ಪುಟ:ವೇಣೀಬಂಧನ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಬಂಧನ. ಕೈಯಿಂದ ತುಸು ಓರೆಮಾಡಿಕೊಂಡು ಆ ಬಳಿಕ ಅಗ್ನಿಪ್ರವೇಶವನ್ನು ಮಾಡು ಎಂದು ಅಂದನು. ಅದಕ್ಕೆ ಧರ್ಮರಾಯನು-ಪಾಂಚಾಲಿ ತುಸು ತಡೆ ಗಡಿಬಿಡಿಮಾಡಬೇಡ ಈ ನೀಚನು ಸಾಯದ ಹೊರತು ಕೇಶಪಾಂಗ ಳನ್ನು ಕಟ್ಟಬಾರದು ಎಂದು ಒದರಿ ಹೇಳಿದನು. ಆಗ ಭೀಮಸೇನನೂ ಬದರಿ-ಪ್ರಿಯೇ ದೌಪದಿ ಆದೇನು? ನಾನು ಜೀವದಿಂದ ಇರಲು ನೀನು ನಿನ್ನ ಕೈಯಿಂದ ಹೆಳಲು ಹಾಕಿಕೊಳ್ಳುವಿಯಾ ? ತುಸು ತಾಳು ದುಸ್ಮನಾದ ದುಃಶಾಸನನ ರಕ್ತದಿಂದ ತುಂಬಿದ ಈ ಕೈಗಳಿಂದ ನಿನ್ನ ಹೆಳಲನ್ನು ನಾನೇ ಹಾಕುವೆನು ಎಂದು ಅಂದನು. ಭೀಮಸೇನನ ಈ ಶಬ್ದಗಳು ಕಿವಿಗೆ ಬಿದ್ದ ಕೂಡಲೆ ಬ್ರೌಪದಿಯು ಗೊಂದಲದಲ್ಲಿ ಬಿದ್ದು ನೋಡಹತ್ತಿದಳು. ಅವಳಿಗೆ ತಾನು ಕನಸಿನಲ್ಲಿರು ವೆನೋ ಎಚ್ಚರಿಕೆಯಲ್ಲಿರುವೆನೋ ತಿಳಿಯದಂತಾಯಿತು. ಅಸ್ಟರಲ್ಲಿ ಭೀಮ ಸೇನನು ಎಲೈ ಅಂಜುಬುರಿಕೆಯೇ ಎಲ್ಲಿಗೆ ಹೋಗುವೆ? ಇಲ್ಲಿ ಬಾ, ಎಂದು ಅವಳ ಕೇಶಪಾಶಗಳನ್ನು ಹಿಡಿಯಹೋದನು. ಅದನ್ನು ಕಂಡು ಧರ್ಮ ರಾಯನು ಸಿಟ್ಟಿನಿಂದ ಅವನ ಟೊಂಕಕ್ಕೆ ಅಡ್ಡಿ ಮಿಟ್ಟಿ ಹಾಕಿ ನೀಚಾ ದುರ್ಯೋಧನಾ ಹಿಂದೆ ಮಾಡಿದ ಪಾಪವು ಸಾಕಾಗಲಿಲ್ಲವೆ? ಎಂದು ಒಳ್ಳೆ ಆವೇಶದಿಂದ ಅವನನ್ನು ಬೆಂಕಿಯಲ್ಲಿ ನೂಕಹೋದನು. ಅದನ್ನು ಕಂಡು ಭೀಮಸೇನನು-ಅಣ್ಣಾ, ಇದೇನು ನಾನು ದುರ್ಯೋಧನನಲ್ಲ. ನಿಮ್ಮ ಅಜ್ಞಾ ಧಾರಕ ತಮ್ಮನಾದ ಭೀಮನು ನನ್ನನ್ನು ಬಿಡಿರಿ; ಎಂದು ಅಂದನು. ಧರ್ಮ ರಾಯನಿಗೆ ಬಹಳ ಆಶ್ಚರ್ಯವಾಯಿತು. ಅವನು ನೆಟ್ಟಗೆ ನಿರೀಕ್ಷಿಸಿ ನಿಜ ವಾಗಿ ಇವನು ಭೀಮಸೇನನೇ ಎಂದು ಮನಸ್ಸಿನಲ್ಲಿ ನಿಶ್ಚಯಿಸಿದನು. ಆಗೆ ಅವನಿಗೆ ಆದ ಆನಂದವನ್ನು ವರ್ಣಿಸುವದು ಅಶಕ್ಯವು. ಆಗ ಅವನು ಭೀಮ ಸೇನನನ್ನು ಬಿಗಿಯಾಗಿ ಅಪ್ಪಿಕೊಂಡು ಮುದ್ದಾಡಿದನು, ಮತ್ತು ಅರ್ಜುನನು ಸುಖವಾಗಿರುವನೆ? ಎಂದು ಕೇಳಲು, ಭೀಮಸೇನನು ಎಲ್ಲ ಸಂಗತಿಗಳನ್ನು ವಿವರಿಸಿ ಹೇಳಿದನು. ಅದರಿಂದಂತೂ ಅವನ ಆನಂದಕ್ಕೆ ಪಾರವಿಲ್ಲದಂತಾ ಯಿತು. ಅಷ್ಟರಲ್ಲಿ ಶ್ರೀ ಕೃಷ್ಣನು ಅರ್ಜುನನೊಡನೆ ಧರ್ಮರಾಯನ ಭೆಟ್ಟಿಗೆ ಬಂದನು, ಸಾಂಪ್ರದಾಯದಂತೆ ಆದರೋಪಚಾರಗಳೂ ಕುಶಲ ಪ್ರಶ್ನೆಗಳೂ ಆದವು, ಎಲ್ಲರೂ ಆನಂದ ಸಾಗರದಲ್ಲಿ ಮುಳುಗಿದರು, ಚಾರ್ವಾಕನೆಂಬ