ಪುಟ:ವೇಣೀಬಂಧನ.djvu/೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಪ್ರಸ್ತಾವನೆ. ಪ್ರಿಯ ಬಾಲವಾಚಕರ, ಇದೊಂದು ಸುಲಭವಾದ ಮನೋರಂಜಕ ಪುಸ್ತೆ ಕವು, ಸಂಸ್ಕೃತ ಭಾಷೆಯಲ್ಲಿ ವೇಣೀಸಂಸಾರವೆಂಬದೊಂದು ಸುರಸನಾಟಕವುಂಟೆಂಬ ದನ್ನು ನೀವು ಕೇಳಿರಬಹುದು; ಅದನ್ನು ಬಂಗಾಲಫಾಂತದ ಭಟ್ಟ ನಾರಾಯಣ ನೆಂಬ ಕವಿಯು ಇಂದಿಗೆ ಸುಮಾರು ೮೭೫ ವರ್ಷಗಳ ಪೂರ್ವದಲ್ಲಿ ಬರೆದಿರುವನು, ಮಹಾಭಾರತದ ಉದ್ಯೋಗ ಪರ್ವದಿಂದ ಗದಾಪರ್ವದವರೆಗಿನ ಕಥೆಯೇ ಈ ನಾಟಕದ ಮುಖ್ಯ ವಿಷಯವಾಗಿರುವದು. ಅದರ ಆಧಾರದಿಂದ ಈ ಚಿಕ್ಕ ಪುಸ್ತಕವು ಬರೆಯಲ್ಪಟ್ಟಿರುವದು, ಹಿಂದಕ್ಕೆ ಧಾರವಾಡ ಶಿಕ್ಷಕ ಶಿಕ್ಷಣಾಲಯದ ಕನ್ನಡ ಗುರುಗಳಾಗಿದ್ದ ಗುರು ವರ್ಯ ಮುಳಬಾಗಲ ಧೋಂಡೋಪಂತರು ಆ ನಾಟಕವನ್ನು ಸಮಗ್ರವಾಗಿ ಕನ್ನ ಡಕ್ಕೆ ಪರಿವರ್ತಿಸಿರಲು ಅದೇ ಕೆಲಸಕ್ಕೆ ನೀವೇಕೆ ಶ್ರಮಜರೆಂದು ಕೇಳುತ್ತೀರಾ? ಪ್ರಿಯ ಬಾಲಕರೆ, ಕೇಳಿರಿ. ನಮ್ಮ ಗುರುವರ್ಯ ರು ವೇಣೀಸಂಹಾರ ನಾಟಕವನ್ನು ತಮ್ಮ ವಿದ್ಯಾರ್ಥಿಗಳ ಸಲುವಾಗಿ ಬರೆದಿರುವರು. ನೀವು ಅದನ್ನು ಅನಾಯಸವಾಗಿ ಓದಿ ಸಾರಾಂಶವನ್ನು ಗ್ರಹಿಸಲಾರಿರಿ, ಈ ಚಿಕ್ಕ ಪುಸ್ತಕವು ನಿಮ್ಮ ಸಲುವಾಗಿಯೇ ಬರೆಯಲ್ಪಟ್ಟಿರುವದು, ಆದಷ್ಟು ಮಟ್ಟಿಗೆ ಇದರ ಭಾಷೆಯು ಸುಲಭವಾಗುವಂತೆ ಮಾಡ ಲ್ಪಟ್ಟಿದೆ. ಈ ಪುಸ್ತಕವನ್ನು ನೀವು ಅಲ್ಪಾವಕಾಶದಲ್ಲಿ ಓದಿ ಮುಗಿಸಬಹುದು, ಇದರಿಂದ ಸಾಧಾರಣವಾಗಿ ಇಡೀ ಮಹಾಭಾರತದ ಕಥೆಯು ನಿಮ್ಮ ಮನಸಿನಲ್ಲಿ ಬರುವದು; ಅದರೊಳಗಿನ ಧರ್ಮ, ಭೀಮ, ದೌಪದಿ, ದುರ್ಯೋಧನ, ಕರ್ಣ, ಅಶ್ವತ್ಥಾಮ ಇವ ರೇ ಮೊದಲಾದ ಮುಖ್ಯ ಮುಖ್ಯ ಪಾತ್ರಗಳ ಪ್ರಭಾವವು ಗೊತ್ತಾಗುವದು; ಮತ್ತು ಪರಸ್ತ್ರೀಯ ಮಾನಭಂಗವನ್ನು ಮಾಡಿದ ನೀಚರಿಗೆ ಏನು ಗತಿಯಾಗುವದೆಂಬದು ಚ ನ್ನಾಗಿ ತಿಳಿಯುವದು, ಈ ಪುಸ್ತಕವು ನಿಮಗೆ ಮೆಚ್ಚಿಗೆಯಾದರೆ, ಸಂಸ್ಕೃತಹಳೆಗನ್ನಡ ಭಾಷೆಗಳೊಳಗಿನ ಸುರಸವಾದ ಕಥೆಗಳನ್ನು ಇದೇ ” ಅತಿಯಾಗಿ ಸುಲಭ ಭಾಷೆಯಿಂದ ಬರೆಯಲು ಯತ್ನ ಮಾಡುವೆನು. ಪರಮಾತ್ಮನು ನಮ್ಮ ಇಚ್ಛೆಯನ್ನು ಈಡೇರಿಸಲಿ, ಮಕ್ಕಳೆ ಇನ್ನೊಂದು ಮಾತು ಹೇಳುವದುಳಿದದೆ, ಈಗ ಕೆಲವು ದಿವಸಗಳ ಕೆಳಗೆ ದಕ್ಷಿಣಭಾಗದ ಎಜ್ಯುಕೇಶನಲ್ ಇನಸ್ಪೆಕ್ಟರ ಬಾಗೆಯಿಂದ ನಿವೃ ತರಾದ ಮೇಹರಬಾನ ರಾವಜೀರಾವ ಬಳವಂತ ಕರಂದೀಕರ ಈ ಮಹನೀಯರು ತಮ್ಮ ಅಮೂಲ್ಯವೇಳೆಯನ್ನು ವೆಚ್ಚ ಮಾಡಿ ಈ ಪುಸ್ತಕದ ಭಾಷೆಯು ಸುಲಭವಾಗು ವಂತೆ ಮಾಡುವ ಬಗ್ಗೆಯೂ, ವಿಷಯದಲ್ಲಿ ಹಲ ಕೆಲವು ಹೆಚ್ಚು ಕಡಿಮೆಗಳನ್ನು ಮಾಡುವ ವಿಷಯವಾಗಿಯೂ ಕೆಲವು ಉಪಯುಕ್ತ ಸೂಚನೆಗಳನ್ನು ಮಾಡಿದ ಕಾರಣ ನಾನು ಆ ಮಹನೀಯರಿಗೆ ಅತ್ಯಂತ ಯಣಿಯಾಗಿರುವೆನು, - ಧಾರವಾಡ || T. V. Aminbhavi. ತಾ, ೯ ಮೇ ೧೯೧೩, |