇಳಿದನು. ಆ ಬಳಿಕ ಅವರು ಹಸ್ತ್ರ, ಪಾದ, ಪ್ರಜ್ಞಾನವನ್ನು ಮಾಡಿಕೊಂಡು ಆಚಮನ ನೇತ್ರಸ್ಪರ್ಶಗಳನ್ನು ಮಾಡಿಕೊಂಡು, ಲೋಕರೂಢಿಗನುಸಾರವಾಗಿ ಗುರು ಭೀಷ್ಮಾಚಾರ್ಯ ನಿಗೂ, ಪಿತಾಮಹ ವಿಚಿತ್ರವೀರ್ಯನಿಗೂ, ಪ್ರಪಿತಾಮಹ ಶಂತನುರಾಯ ನಿಗೂ ತಿಲಾಂಜಲಿಯನ್ನು ಕೊಟ್ಟನು. ಕಟ್ಟ ಕಡೆಗೆ ಒಳ್ಳೇದು:ಖದಿಂದ ಕಣ್ಣೀ ರು ತಂದು, ಪೂಜ್ಯಪಿತ ಪಂಡುರಾಜನನ್ನು ನೆನಿಸಿ ಅವರ ಹೆಸರಿನಿಂದ ನೀರು ಬಿಟ್ಟನು. ಆ ಬಳಿಕ ಭೀಮಸೇನನ ಬಾಲಲೀಲೆಗಳನ್ನು ನೆನಿಸಿ ಅವನ ಹೆಸ ರಿನಿಂದಲೂ ನೀರು ಬಿಟ್ಟನು. ಬ್ರೌಪದಿಯೂ ಭೀಮಶೇನನನ್ನು ನೆನಿಸಿ-ಪ್ರಾಣ ನಾಥರೇ ಈ ದಾಸಿಯು ಕೊಡುವ ನೀರು ನಿಮಗೆ ಪರಲೋಕದಲ್ಲಿ ಕಾಲು ತೊಳೆಯಲಿಕ್ಕೆ ಉಪಯೋಗವಾಗಲಿ ಎಂದು ನೀರು ಬಿಟ್ಟಳು. ಈ ಹೃದಯ ದ್ರಾವಕ ಸ್ಥಿತಿಯನ್ನು ಕಂಡು ಪರಿಜನರಿಗೆ ಬಹಳ ದುಃಖವಾಯಿತು. ಅಮ್ಮ ರಲ್ಲಿ ಧರ್ಮರಾಜನ ಬಲಗಣ್ಣು ಹಾರಹತ್ತಿತು. ಅದರಿಂದ ಅವನು ಸರಿ ಕದಲ್ಲಿ ಭೀಮನ ದರ್ಶನವು ಬಹು ಬೇಗ ಆಗುವದೆಂದು ಸಮಾಧಾನಪಟ್ಟ ನು. ಆ ಬಳಿಕ ಅವನು ಬ್ರೌಪದಿಯ ಕೈಹಿಡಿದು ಧಗದ್ದಗಿಸಿ ಉರಿಯುವ ಬೆಂಕಿಯ ಬಳಿಗೆ ಹೋಗಿ ಅದಕ್ಕೆ ಮೂರು ಸಾರೆ ಪ್ರದಕ್ಷಿಣೆಯನ್ನು ಹಾಕಿ ಶ್ರೀ ಕೃಷ್ಟನಾಮಸ್ಮರಣೆಯನ್ನು ಮಾಡುತ್ತ ಅದರಲ್ಲಿ ಹಾರಲಿಕ್ಕೆ ಸಿದ್ದ ನಾಗಿ ನಿಂತನು. ಇತ್ತ ಸರೋವರದ ದಂಡೆಯಮೇಲೆ ಭೀಮದುರ್ಯೋಧನರ ಗದಾ ಯುದ್ಧವು ಒಳ್ಳೆ ಸಂಭ್ರಮದಿಂದ ನಡೆದಿತ್ತು. ಒಬ್ಬರು ಮತ್ತೊಬ್ಬರ ಮೇಲೆ ಭಯಂಕರವಾಗಿ ಗದಾಪ್ರಹಾರವನ್ನು ಮಾಡುತ್ತಿದ್ದರು. ಕಟ್ಟ ಕಡೆಗೆ ಭೀಮ ಸೇನನು ದುರ್ಯೋಧನನ ತೊಡೆಯಮೇಲೆ ಒಂದು ಗದೆಯ ಬಿಟ್ಟು ಹಾಕಲು, ದುರ್ಯೋಧನನು ನೆಲಕ್ಕೆ ಬಿದ್ದು ಪ್ರಾಣಬಿಟ್ಟನು. ಆ ಕಾಲಕ್ಕೆ ಭೀಮಸೇ ನನ ಸರ್ವಾಂಗವು ರಕ್ತಮಯವಾಗಿತ್ತು. ಮುಖಮುದ್ರೆಯು ಒಳ ಭಯಂಕ