ಪುಟ:ವೇಣೀಸಂಹಾರ ನಾಟಕಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೇಣೀಸಂಹಾರ ನಾಟಕ ಭೀನು ;-ನಿಮಗೆ ನಾಚಿಕೆಯಲ್ಲಿರುವುದು ? ಮೂಢನೆ', ಕೋಪದಿಂದ ಶತ್ರುಗೆ ಳನ್ನು ನಾಶಮಾಡುವುದು ನಿನಗೆ ನಾಚಿಕೆಯನ್ನುಂಟುಮಾಡುತ್ತದೆ. ನಿಮ್ಮ ಹೆಂಡತಿಯರನ್ನು ಸಭೆಗೆ ತಂದು ಮಾಡಿದ ಕೇತಕರ್ಷಣವು ನಿಮಗೆ ನಾಚಿಕೆ ಯನ್ನುಂಟುಮಾಡುವುದಿಲ್ಲ ! ದೌಪದಿ :-ನಾಥನೆ, ಇವರಿಗೆ ನಾಚಿಕೆಯಿಲ್ಲ. ನೀನಾದರೂ ಮರೆಯದೇ ಇರು. ಭೀಮ :-ನತ್ಯ, ದೌಪದಿಯೇಕೆ ಸಾವಕಾಶ ಮಾಡುವಳು ? ಸಹದೇವ:ಆರನೇ, ಅವಳು ಬಂದು ಎಷ್ಟೋ ಹೊತ್ತಾಯಿತು. ಆದರೆ ಕೊ ಪಕ್ಕೆ ವಶನಾದ ನೀನು ಅವಳನ್ನು ನೋಡಲಿಲ್ಲ. ಭೀಮು :-( ನೋಡಿ ವಿಶ್ವಾಸದಿಂದ) ದೇವಿಯೆ?, ಕೋಪಗೊಂಡ ನನಗೆ ನೀನು ಬಂದದ್ದೇ ತಿಳಿಯಲಿಲ್ಲ. ಇದಕ್ಕಾಗಿ ನೀನು ಕೋಪಮಾಡಬೇಡ, ದೌಪದಿ :-ನಾಥನೇ, ನೀವು ಉದಾಸೀನರಾಗಿದ್ದರೆ ನನಗೆ ಕೊಪವೇ ಹೊರತು, ಕುಪಿತರಾದರೆ ಇಲ್ಲ, ಭೀಮು: ಹಾಗಾದರೆ, ತಿರಸ್ಕಾರ ಮಾಡಲಿಲ್ಲವೆಂದು ತಿಳಿದುಕೊ. ದೌಪದಿ :-(ದುಃಖದಿಂದ ನಿಟ್ಟುಸುರು ಬಿಡುವಳು.) ಭೀಮ :-(ಕೈಹಿಡಿದು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಮುಖವನ್ನು ನೋಡಿ) ನೀನು ಈಗ ಬಹಳ ದುಃಖಿತಳಾಗಿ ಕಾಣುವಿ. ಬ್ರೌಸದಿ : ನೀವು ನನ್ನಿಹಿತರಾಗಿರುವಾಗ ನನಗೆ ದುಃಖದೇನೂ ಇಲ್ಲವು. ಭೀಮು :-ಏಕೆ ಹೆ?ಳುವುದಿಲ್ಲ ? (ಹಾಗೆ' ಕೇಶವನ್ನು ನೋಡಿ) ಅಥವಾ ಹೇಳು ವುದೆನು ? ವಾಂಡವರು ಬದುಕಿದ್ದು ಸಮಾಸದಲ್ಲಿಯೇ ಇದ್ದಾಗ್ಯೂ, ಪಾಂಚಾಲ ರಾಜಪುತ್ರಿಯು ಈ ಅವಸ್ಥೆಯನ್ನನುಭವಿಸುತ್ತಿರುವಳು. ದೌಪದಿ :-ಸಖಿ, ಬುದ್ಧಿವಂತಿಕೆ, ನಾಥನಿಗೆ ಸಂಗತಿಯನ್ನು ತಿಳಿಸು. ನನ್ನ ಪರಿಧನಕ್ಕೆ ಇನ್ನಾರು ತಾನೆ ದುಃಖಪಡುವರು. ಚೇಟಿ :-ಅಪ್ಪಣೆ. (ಎಂದು ಭೀಮನಿಗೆ ಕೈಮುಗಿದು ) ಕುಮಾರನೇ, ಇದಕ್ಕಿಂ ತಲೂ ಹೆಚ್ಚಾದ ದುಃಖಕಾರಣವು ದೇವಿಗೆ ಒದಗಿರುವುದು, .