ಪುಟ:ವೇಣೀಸಂಹಾರ ನಾಟಕಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಾಂಕ 11 ಭೀಮ :-ಇದಕ್ಕಿಂತಲೂ ಹೆಚ್ಚಾದದ್ದು ಅದು ಯಾವುದು ? ಕಪ್ಪಾದ ಧೂಮ ಶಿಲೆಯಂತೆ ಮುಕ್ತವೇಣಿಯಾದ ನದಿಯನ್ನು ಸ್ಪರ್ಶಮಾಡಿ ಕೌರವ ವಂಶಕ್ಕೆ ಕಾಡು ಕಿಚ್ಚಾಗಿರುವ ನನ್ನಲ್ಲಿ ಶಲಭನಾಗುವನು. ಬೇಟಿ :ಕುಮಾರನೆ', ಈ ದಿವಸ ತಾಯಿಯೊಂದಿಗೆ ಸುಭದ್ರೆಯೆ ಮೊದಲಾದವ ರೊಡನೆ ಸೇರಿ, ಗಾಂಧಾರಿಯ ಪಾದವಂದನಕ್ಕಾಗಿ ದೇವಿಯು ಹೋಗಿ ದ್ದಳು, ಭೀಮ :-ನ್ಯಾಯವಾದದ್ದು. ಗುರುಗಳಿಗೆ ನಮಸ್ಕರಿಸತಕ್ಕದ್ದೆ. ಆಮೇಲೆ. ಕೇ೦ಟಿ :-ಅನಂತರದಲ್ಲಿ ಪಾದವಂದನವನ್ನು ಮಾಡಿ, ಹಿಂತಿರುಗಿ ಬರುತ್ತಿರುವ ದೇವಿಯನ್ನು ಭಾನುಮತಿಯು ನೋಡಿದಳು, ಭೀಮು :-(ಕೋಪದಿಂದ) ಏನು ? ನಮ್ಮ ಶತ್ರುವಿನ ಹೆಂಡತಿಯು ನೋಡಿದಳೇ ? ಇದು ಕೋಪಕ್ಕೆ ಸ್ಥಾನವೆ: ಸರಿ, ಆಮೇಲೆ. ಡೇಟಿ :-ಅನಂತರದಲ್ಲಿ ಭಾನುಮತಿಯು ದೇವಿಯನ್ನು ನೋಡಿ ತನ್ನ ಸಖಿಯರನ್ನ ನೋಡುತ್ತಾ ಗತ್ವದಿಂದ ಸ್ವಲ್ಪ ನಕ್ಕು ಹೇಳಿದಳು. ಭೀಮು :--- ನೋಡಿದ್ದು ಮಾತ್ರವೇ ಅಲ್ಲದೆ ಹೇಳಿಯೂ ಹೇಳಿದಳೊ ? ಅದೇನು ಹೆಳಿದ್ದು ? ಜಿ ಟಿ :-ಎಲೈ ಯಾಜ್ಞಸೇನಿಯೇ, ನಿನ್ನ ಪತಿಗಳು ಐದು ಗ್ರಾಮಗಳನ್ನು ಬೇಡು ದಾರೆ. 'ವಿಂದ ಕೇಶಗಳನ್ನು ಇನ್ನೂ ಏಕೆ ಕಟ್ಟಿಕೊಳ್ಳಲಿಲ್ಲ ' ಎಂದು ಹೇಳಿದಳು. ಭೀಮು :-ಸಹದೆ?ವನೆ, ಕೇಳಿದೆಯೊ? ಸಹದೇವ :-ಆರನೆ, ಅವಳಿಗದು ತಕ್ಕ ದ್ದಾಗಿದೆ. ಅವಳು ದುದ್ದೋಧನನ ಹೆಂಡತಿಯಲ್ಲವೆ ? ಹೆಂಗಸರ ಮನಸ್ಸು ಸಹವಾಸದೋಷದಿಂದ ಪತಿಯ ಮನಸ್ಸಿನಂತೆಯೆ? ಆಗುತ್ತದೆ. ಬಳ್ಳಿಯು ಮಧುರವಾಗಿದ್ದಾಗ್ಯೂ, ವಿಷ ವೃಕ್ಷಕ್ಕೆ ಹಬ್ಬಿದರೆ ಅದು ಮರ್ಧೆಯನ್ನ ಉಂಟುಮಾಡುವುದು, ಭೀಮು :--ಬುದ್ಧಿಮತಿಕೆ, ಅದಕ್ಕೆ ದೇವಿ ಏನು ಹೇಳಿದಳು ? ಜಿಟಿ:-ಕುಮಾರನೇ, ಸರಿಜನರು ಪಕ್ಕದಲ್ಲಿಲ್ಲದಿದ್ದರಲ್ಲವೇ ದೇವಿಯು ಹೇಳ ಬೇಕು ?