ಪುಟ:ವೇಣೀಸಂಹಾರ ನಾಟಕಂ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಢಮಾಂಕ ವ್ಯಾಸ, ನಾರದ, ಪರಶುರಾಮ, ತುಂಬುರರೇ ಮೊದಲಾದ ಋಷಿ ಶ್ರೇಷ್ಠ ರುಗಳಿಂದ ಕೂಡಿ, ಚಕ್ರಪಾಣಿಯಾದ ದೇವಕೀನಂದನನು ಭರತ ಕುಲಕ್ಕೆ ಹಿತವನ್ನು ಬಯಸಿ, ತಾನೆ: ದೂತಭಾವವನ್ನು ವಹಿಸಿ, ಮಹಾ ರಾಜ ದುರೊ?ಧನನ ಶಿಬಿರಕ್ಕೆ ಪ್ರವೇಶ ಮಾಡುವ ಕಾಲವಾದ್ದರಿಂದ ಮಂಗಳ ವಾದ್ಯಗಳೆಲ್ಲವನ್ನೂ ಸಿದ್ಧಪಡಿಸಿಕೊಳ್ಳಿರಿ. ಸೂತ್ರಧಾರ :-(ಕಿವಿಗೊಟ್ಟು ಕೇಳಿ) (ಸಂತೋಷದಿಂದ) ಜಗತ್ತಿನ ಸೃಷ್ಟಿ, ಸ್ಥಿತಿ ಪ್ರಳಯಗಳಿಗೆ ಕಾರಣನಾದ ವಿಷ್ಣುವಿನಿಂದ ಈ ಭರತ ಕುಲವೂ, ಸಮಸ್ತ ರಾಜಮಂಡಲವೂ ಸಹ ಅನುಗೃಹೀತವಾಯಿತು. ಏಕೆಂದರೆ ಈ ಕುರು ಪಾಂಡವರುಗಳಿಗೆ ಪ್ರಳಯಕಾಲದ ಬೆಂಕಿಯಂತೆ ಒದಗಿರುವ ಯುದ್ಧ ವನ್ನು ಶಾಂತಗೊಳಿಸುವುದಕ್ಕಾಗಿ, ಸಂಧಿಗೋಸ್ಕರ ಕಂಸಾರಿಯು ತಾನೇ ದೂತನಾಗಿ ಇರುವನು. ಎಲೈ ಪಾರಿಪಾರ್ಶ್ವಕನೇ, ಏಕೆ ಇನ್ನೂ ಸಂಗೀತ ವನ್ನು ಆರಂಭಿಸಲಿಲ್ಲ. ಪಾರಿಸಾರ್ಶ್ವಕ :- ಪ್ರವೇಶಿಸಿ) ಯಾವ ಋತುವನ್ನುದ್ದೇಶಿಸಿ ಸೂತ್ರಧಾರ :---ಬೆಳದಿಂಗಳುಗಳಿಂದಲೂ, ನಕ್ಷತ್ರಗಳಿಂದಲೂ, ಕೌಂಚ ಪಕ್ಷಿಗ ಳಿಂದಲೂ, ಹಂಸ ಸಮೂಹಗಳಿಂದಲೂ, ಕಾಶಪುಷ್ಪಗಳಿಂದಲೂ, ಬಿಳಿ ನೈದಿಲೆಗಳಿಂದಲೂ, ದಿಕ್ಕು, ಆಕಾಶ ಇವುಗಳನ್ನೆಲ್ಲ ವನ್ನೂ ಬೆಳ್ಳಗೆ ಮಾಡು ತಲಿರುವ ಮಧುರವಾದ ನೀರಿನಿಂದ ಕೂಡಿದ ಕೊಳಗಳುಳ್ಳ ಈ ಶರತ್ಕಾಲ ನನ್ನೇ ಆಶ್ರಯಿಸಿ ಗಾನಮಾಡಬಹುದು, ಈ ಶರತ್ಕಾಲದಲ್ಲಿ 'ಸತ್ಸಕ ರಾಗಿಯೂ, 'ಮಧುರಭಾಷಣವುಳ್ಳವರಾಗಿಯೂ, 'ಪ್ರಸಾಧಿತಾ ಶರಾಗಿಯೂ, “ಮದೋದ್ದ ತಾರಂಭರಾಗಿಯೂ, ಇರುವ ಧಾರ್ತ m e -no -- - bಅ = = == - - -- 1 ಸುಂದರವಾದ ಗರಿಗಳುಳ್ಳ, ಸೈನ್ಯ ಸಹಾಯವುಳ್ಳ, 2 ರಮ್ಯವಾದ ಶಬ್ದವಳ್ಳ, ಮಧುರವಾದ ಮಾತುಳ್ಯ 3 ಅಲಂಕೃತವಾದ ದಿಣ್ಣಾಗಗಳುಳ್ಳ, ಪ್ರಸನ್ನರಾಗಿ ಮಾಡಿಕೊಳ್ಳಲ್ಪಟ್ಟ ದಿಕ್ಕು ದಿಕ್ಕಿನಲ್ಲಿ ರುವ ಜಗಗಳುಳ್ಳ, 4 ಸಂತೋಷದಿಂದ ಹೆಚ್ಚಿದ ಆನಂದವುಳ್ಳ, ಅಹಂಕಾರದಿಂದ ಸ್ವಚ್ಚಾ ವ್ಯಾಪಾರವುಳ್ಳ,